Site icon Vistara News

Ramesh Aravind Movies | ರಮೇಶ್ ಅರವಿಂದ್ ಅಭಿಮಾನಿಗಳಿಗೆ ಸಿಗಲಿದೆ ಸರ್ಪ್ರೈಸ್!

Ramesh Aravind Movies

ಸ್ಯಾಂಡಲ್​ವುಡ್ ಜಗತ್ತಿನಲ್ಲಿ ನಟ ರಮೇಶ್ ಅರವಿಂದ್ ಮಾಡಿದ ಸಾಧನೆ ಅಪಾರ. ಸಿನಿ ಪ್ರೇಕ್ಷಕರಿಗೆ ವೆರೈಟಿ ವೆರೈಟಿ ಸಿನಿಮಾ ನೀಡಿದ ಕೀರ್ತಿ ರಮೇಶ್ ಅರವಿಂದ್ ಅವರಿಗೆ ಸಲ್ಲುತ್ತದೆ. ಇಂತಹ ಲೆಜೆಂಡ್ ನಟನ ಹುಟ್ಟುಹಬ್ಬ ಸಂಭ್ರಮ ಅದ್ಧೂರಿಯಾಗಿ ನೆರವೇರಿದೆ. ಇದೇ ಸಂದರ್ಭದಲ್ಲಿ ರಮೇಶ್ ಅರವಿಂದ್ (Ramesh Aravind Movies) ಕನ್ನಡಿಗರಿಗೆ ಕೊಟ್ಟ ಅತ್ಯುತ್ತಮ ಚಿತ್ರಗಳ ಪಟ್ಟಿ ನಿಮ್ಮ ಮುಂದೆ ಇಡಲಿದೆ ‘ವಿಸ್ತಾರ ನ್ಯೂಸ್’.

ನಟ ರಮೇಶ್ ಅರವಿಂದ್ 35 ವರ್ಷಕ್ಕೂ ಹೆಚ್ಚು ಕಾಲದಿಂದ ಕನ್ನಡ ಸಿನಿಮಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ರಮೇಶ್ ಅರವಿಂದ್ ಅವರು ಅಭಿನಯಿಸಿರುವ 100ಕ್ಕೂ ಹೆಚ್ಚು ಸಿನಿಮಾಗಳು ಕನ್ನಡಿಗರು ಹಾಗೂ ಭಾರತೀಯರ ಮನರಂಜಿಸಿವೆ. ಆ ಪೈಕಿ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿ ನೀಡಲಾಗಿದೆ.

ಎವರ್​ ಗ್ರೀನ್ ಹೀರೋ..!
ಸುಂದರ ಸ್ವಪ್ನಗಳು-1986, ಮನೆಯೇ ಮಂತ್ರಾಲಯ-1986, ಸಂಗ್ರಾಮ-1987, ಮಧು ಮಾಸ-1989, ಕೆಂಪು ಗುಲಾಬಿ-1990, ಪಂಚಮ ವೇದ-1990, ಸಿಬಿಐ ವಿಜಯ್-1991, ಸಿಬಿಐ ಶಿವ-1991, ಗರುಡ ಧ್ವಜ-1991, ಶಾಂತಿ ಕ್ರಾಂತಿ-1991, ಬೆಳ್ಳಿ ಮೋಡಗಳು-1992, ವಜ್ರಾಯುಧ-1992, ಹಂತಕ-1994, ಶ್ರೀಗಂಧ-1995, ಬಾಳೊಂದು ಚದುರಂಗ-1995, ಅನುರಾಗ ಸಂಗಮ-1995, ಕರ್ಪೂರದ ಗೊಂಬೆ-1996, ನಮ್ಮೂರ ಮಂದಾರ ಹೂವೆ-1996, ಅಮೆರಿಕ ಅಮೆರಿಕ-1996, ಅಮೃತ ವರ್ಷಿಣಿ-1997, ಓ ಮಲ್ಲಿಗೆ-1997.

ಇದನ್ನೂ ಓದಿ: Ramesh Aravind Birthday | ರಮೇಶ್ ಅರವಿಂದ್ ಅಭಿಮಾನಿಗಳಿಗೆ ಸಿಗಲಿದೆ ಸರ್ಪ್ರೈಸ್!

ನಟ ರಮೇಶ್ ಅರವಿಂದ್ ಅಭಿನಯದ ಸಿನಿಮಾಗಳು.

ಸಾಲು ಸಾಲು ಹಿಟ್..!
ಉಲ್ಟಾ ಪಲ್ಟಾ-1997, ಮೇಘ ಬಂತು ಮೇಘ-1998, ತುತ್ತಾ ಮುತ್ತಾ-1998, ಯಾರೇ ನೀನು ಚೆಲುವೆ-1998, ಹೂಮಳೆ-1998, ಸಂಭ್ರಮ-1999, ಪ್ರತ್ಯರ್ಥ-1999, ಚಂದ್ರಮುಖಿ ಪ್ರಾಣಸಖಿ-1999, ಸ್ನೇಹಲೋಕ-1999, ಶ್ರೀರಸ್ತು ಶುಭಮಸ್ತು-2000, ಕುರಿಗಳು ಸಾರ್ ಕುರಿಗಳು-2001, ಕೋತಿಗಳು ಸಾರ್ ಕೋತಿಗಳು-2001, ಕತ್ತೆಗಳು ಸಾರ್ ಕತ್ತೆಗಳು-2003, ಆಪ್ತಮಿತ್ರ-2004, ರಾಮ ಶಾಮ ಭಾಮ-2005, ವಿಷ್ಣು ಸೇನಾ-2005, ಏಕದಂತ-2007, ಆಕ್ಸಿಡೆಂಟ್-2008, ಪ್ರೀತಿಯಿಂದ ರಮೇಶ್-2010, ಕಳ್ಳ ಮಳ್ಳ ಸುಳ್ಳ-2011, ಪುಷ್ಪಕ ವಿಮಾನ-2017, ಶಿವಾಜಿ ಸುರತ್ಕಲ್-2020, 100-2021.

ಇದಿಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಕನ್ನಡದ ಕಂಪು ಹರಿಸಿದ್ದರು ನಟ ರಮೇಶ್ ಅರವಿಂದ್. ಇದೀಗ ಶಿವಾಜಿ ಸುರತ್ಕಲ್-2 ಮೂಲಕ ಮತ್ತೆ ಕನ್ನಡಿಗರಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೇಳಲು ಬರ್ತಿದ್ದಾರೆ ಎವರ್​ ಗ್ರೀನ್ ಹೀರೋ. ನಟ ರಮೇಶ್ ಅವರ ಬರ್ತ್ ಡೇ ಹಿನ್ನೆಲೆ ಇಂದು ರಿಲೀಸ್ ಆದ ಶಿವಾಜಿ ಸುರತ್ಕಲ್-2 ಟೀಸರ್ ಜನರಿಗೆ ಇಷ್ಟವಾಗಿದೆ. ಇದೀಗ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇದನ್ನೂ ಓದಿ: Vishal Shaktidhama Visit | ʻಶಕ್ತಿಧಾಮʼದಲ್ಲಿ ನಟ ವಿಶಾಲ್‌: ಅಪ್ಪು ನೆನೆದು ಭಾವುಕ

Exit mobile version