ಬೆಂಗಳೂರು: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ನಟನೆಯ ʻಅನಿಮಲ್ʼ ಚಿತ್ರ (Animal Box Office) ಯಶಸ್ಸಿನ ಉತ್ತುಂಗದಲ್ಲಿದೆ. ಸಿನಿಮಾ ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದೆ. ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿಯುತ್ತಿದೆ. ಅಂದಹಾಗೆ, ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾ ಎರಡನೇ ಭಾಗದಲ್ಲಿ ಬರಲಿದೆ ಎಂಬ ವದಂತಿಗಳು ಶುರುವಾಗಿವೆ. ಅಭಿಮಾನಿಗಳು ಈ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ.
ಇದೀಗ ವರದಿಗಳ ಪ್ರಕಾರ ಮುಂದಿನ ಭಾಗ ಇನ್ನೂ ಹೆಚ್ಚು ಹಿಂಸಾತ್ಮಕ ಇರಲಿದೆ ಅಂತೆ. ಮುಂದಿನ ಭಾಗಕ್ಕೆ ʻಅನಿಮಲ್ ಪಾರ್ಕ್ʼ ಎಂದು ಹೆಸರಿಡಬಹುದು ಎಂಬ ವರದಿ ಕೂಡ ಇದೆ. ಸಿನಿಮಾ ಆರಂಭಿಕ ಅಂದಾಜಿನ ಪ್ರಕಾರ ಭಾರತದಲ್ಲಿ ಒಟ್ಟೂ ಎಲ್ಲಾ ಭಾಷೆಗಳಲ್ಲಿ 61 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಬೆಲ್ಟ್‌ಗಳಲ್ಲಿ 50.50 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ಚಿತ್ರದ ತೆಲುಗು ಆವೃತ್ತಿಯೂ 10 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಅನಿಮಲ್ ಸಿನಿಮಾ ಮೂಲಕ ರಣಬೀರ್ ಕಪೂರ್ ಮತ್ತೊಮ್ಮೆ ದೊಡ್ಡ ಓಪನರ್ ಆಗಿ ಹೊರಹೊಮ್ಮಿದ್ದಾರೆ. ಬ್ರಹ್ಮಾಸ್ತ್ರ ಮೊದಲ ಭಾಗದ ಮೊದಲನೇ ದಿನ ಆರಂಭಿಕ ದಿನದಲ್ಲಿ 36 ಕೋಟಿ ಗಳಿಸಿತ್ತು.
ಇದನ್ನೂ ಓದಿ: Animal Twitter Review: ರಣಬೀರ್ ಕಪೂರ್ ನಟನೆ ‘ಖತರ್ನಾಕ್’; ಅನಿಮಲ್ ʻಬ್ಲಾಕ್‌ಬಸ್ಟರ್ʼ ಗ್ಯಾರಂಟಿ!
Nothing just Ranbir Kapoor enjoying #AnimalSuccess #RanbirKapoor𓃵
— Romi Ideal ❤️ Memecoin (@IdealRomi) December 2, 2023
you should to watch this movie to your nearest cinema hall
#Coinbase #Melodi $JUP #Target #SalaarTrailer #GlobalSwasthyam #Animal @Portalcoin $PORTAL #PORTAL pic.twitter.com/aPXi4aqNoT
#Animal was such an adrenaline rush not experienced in cinema for a longtime It's during moments like these that one truly grasps the essence of what cinema can achieve #RanbirKapoor's solidifies his position as #GOAT. He manages to make a 3 1/2-hr long movie thoroughly engaging pic.twitter.com/mCei8DWnSZ
— Anil Jha (@ThisIsAnilJha) December 2, 2023
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಾಯಕಿಯಾಗಿದ್ದಾರೆ. ಬಾಲಿವುಡ್ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್ ನಟನೆಯ ಅನಿಮಲ್ ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ತೆಲುಗಿನ ʼಅರ್ಜುನ್ ರೆಡ್ಡಿʼ, ಹಿಂದಿಯ ʼಕಬೀರ್ ಸಿಂಗ್ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್ ರೆಡ್ಡಿ ನಿರ್ದೇಶನವಿದೆ. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿದೆ.