Site icon Vistara News

Dolly Dhananjay | ರಮ್ಯಾ-ಧನಂಜಯ್‌ ಕಾಂಬಿನೇಷನ್‌ನ ಉತ್ತರಕಾಂಡಕ್ಕೆ ಬಾಲಿವುಡ್‌ ಸಿನಿಮಾ ಪ್ರೇರಣೆ?

Dolly Dhananjay

ಬೆಂಗಳೂರು: ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಹಾಗೂ ಡಾಲಿ ಧನಂಜಯ್‌ (Dolly Dhananjay ) ಜತೆ ಉತ್ತರಕಾಂಡ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ನೆರವೇರಿದ್ದು, ಇದೀಗ ಈ ಸಿನಿಮಾ ಬಾಲಿವುಡ್‌ ಸಿನಿಮಾ ಪ್ರೇರಣೆ ಎನ್ನಲಾಗುತ್ತಿದೆ.

ಉತ್ತರಕಾಂಡ ಚಿತ್ರ ಸೆಟ್ಟೇರಲು ಸಜ್ಜಾಗಿದೆ. ಬಾಲಿವುಡ್‌ ಚಿತ್ರ ʻʻಗ್ಯಾಂಗ್ಸ್‌ ಆಫ್‌ ವಾಸ್ಸೆಪುರ್‌ʼ ಸಿನಿಮಾದಿಂದ ಪ್ರೇರಣೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಉತ್ತರಕಾಂಡ ಸಿನಿಮಾ ಕೂಡ ಎರಡು ಚಾಪ್ಟರ್‌ಗಳಲ್ಲಿ ರಿಲೀಸ್‌ ಆಗುತ್ತಿದ್ದು, ಗ್ಯಾಂಗ್ಸ್‌ ಆಫ್‌ ವಾಸ್ಸೆಪುರ್‌ ಚಿತ್ರ ಕೂಡ ಎರಡು ಪಾರ್ಟ್‌ನಲ್ಲಿ ರಿಲೀಸ್‌ ಆಗಿತ್ತು ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಚಿತ್ರದ ನಿರ್ದೇಶಕರು ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.

ಗ್ಯಾಂಗ್ಸ್‌ ಆಫ್‌ ವಾಸ್ಸೆಪುರ್‌?
ಜಾರ್ಖಂಡ್‌ನಲ್ಲಿ ನಡೆಯುವ ಕಥೆ ಇದಾಗಿದ್ದು, ಧನ್‌ಬಾದ್‌ನಲ್ಲಿ ನಡೆಯುವ ಕಥೆಯಾಗಿದೆ. ಮೂರು ಕುಟುಂಬಗಳ ಗುದ್ದಾಟ, ಕಲ್ಲಿದ್ದಲು ಮಾಫಿಯಾ, ಇವೆಲ್ಲದರ ಚಿತ್ರಣವನ್ನು ಅನುರಾಗ್‌ ಕಶ್ಯಪ್‌ ತೆರೆ ಮೇಲೆ ತಂದಿದ್ದರು. 1941 ರಿಂದ 2009ರ ವರೆಗಿನ 68 ವರ್ಷಗಳ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಈ ಚಿತ್ರ ಎರಡು ಪಾರ್ಟ್‌ಗಳಲ್ಲಿ ಬಂದಿತ್ತು.

ಎಂಟು ವರ್ಷಗಳ ಬಳಿಕ ಮತ್ತೆ ಸಿನಿ ರಂಗಕ್ಕೆ ಮರಳಿದ್ದಾರೆ ರಮ್ಯಾ. ತಮ್ಮ ನಿರ್ಮಾಣದ ʻಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದ ಪಾತ್ರದಿಂದ ಹಿಂದೆ ಸರಿದು ರಮ್ಯಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ವಿಜಯ್‌ ಕಿರಗಂದೂರು ಹೊಂಬಾಳೆಯ ಅಂಗಸಂಸ್ಥೆಯಾಗಿರುವ ಕೆ.ಆರ್‌.ಜಿ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದ್ದು, ಭಾನುವಾರ (ನವೆಂಬರ್‌ 6) ಮುಹೂರ್ತ ನೆರವೇರಿದೆ.

ಇದನ್ನೂ ಓದಿ | Dolly Dhananjay | ಖೇಲ್ ಶುರು, ನಾಟಕ್‌ ಚಾಲು ಅಂತಿದ್ದಾರೆ ಡಾಲಿ: ʻಉತ್ತರಕಾಂಡʼ ಮುಹೂರ್ತ ಡೇಟ್‌ ಫಿಕ್ಸ್‌!

ರಮ್ಯಾ ಹೇಳಿದ್ದೇನು?
ʻʻಹತ್ತು ವರ್ಷಗಳ ನಂತರ ‘ಉತ್ತರಕಾಂಡ’ದ ಮೂಲಕ ನಾನು ಬೆಳ್ಳಿ ಪರದೆಗೆ ಹಿಂತಿರುಗುತ್ತಿದ್ದೇನೆ. ಈ ಹಿಂದೆ ‘ರತ್ನನ್ ಪ್ರಪಂಚ’ದಲ್ಲಿ ಮಾಡಲಿಕ್ಕೆ ಆಗಲಿಲ್ಲ ಎನ್ನುವ ಬೇಸರ ಇತ್ತು. ಆದರೆ ಈಗ ಅದೇ ತಂಡದ ಜತೆ ಸಿನೆಮಾ ಮಾಡುತ್ತಿರುವುದು ತುಂಬ ಸಂತೋಷದ ವಿಚಾರ. ಸ್ಕ್ರಿಪ್ಟ್ ಚಿಂದಿಯಾಗಿದೆ. ಧನು, ಕಾರ್ತಿಕ್, ಯೋಗಿ ಇತ್ತೀಚಿನ ದಿನಗಳಲ್ಲಿ ನನಗೆ ಬಹಳ ಹತ್ತಿರವಾದವರು ಹಾಗೂ ತುಂಬ ಆಪ್ತರು ಕೂಡ. ರೋಹಿತ್ ಪದಕಿ , ಅರವಿಂದ್ ಕಶ್ಯಪ್, ಚರಣ್ ರಾಜ್, ವಿಶ್ವಾಸ್, ದೀಪು ಈ ದೈತ್ಯ ಪ್ರತಿಭೆಗಳ ಜತೆ ಕೆಲಸ ಮಾಡಲು ಕಾಯುತ್ತಿದ್ದೇನೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ. ನಿಮ್ಮ ಪ್ರೀತಿಗೆ ಚಿರಋಣಿ. ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ!ʼʼ ಎಂದು ರಮ್ಯಾ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಈ ಚಿತ್ರ ಉತ್ತರ ಕರ್ನಾಟಕದ ಶೈಲಿಯಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ʻಖೇಲ್‌ ಶುರು, ನಾಟಕ್‌ ಚಾಲುʼ ಎಂದು ಟ್ಯಾಗ್‌ಲೈನ್‌ ಚಿತ್ರತಂಡ ನೀಡಿದೆ. ಚರಣ್ ರಾಜ್ ಅವರ ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್. ಕುಮಾರ್ ಅವರು ಸಂಕಲನ ಮತ್ತು ವಿಶ್ವಾಸ್ ಕಶ್ಯಪ್ ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ | Dolly Dhananjay | ರಮ್ಯಾ-ಧನಂಜಯ್‌ ಕಾಂಬಿನೇಷನ್‌ನಲ್ಲಿ ಉತ್ತರಕಾಂಡ!

Exit mobile version