Site icon Vistara News

Rana Daggubati : ಬಾಹುಬಲಿಗಾಗಿ 400 ಕೋಟಿ ಸಾಲ ಪಡೆದಿದ್ದರಾ ರಾಜಮೌಳಿ? ರಾಣಾ ದಗ್ಗುಬಾಟಿ ಹೇಳಿದ್ದೇನು?

Rana Daggubati

ಬೆಂಗಳೂರು: ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆದ `ರಾಣಾ ನಾಯ್ಡು’ ಸಿರೀಸ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ರಾಣಾ ದಗ್ಗುಬಾಟಿ (Rana Daggubati) ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇಂಡಿಯಾ ಟುಡೇ ಕಾನ್‌ಕ್ಲೇವ್ ಸೌತ್ 2023ರಲ್ಲಿ ಭಾಗವಹಿಸಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. 2015ರಲ್ಲಿ ಎಸ್‌ಎಸ್ ರಾಜಮೌಳಿ ಅವರ ಬಾಹುಬಲಿ ಬಿಡುಗಡೆಯಾದಾಗ, ಅದು ಆ ಕಾಲದ ಅತಿದೊಡ್ಡ ಬ್ಲಾಕಬಸ್ಟರ್‌ಗಳಲ್ಲಿ ಒಂದಾಯಿತು. ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ನಾಯಕರಾಗಿ ನಟಿಸಿದ್ದು, ಚಿತ್ರದ ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ ರೂ 600 ಕೋಟಿಗಳಿಗಿಂತ ಹೆಚ್ಚು ಗಳಿಸಿತು. ಅದರ ಮುಂದುವರಿದ ಭಾಗವು ರೂ 500 ಕೋಟಿಗಳನ್ನು ಸಂಗ್ರಹಿಸಿತು. ಆದರೆ, ಬಾಹುಬಲಿ ಚಿತ್ರಕ್ಕಾಗಿ 400 ಕೋಟಿ ರೂ.ಯನ್ನು ಶೇ.24ರಷ್ಟು ಬಡ್ಡಿಗೆ ಸಾಲ ಪಡೆದಿತ್ತಾ ಎಂಬುದರ ಬಗ್ಗೆ ರಾಣಾ ಹೇಳಿದ್ದು ಹೀಗೆ:

ಬಾಹುಬಲಿ ಚಿತ್ರಗಳನ್ನು ಮಾಡಲು ಸಾಲ ಪಡೆದ ಹಣದ ಬಗ್ಗೆ ರಾಣಾ ಈಗ ಮಾತನಾಡಿದ್ದಾರೆ. ಚಿತ್ರಕ್ಕೆ ಹೂಡಿಕೆ ಮಾಡಿದ ನೂರಾರು ಕೋಟಿಗಳನ್ನು ಬ್ಯಾಂಕ್‌ಗಳಿಂದ ಅಪಾರ ಬಡ್ಡಿದರದಲ್ಲಿ ತೆಗೆದುಕೊಳ್ಳಲಾಗಿದೆಎಂದರು. ರಾಣಾ ದಗ್ಗುಬಾಟಿ ತಮ್ಮ ಚಲನಚಿತ್ರಗಳಿಗೆ ಹಣವನ್ನು ಸಂಗ್ರಹಿಸುವಾಗ ಚಲನಚಿತ್ರ ನಿರ್ಮಾಪಕರು ಹೇಗೆ ಹೆಚ್ಚಿನ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತಾರೆ ಎಂಬುದರ ಕುರಿತು ಮಾತನಾಡುವಾಗ “ಮೂರು-ನಾಲ್ಕು ವರ್ಷಗಳ ಹಿಂದೆ ಸಿನಿಮಾಗಳಲ್ಲಿ ಹಣ ಎಲ್ಲಿಂದ ಬರುತ್ತಿತ್ತು? ಒಂದು ಚಲನಚಿತ್ರ ನಿರ್ಮಾಪಕರ ಮನೆ ಅಥವಾ ಅವರ ಆಸ್ತಿಯನ್ನು ಬ್ಯಾಂಕಿಗೆ ಒತ್ತೆಯಿಡುತ್ತಿದ್ದರು. ಆಗ 24-28ರಷ್ಟು ಬಡ್ಡಿ ನೀಡುತ್ತಿದ್ದೆವು. ಅದು ಚಲನಚಿತ್ರಗಳಲ್ಲಿನ ಎರವಲುʼʼ ಎಂದರು. “ಬಾಹುಬಲಿ ಭಾಗ 1 ಒಂದು ಸಿನಿಮಾ ಮಾಡುವಾಗ ಹೋರಾಟವಾಗಿತ್ತು. ತೆಲುಗಿನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಕ್ಕಿಂತ ಎರಡು ಪಟ್ಟು ಹೆಚ್ಚು ಖರ್ಚು ಮಾಡಿದೆವು. 180 ಕೋಟಿ ರೂ.ಯನ್ನು ಐದೂವರೆ ವರ್ಷಗಳಲ್ಲಿ 24 ಪ್ರತಿಶತ ಬಡ್ಡಿಗೆ ಸಾಲ ಪಡೆಯಲಾಗಿತ್ತು. ನಾವು ಬಾಹುಬಲಿ 2 ಅನ್ನು ಸ್ವಲ್ಪಮಟ್ಟಿಗೆ ಚಿತ್ರೀಕರಿಸಿದ್ದೇವು, ಆದರೆ ಈ ಚಿತ್ರ ಹಿಟ್‌ ಆಗದಿದ್ದರೆ ಮುಂದೆ ಏನಾಗಬಹುದು ಎಂಬುದು ನಮಗೆ ತಿಳಿದಿರಲಿಲ್ಲ, ” ಎಂದು ಅವರು ಹೇಳಿದರು.

ಇದನ್ನೂ ಓದಿ: Terrorist Killed: ಜಮ್ಮು-ಕಾಶ್ಮೀರದಲ್ಲಿ ರಾತ್ರೋರಾತ್ರಿ ಸೇನಾ ಕಾರ್ಯಾಚರಣೆ, ಒಬ್ಬ ಉಗ್ರನ ಹತ್ಯೆ

ʻಪ್ರಾಜೆಕ್ಟ್ ಕೆʼ ಸಿನಿಮಾ ಹೊಗಳಿದ ರಾಣಾ

ಈ ವೇಳೆ ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಪ್ರಭಾಸ್ ಅವರ ʻಪ್ರಾಜೆಕ್ಟ್ ಕೆʼ ಸಿನಿಮಾ (Project K) ಬಗ್ಗೆ ಹೊಗಳಿದರು. ಈ ಸಿನಿಮಾಗಾಗಿ ಇಡೀ ತೆಲುಗು ಚಲನಚಿತ್ರ ಎಷ್ಟು ಉತ್ಸುಕರಾಗಿದ್ದಾರೆ ಎಂಬುದರ ಕುರಿತು ಮಾತನಾಡಿದರು. ಈ ಸಿನಿಮಾ ಆರ್‌ಆರ್‌ಆರ್‌ ಮತ್ತು ಬಾಹುಬಲಿಯಂತಹ ಸಿನಿಮಾಗಳಿಗೆ ಸಾಧ್ಯವಾಗದೇ ಇರುವ ಬೌಂಡರಿಗಳನ್ನು ಮುರಿಯಲು ಹೊರಟಿದೆ ಎಂದರು.

“ನಾವು ಸಿನಿಮಾವನ್ನು ಆಚರಿಸುತ್ತೇವೆ. ಪ್ರಭಾಸ್, ಅಮಿತಾಭ್‌ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಜತೆ ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾ, ತೆಲುಗಿನಲ್ಲಿ ನಾವು ನಿಜವಾಗಿಯೂ ಎದುರು ನೋಡುತ್ತಿರುವ ಚಿತ್ರವಿದು. ಈ ಸಿನಿಮಾ ಆರ್‌ಆರ್‌ಆರ್‌ ಮತ್ತು ಬಾಹುಬಲಿಯಂತಹ ಸಿನಿಮಾಗಳಿಗೆ ಸಾಧ್ಯವಾಗದೇ ಇರುವ ಬೌಂಡರಿಗಳನ್ನು ಮುರಿಯಲು ಹೊರಟಿದೆʼʼ ಎಂದರು.

Exit mobile version