Site icon Vistara News

Animal Movie: 150 ಕೋಣೆಯ ಅರಮನೆಯಲ್ಲಿ ʻಅನಿಮಲ್‌ʼ ಶೂಟಿಂಗ್‌; ಇದು ಯಾರ ಬಂಗಲೆ ನೋಡಿ!

Ranbir Kapoor Animal was shot at Saif Ali Khan’s 800 crore Pataudi Palace

ಬೆಂಗಳೂರು: ರಣಬೀರ್ ಕಪೂರ್ ಅವರ ʻಅನಿಮಲ್‌ʼ ಸಿನಿಮಾ (Animal Movie) ಆರು ದಿನಗಳಲ್ಲಿ ವಿಶ್ವಾದ್ಯಂತ 500 ಕೋಟಿ ರೂ. ಗಡಿ ದಾಟಲು ಸಿದ್ಧವಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಚಿತ್ರವು ಈಗ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 425 ಕೋಟಿ ರೂ. ಗಳಿಸಿದೆ. ಇದರ ಜತೆಗೆ ಸಾಕಷ್ಟು ಚರ್ಚೆಯಲ್ಲಿರುವುದು ಸಿನಿಮಾದ ಶೂಟಿಂಗ್‌ ಸ್ಪಾಟ್‌. ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ ಇಂಗ್ಲೆಂಡ್, ಸ್ಕಾಟ್ಲೆಂಡ್, ಮುಂಬೈ, ಗುರುಗ್ರಾಮ, ದೆಹಲಿ ಮತ್ತು ಮನಾಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಶೂಟಿಂಗ್‌ ಆಗಿದೆ. ಇನ್ನು ಬಹುಮುಖ್ಯವಾಗಿ ಚಿತ್ರದಲ್ಲಿ ಚಿತ್ರಿಸಲಾದ ಐಷಾರಾಮಿ ಸಿಂಗ್ ಕುಟುಂಬದ ನಿವಾಸ ಶೂಟಿಂಗ್‌ ಆಗಿದ್ದು, ಬಾಲಿವುಡ್ ನಟ ಸೈಫ್ ಅಲಿ ಖಾನ್ ಒಡೆತನದ 800 ಕೋಟಿ ರೂ. ಮೌಲ್ಯದ ಪಟೌಡಿ ಅರಮನೆಯಲ್ಲಿ ಎಂದರೆ ನೀವು ನಂಬಲೇ ಬೇಕು!

1935ರಲ್ಲಿ ಪಟೌಡಿಯ ಕೊನೆಯ ಆಡಳಿತದ ನವಾಬ್ ಇಫ್ತಿಕರ್ ಅಲಿ ಖಾನ್ ನಿರ್ಮಿಸಿದ ಅರಮನೆಯು, ಸೈಫ್ ಅಲಿ ಖಾನ್ ಅವರ ತಂದೆಯ ಮರಣದ ನಂತರ 2014ರಲ್ಲಿ ಅವರ ಕೈಗೆ ಹಸ್ತಾಂತರವಾಯಿತು. ಹರಿಯಾಣದ ಪಟೌಡಿಯಲ್ಲಿ ಇರುವ ಈ ಪಟೌಡಿ ಅರಮನೆಯು 10 ಎಕರೆಗಳಷ್ಟು ವಿಸ್ತಾರವಾಗಿದೆ. ಮಲಗುವ ಕೋಣೆಗಳು, ಡ್ರೆಸ್ಸಿಂಗ್‌ ರೂಮ್‌ಗಳು, ಒಳಗೊಂಡಂತೆ 150ಕ್ಕೂ ಹೆಚ್ಚು ರೂಮ್‌ಗಳನ್ನು ಹೊಂದಿದೆ. ಹೊರಾಂಗಣದಲ್ಲಿ ಈಜುಕೊಳ, ಕೃಷಿ ಪ್ರದೇಶ, ಒಳಗೊಂಡಿದೆ. ಮೂಲತಃ ಆಸ್ಟ್ರಿಯನ್ ವಾಸ್ತುಶಿಲ್ಪಿ ಕಾರ್ಲ್ ಮೊಲ್ಟ್ಜ್ ವಾನ್ ಹೈಂಜ್ ಅವರ ಸಹಯೋಗದೊಂದಿಗೆ ಬ್ರಿಟಿಷ್ ವಾಸ್ತುಶಿಲ್ಪಿ ರಾಬರ್ಟ್ ಟಾರ್ ರಸ್ಸೆಲ್ ವಿನ್ಯಾಸಗೊಳಿಸಿದ್ದಾರೆ. ಈ ಅರಮನೆಯು ಭಾರತೀಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ಶೈಲಿಗಳ ಮಿಶ್ರಣವನ್ನು ಹೊಂದಿದೆ. ಸೈಫ್ ಅಲಿ ಖಾನ್ ಮಾಲೀಕತ್ವವನ್ನು ವಹಿಸಿಕೊಂಡ ನಂತರ ಒಳಾಂಗಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆಯಂತೆ. ಪಟೌಡಿ ಅರಮನೆಯಲ್ಲಿ ಈ ಅನಿಮಲ್‌ಗೂ ಮುಂಚೆ ಇತರ ಬಾಲಿವುಡ್ ಸಿನಿಮಾಗಳು ಶೂಟಿಂಗ್‌ ಆಗಿತ್ತು. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ನಟಿಸಿದ ʻವೀರ್ ಝರಾʼ ಮತ್ತು ʻರಂಗ್ ದೇ ಬಸಂತಿʼ ಕೂಡ ಸೇರಿವೆ. ಪಟೌಡಿ ಅರಮನೆಯಲ್ಲಿ ಸೈಫ್‌ ಮತ್ತು ಕರೀನಾ ಕಪೂರ್ ಕುಟುಂಬದ ಕಾರ್ಯಕ್ರಮಗಳೂ ನಡೆದಿವೆ.

ಇದನ್ನೂ ಓದಿ: Animal Box Office: 200 ಕೋಟಿ ರೂ. ಗಡಿ ದಾಟಿದ ʻಅನಿಮಲ್‌ʼ!

ಈಗಾಗಲೇ ಅನಿಮಲ್‌ ಸಿನಿಮಾ ಕಲೆಕ್ಷನ್‌ನಲ್ಲಿ 500 ಕೋಟಿ ರೂ. ಗಡಿ ದಾಟುವಲ್ಲಿ ಇದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿ ಉತ್ತರ ಅಮೆರಿಕಾದಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿರುವ ಸಿನಿಮಾದಲ್ಲಿ ಅನಿಮಲ್‌ 5ನೇ ಭಾರತೀಯ ಚಲನಚಿತ್ರವಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಪ್ರಕಾರ. ನಾಲ್ಕು ದಿನಗಳಲ್ಲಿ ಜಾಗತಿಕವಾಗಿ 520.79 ಕೋಟಿ ಗಳಿಸಿದ ಈ ವರ್ಷದ ಅತಿ ದೊಡ್ಡ ಹಿಟ್ ಸಿನಿಮಾ ʻಜವಾನ್‌ʼಗೆ ಹೋಲಿಸಿದರೆ, ಅನಿಮಲ್ ಇನ್ನೂ ಹಿಂದುಳಿದಿದೆ. ತರಣ್ ಆದರ್ಶ್ ಪ್ರಕಾರ ಪಠಾಣ್ ನಾಲ್ಕು ದಿನಗಳಲ್ಲಿ 429 ಕೋಟಿ ರೂ. ಗಳಿಕೆ ಕಂಡಿತ್ತು.

ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿತ್ತು.

Exit mobile version