Site icon Vistara News

Ranbir Kapoor: ಬುರ್ಜ್ ಖಲೀಫಾದಲ್ಲಿ ರಣಬೀರ್ ಕಪೂರ್ ಅಭಿನಯದ ʻಅನಿಮಲ್‌ʼ ಪ್ರಿವ್ಯೂ!

Ranbir Kapoor Animal preview up Burj Khalifa

ಬೆಂಗಳೂರು: ರಣಬೀರ್ ಕಪೂರ್ ಅಭಿಮಾನಿಗಳು ಅವರ ಮುಂಬರುವ ಚಿತ್ರ ʻಅನಿಮಲ್‌ʼಗೆ ಈಗಾಗಲೇ ಕೌಂಟ್‌ಡೌನ್ ಪ್ರಾರಂಭಿಸಿದ್ದಾರೆ. ಸಂದೀಪ್ ರೆಡ್ಡಿ ವಾಂಗ ನಿರ್ದೇಶನದ ಚಿತ್ರ ಡಿಸೆಂಬರ್ 1ರಂದು ಥಿಯೇಟರ್‌ಗೆ ಬರಲಿದೆ. ಬಿಡುಗಡೆಗೆ ಮುಂಚಿತವಾಗಿ, ತಯಾರಕರು ಅಭಿಮಾನಿಗಳಿಗೆ ಸರ್‌ಪ್ರೈಸ್‌ವೊಂದನ್ನು ನೀಡಿದರು. ಬಾಬಿ ಡಿಯೋಲ್ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ಜತೆಗೆ ರಣಬೀರ್ ಕಪೂರ್ ದುಬೈಗೆ ತಲುಪಿದ್ದಾರೆ. ಅಲ್ಲಿ ಅವರು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಚಿತ್ರದ 60 ಸೆಕೆಂಡುಗಳ ಸಿನಿಮಾದ ಪ್ರಿವ್ಯೂ ವೀಕ್ಷಿಸಿದರು.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ಡಿಸೆಂಬರ್ 1ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಕೂಡ ಅಂದೇ ದಿನ ಬಿಡುಗಡೆಯಾಗುತ್ತಿದ್ದು, ಇವರೆಡೂ ಸಿನಿಮಾಗಳು ಕ್ಲ್ಯಾಶ್‌ ಆಗುತ್ತಿವೆ.

ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರದ ಟ್ರೈಲರ್‌ ಐಕಾನಿಕ್ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲು ನಿರ್ಮಾಪಕ ಭೂಷಣ್ ಕುಮಾರ್ ಜತೆಗೆ ಬಾಬಿ ಡಿಯೋಲ್ ಮತ್ತು ರಣಬೀರ್ ಕಪೂರ್ ಸೇರಿದಂತೆ ಚಿತ್ರದ ತಾರಾಗಣವು ದುಬೈಗೆ ಹಾರಿತ್ತು. ಇದೀಗ ಚಿತ್ರತಂಡ ಪ್ರಿವ್ಯೂ ವೀಕ್ಷಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ‘ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್‌ ಚಿತ್ರವಾಗಿದೆ.

ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ ನಟನೆಯ ಅನಿಮಲ್‌ ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಚಿತ್ರತಂಡ ʼಹುವಾ ಮೈನ್‌ʼ ಹಾಡನ್ನು (Animal song Hua Main) ಕೂಡ ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ. ತೆಲುಗಿನ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಡಿಸೆಂಬರ್‌ 1ರಂದು ತೆರೆಗೆ ಬರಲಿದೆ. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Ranbir Kapoor: ಅನಿಮಲ್‌ ʻಸತ್ರಂಗʼ ಸಾಂಗ್‌ ಔಟ್‌; ರಣಬೀರ್-ರಶ್ಮಿಕಾ ಲಿಪ್ ಲಾಕ್!

ಸ್ಯಾಮ್ ಬಹದ್ದೂರ್

ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ. ಸ್ಯಾಮ್‌ ಮಾಣೆಕ್‌ ಶಾ ಪಾತ್ರವನ್ನೇ ವಿಕ್ಕಿ ನಿರ್ವಹಿಸಿದ್ದಾರೆ. ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

Exit mobile version