ಬೆಂಗಳೂರು: ಸೋದರ ಸಂಬಂಧಿಗಳಾದ ರಣಬೀರ್ ಕಪೂರ್ ಮತ್ತು ಕರೀನಾ ಕಪೂರ್ (Kareena Kapoor) ಬಹಳ ದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ರಣಬೀರ್ ಹಾಗೂ ಕರೀನಾ ಚಾಟ್ ಶೋ ʻವಾಟ್ ವುಮೆನ್ ವಾಂಟ್ʼನಲ್ಲಿ (What Women Want) ಮುಂದಿನ ಅತಿಥಿಯಾಗಲಿದ್ದಾರೆ. ಸಂಚಿಕೆಯ ಚಿತ್ರೀಕರಣಕ್ಕಾಗಿ ಮೆಹಬೂಬ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡರು. ಮಾಧ್ಯಮಗಳಿಗೆ ಒಟ್ಟಿಗೆ ಪೋಸ್ ನೀಡಿರುವ ಫೋಟೊ ಹಾಗೂ ವಿಡಿಯೊ ವೈರಲ್ ಆಗಿದೆ.
ಕರೀನಾ ಕಪೂರ್ ಕೆಂಪು ಹಾಲ್ಟರ್ ಟಾಪ್ ಮತ್ತು ಪ್ಯಾಂಟ್‌ನಲ್ಲಿ ಗ್ಲ್ಯಾಮರಸ್ ಆಗಿ ಕಂಡಿದ್ದಾರೆ. ರಣಬೀರ್ ಡೆನಿಮ್ ಶರ್ಟ್ ಮತ್ತು ಮ್ಯಾಚಿಂಗ್ ಜೀನ್ಸ್‌ನಲ್ಲಿ ಪೋಸ್ ನೀಡಿದರು. ಹಲವರು ಕರೀನಾ ಅವರ ಲುಕ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೊಬ್ಬರು ʻʻಕರೀನಾ ಅವರು ಫಿಟೆಸ್ಟ್ ಆಗಿ, ಸ್ಟನ್ನಿಂಗ್ ಲುಕ್‌ನಲ್ಲಿ ಕಾಣಿಸುತ್ತಾರೆʼʼಎಂದು ಕಮೆಂಟ್ ಮಾಡಿದ್ದಾರೆ. ಕ್ಯಾಮೆರಾ ಪೋಸ್ ನೀಡುವ ಮೊದಲು ಮೆಹಬೂಬ್ ಸ್ಟುಡಿಯೋಗೆ ಕ್ಯಾಶುಯಲ್‌ಗಳಲ್ಲಿ ಆಗಮಿಸಿದರು. ಕರೀನಾ ಬಿಳಿ ಟೀ ಶರ್ಟ್ ಮತ್ತು ನೀಲಿ ಬಣ್ಣದ ಡೆನಿಮ್‌ಗಳಲ್ಲಿದ್ದರು ಮತ್ತು ರಣಬೀರ್ ಬಿಳಿ ಟೀ ಶರ್ಟ್, ಕಪ್ಪು ಟ್ರ್ಯಾಕ್ ಪ್ಯಾಂಟ್‌ನಲ್ಲಿ ಆಗಮಿಸಿದ್ದರು.
ಕರೀನಾ ವಾಟ್ ವುಮೆನ್ ವಾಂಟ್ (What Women Want) ನಾಲ್ಕನೇ ಸೀಸನ್ ಚಿತ್ರೀಕರಣ ಮಾಡುತ್ತಿದ್ದಾರೆ. ಇತ್ತೀಚೆಗೆ, ಅವರು ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಮುಂಬರುವ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ರಣಬೀರ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ʻತೂ ಜೂಟಿ ಮೈನ್ ಮಕ್ಕರ್ʼ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರು ʻಲವ್ ರಂಜನ್ʼ ಚಿತ್ರದಲ್ಲಿ ಶ್ರದ್ಧಾ ಕಪೂರ್ ಜತೆ ನಟಿಸಿದ್ದಾರೆ. ಇದು ಮಾರ್ಚ್ 8 ರಂದು ಬಿಡುಗಡೆಯಾಗಲಿದೆ.