ಬೆಂಗಳೂರು: ಮಹೇಶ್ ಬಾಬು (Mahesh Babu) ಅಭಿನಯದ ‘ಗುಂಟೂರು ಖಾರಂ’ ಸಿನಿಮಾದಿಂದ ಪೂಜಾ ಹೆಗ್ಡೆ ಹೊರ ಬಿದ್ದಂತೇ ಪಾತ್ರವರ್ಗಕ್ಕೆ ಹೆಚ್ಚಿನ ಬದಲಾವಣೆಗಳನ್ನು ಚಿತ್ರತಂಡ ಮಾಡಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ತಾಯಿಯ ಪಾತ್ರವನ್ನು ನಿರ್ವಹಿಸಲು ರಮ್ಯಾ ಕೃಷ್ಣನ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.
ರಮ್ಯಾ ಕೃಷ್ಣನ್ ಅವರು ವಿಜಯ್ ದೇವರಕೊಂಡ ಅವರ ಜತೆ ಲೈಗರ್ ಸಿನಿಮಾದಲ್ಲಿ ತಾಯಿಯ ಪಾತ್ರವನ್ನು ಕೊನೆಯ ಬಾರಿಗೆ ನಿರ್ವಹಿಸಿದ್ದರು. ನಿರ್ದೇಶಕ ನೆಲ್ಸನ್ ಅವರ ʻಜೈಲರ್; ಸಿನಿಮಾದಲ್ಲಿಯೂ ರಮ್ಯಾ ಕೃಷ್ಣ ನಟಿಸಲಿದ್ದಾರೆ. ಚಿತ್ರದಲ್ಲಿ ರಜಿನಿಕಾಂತ್ ಮತ್ತು ಜಾಕಿ ಶ್ರಾಫ್ ಅವರೊಂದಿಗೆ ರಮ್ಯಾ ಕೃಷ್ಣನ್ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ.
ಈ ಬದಲಾವಣೆಗಳ ಹೊರತಾಗಿ, ಚಿತ್ರದ ಹಿನ್ನೆಲೆ ಸಂಗೀತವನ್ನು ಇನ್ನು ಮುಂದೆ ಸಂಗೀತ ನಿರ್ದೇಶಕ ಥಮನ್ ನೀಡುವುದಿಲ್ಲ ಎಂದು ವದಂತಿಗಳಿವೆ. ವದಂತಿಗಳನ್ನು ನಂಬುವುದಾದರೆ, ಅನಿರುದ್ಧ್ ಶೀಘ್ರದಲ್ಲೇ ಗುಂಟೂರು ಖಾರಂ ಸೇರುವ ಸಾಧ್ಯತೆಯಿದೆ.
ದಕ್ಷಿಣ ಭಾರತದಲ್ಲಿ ರಮ್ಯಾ ಕೃಷ್ಣನ್ ಅವರಿಗೆ ತುಂಬ ಬೇಡಿಕೆ ಇದೆ. ಪೋಷಕ ಪಾತ್ರಗಳ ಮೂಲಕ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಬಾಹುಬಲಿ’ ಸಿನಿಮಾದಲ್ಲಿ ಅವರು ಪ್ರಭಾಸ್ಗೆ ತಾಯಿಯಾಗಿ ನಟಿಸಿದ್ದರು. ಅವರು ಮಾಡಿದ್ದ ರಾಜಮಾತಾ ಶಿವಗಾಮಿ ಪಾತ್ರವನ್ನು ಅಭಿಮಾನಿಗಳು ತುಂಬ ಮೆಚ್ಚಿಕೊಂಡಿದ್ದರು. ಈಗ ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬುಗೆ ತಾಯಿಯಾಗಿ ರಮ್ಯಾ ಕೃಷ್ಣನ್ ಅವರು ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ: Sreeleela Birthday: ಕನ್ನಡತಿ ಶ್ರೀಲೀಲಾಗೆ ಜನುಮದಿನ ಸಂಭ್ರಮ; ನಟಿಯ ‘ಗುಂಟೂರು ಖಾರಂ’ ಸಿನಿಮಾದ ಫಸ್ಟ್ ಲುಕ್ ಔಟ್!
ಈ ಸಿನಿಮಾದಿಂದ ನಟಿ ಪೂಜಾ ಹೆಗ್ಡೆ ಔಟ್
ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದು, ನಟಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಇತ್ತೀಚೆಗೆ ತ್ರಿವಿಕ್ರಮ್ ಶ್ರೀನಿವಾಸ್ ಜತೆಗಿನ ಭಿನ್ನಾಭಿಪ್ರಾಯಗಳಿಂದ ಸಂಗೀತ ನಿರ್ದೇಶಕ ಎಸ್. ತಮನ್ ಹೊರ ಬಂದಿದ್ದಾರೆ ಎನ್ನಲಾಗಿತ್ತು. ಆದರೀಗ ನಟಿ ಪೂಜಾ ಹೆಗ್ಡೆ ಕೂಡ ಚಿತ್ರದಿಂದ ಹೊರ ಬರುತ್ತಿದ್ದಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ.
‘ಗುಂಟೂರು ಖಾರಂ’ ಸಿನಿಮಾ ಶೂಟಿಂಗ್ ಪದೇಪದೆ ತಡವಾಗುತ್ತಿದೆ. ಚಿತ್ರಕಥೆಯಲ್ಲಿ ಬದಲಾವಣೆ ಮಾಡುತ್ತಿದ್ದು, ಸಂಕ್ರಾಂತಿಗೂ ಸಿನಿಮಾ ರಿಲೀಸ್ ಆಗುವುದಿಲ್ಲ ಎನ್ನಲಾಗುತ್ತಿದೆ. ಚಿತ್ರದಿಂದ ಪೂಜಾ ಹೆಗ್ಡೆ ಹೊರ ನಡೆದಿದ್ದಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದರ ನಡುವೆ ತ್ರಿಷಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಯೂ ಇದೆ.
ಸಂಗೀತ ನಿರ್ದೇಶಕ ಯಾರು?
ತಮನ್ ಬದಲು ತಮಿಳಿನ ಅನಿರುದ್ಧ್ ರವಿಚಂದರ್ ‘ಗುಂಟೂರು ಖಾರಂ’ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎಂದು ವರದಿಯಾಗಿದೆ.
2024ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ‘ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಎಸ್. ರಾಧಾಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ʻಅತಡುʼ ಮತ್ತು ʻಖಲೇಜಾʼದಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಿದ್ದರು.