Site icon Vistara News

Rana Daggubati: ರಾಣಾ ಹೇಳಿರುವ ಮಾತಿನಿಂದ ʻಪ್ರಾಜೆಕ್ಟ್ ಕೆʼ ಸಿನಿಮಾ ಮೇಲಿನ ನಂಬಿಕೆ ಹೆಚ್ಚಾಯ್ತು ಅಂದ್ರು ನೆಟ್ಟಿಗರು!

Rana Daggubati says Project K film

]

ಬೆಂಗಳೂರು: ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆದ `ರಾಣಾ ನಾಯ್ಡು’ ಸಿರೀಸ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ರಾಣಾ ದಗ್ಗುಬಾಟಿ (Rana Daggubati) ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಪ್ರಭಾಸ್ ಅವರ ʻಪ್ರಾಜೆಕ್ಟ್ ಕೆʼ ಸಿನಿಮಾ (Project K) ಬಗ್ಗೆ ಹೊಗಳಿದರು. ಈ ಸಿನಿಮಾಗಾಗಿ ಇಡೀ ತೆಲುಗು ಚಲನಚಿತ್ರ ಎಷ್ಟು ಉತ್ಸುಕರಾಗಿದ್ದಾರೆ ಎಂಬುದರ ಕುರಿತು ಮಾತನಾಡಿದರು. ಈ ಸಿನಿಮಾ ಆರ್‌ಆರ್‌ಆರ್‌ ಮತ್ತು ಬಾಹುಬಲಿಯಂತಹ ಸಿನಿಮಾಗಳಿಗೆ ಸಾಧ್ಯವಾಗದೇ ಇರುವ ಬೌಂಡರಿಗಳನ್ನು ಮುರಿಯಲು ಹೊರಟಿದೆ ಎಂದರು.

ಪ್ರಾಜೆಕ್ಟ್ ಕೆ ಸಿನಿಮಾ ಸೈನ್ಸ್‌ ಫಿಕ್ಷನ್‌ ಸಿನಿಮಾ ಆಗಿರಲಿದೆ ಎನ್ನಲಾಗಿದೆ. ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರ ಮೊದಲ ಸಹಯೋಗ. ಚಿತ್ರದಲ್ಲಿ ಅಮಿತಾಭ್‌ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಣಾ ಇತ್ತೀಚೆಗೆ ಇಂಡಿಯಾ ಟುಡೇ ಕಾನ್‌ಕ್ಲೇವ್ ಸೌತ್ 2023ರಲ್ಲಿ ಭಾಗವಹಿಸಿದ್ದರು. ದಿ ರೈಸ್ ಆಫ್ ದಿ ಪ್ಯಾನ್ ಇಂಡಿಯಾ ಸ್ಟಾರ್: ಭಾಷೆ ಮತ್ತು ಭೌಗೋಳಿಕತೆಯ ಗಡಿಗಳನ್ನು ಮುರಿಯುವುದು ಹೇಗೆ ಎಂಬ ವಿಚಾರದ ಬಗ್ಗೆ ನಟ ಮಾತನಾಡಿದರು.

“ನಾವು ಸಿನಿಮಾವನ್ನು ಆಚರಿಸುತ್ತೇವೆ. ಪ್ರಭಾಸ್, ಅಮಿತಾಭ್‌ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಜತೆ ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾ, ತೆಲುಗಿನಲ್ಲಿ ನಾವು ನಿಜವಾಗಿಯೂ ಎದುರು ನೋಡುತ್ತಿರುವ ಚಿತ್ರವಿದು. ಈ ಸಿನಿಮಾ ಆರ್‌ಆರ್‌ಆರ್‌ ಮತ್ತು ಬಾಹುಬಲಿಯಂತಹ ಸಿನಿಮಾಗಳಿಗೆ ಸಾಧ್ಯವಾಗದೇ ಇರುವ ಬೌಂಡರಿಗಳನ್ನು ಮುರಿಯಲು ಹೊರಟಿದೆʼʼ ಎಂದರು.

ಇದನ್ನೂ ಓದಿ: Deepika Padukone: ʻಪ್ರಾಜೆಕ್ಟ್ ಕೆʼ ಚಿತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆದರಾ ದೀಪಿಕಾ ಪಡುಕೋಣೆ?

ರಾಣಾ ಹೇಳಿದ್ದೇನು?

ರಾಣಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹಲವಾರು ಜನರು ಟ್ವಿಟರ್‌ನಲ್ಲಿ ʻ“ನಿಮ್ಮ ನಿರೀಕ್ಷೆಗಳನ್ನು ತುಂಬಾ ಎತ್ತರದಲ್ಲಿದೆ. ಪ್ರಾಜೆಕ್ಟ್ ಕೆ ಹಿಂದೆಂದೂ ನೋಡಿರದ ಚಲನಚಿತ್ರವಾಗಿದೆ, ಇದು ಭಾರತದಿಂದ ಮಾತ್ರವಲ್ಲದೆ ಹಾಲಿವುಡ್‌ ಸಿನಿಮಾಗಳಿಗೂ ಕಾಂಪಿಟೇಶನ್‌ ನೀಡುವ ಸಾಮರ್ಥ್ಯವನ್ನು ಹೊಂದಿದೆʼʼಎಂದರೆ ಮತ್ತೊಬ್ಬರು ʻʻರಾಣಾ ಅವರು ಹೇಳಿದ್ದನ್ನು ಕಂಡು ಪ್ರಾಜೆಕ್ಟ್ ಕೆ ಸಿನಿಮಾ ಮೇಲಿನ ನನ್ನ ನಂಬಿಕೆಯು ಗಗನಕ್ಕೇರಿತು.”ಎಂದು ಕಮೆಂಟ್‌ ಮಾಡಿದ್ದಾರೆ.

ಪ್ರಾಜೆಕ್ಟ್ ಕೆ ಚಿತ್ರದಲ್ಲಿ ನಿರ್ಮಾಪಕ ಅಶ್ವಿನಿ ದತ್ ಅವರು ಕಮಲ್‌ ಹಾಸ್‌ ಅವರಿಗೆ ನಟಿಸಲು 150 ಕೋಟಿ ರೂ. ಸಂಭಾವನೆ ನೀಡಿದ್ದಾರೆ ಎಂತಲೂ ವರದಿಯಾಗಿದೆ.

Exit mobile version