ಬೆಂಗಳೂರು : ರಣಬೀರ್ ಕಪೂರ್ (Ranbir Kapoor ) ಮತ್ತು ಆಲಿಯಾ ಭಟ್ ದಂಪತಿ ನವೆಂಬರ್ 6ರಂದು ಮೊದಲ ಮಗುವನ್ನು ಸ್ವಾಗತಿಸಿದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ಅಲಿಯಾ ಭಟ್ ಮಗಳಿಗೆ ʻರಾಹಾʼ ಎಂದು ನಾಮಕರಣ ಮಾಡಿದ್ದರು. ಇತ್ತೀಚೆಗೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದ ನಟ ರಣಬೀರ್, ಪೋಷಕರಾಗಿ ತಮ್ಮ ಅಭದ್ರತೆಯ ಕುರಿತು ಹೇಳಿಕೆ ಒಂದನ್ನು ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಣಬೀರ್ ಮಾತನಾಡಿ, “ಒಮ್ಮೊಮ್ಮೆ ನಾನು ಯಾಕೆ ಇಷ್ಟು ಸಮಯ ತೆಗೆದುಕೊಂಡೆ ಎಂದು ಆಶ್ಚರ್ಯ ಪಡುತ್ತೇನೆ. ನನ್ನ ದೊಡ್ಡ ಅಭದ್ರತೆ ಎಂದರೆ ನನ್ನ ಮಗಳಿಗೆ 20 ಅಥವಾ 21 ವರ್ಷವಾದಾಗ, ನನಗೆ 60 ವರ್ಷ ವಯಸ್ಸಾಗಿರುತ್ತದೆ. ನಾನು ಅವಳೊಂದಿಗೆ ಫುಟ್ಬಾಲ್ ಆಡಲು, ಓಡಲು ಸಾಧ್ಯವಾಗುತ್ತದೆಯೇ? ʼʼಎಂದು ತಮಗಿರುವ ಅಭದ್ರತೆಯ ಕುರಿತು ಹೇಳಿಕೆ ನೀಡಿದ್ದಾರೆ.
ರಣಬೀರ್ ತಮ್ಮ ದಿನನಿತ್ಯದ ಕೆಲಸದ ಕುರಿತು ಮಾತನಾಡಿ ʻʻ”ನಾನು ಹೆಚ್ಚು ಕೆಲಸ ಮಾಡುವುದಿಲ್ಲ, ಸುಮಾರು 180-200 ದಿನಗಳಿಗೂ ಹೆಚ್ಚು ಆಲಿಯಾ ಕೆಲಸ ಮಾಡುತ್ತಾರೆ ಮತ್ತು ಹೆಚ್ಚು ಕಾರ್ಯನಿರತವಾಗಿದ್ದಾರೆ. ಆದರೆ ನಾವಿಬ್ಬರೂ ಬ್ಯಾಲೆನ್ಸ್ಡ್ ಆಗಿದ್ದೇವೆ. ಆಲಿಯಾ ಕೆಲಸ ಮಾಡುತ್ತಿರುವಾಗ ಸ್ವಲ್ಪ ಬ್ರೇಕ್ ತೆಗೆದುಕೊಳ್ಳುತ್ತೇನೆ” ಎಂದರು.
ಇದನ್ನೂ ಓದಿ | Alia Bhatt | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಆಲಿಯಾ ಭಟ್
ಫುಟ್ಬಾಲ್ ಜೆರ್ಸಿಯನ್ನೂ ಹೊಂದಿದ್ದಾರೆ ರಾಹಾ!
ಈ ಹಿಂದೆ ದಂಪತಿ ಮಗಳು ರಾಹಾ ಹೆಸರಿನ ಅರ್ಥದ ಕುರಿತು ಪೋಸ್ಟ್ ಹಂಚಿಕೊಂಡಿದ್ದರು. ʻʻರಾಹಾ ಎಂದರೆ ಅದರ ಮೂಲ ಅರ್ಥ ದೈವಿಕ ಮಾರ್ಗ ಎಂದು. ಸ್ವಾಹಿಲಿ ಭಾಷೆಯಲ್ಲಿ ಸಂತೋಷ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ಕುಲ ಎಂಬ ಅರ್ಥವಿದೆ. ಬಾಂಗ್ಲಾದಲ್ಲಿ ವಿಶ್ರಾಂತಿ, ಆರಾಮ ಹಾಗೂ ನಿರಾಳ ಎಂಬ ಅರ್ಥವಿದೆ. ಅರೇಬಿಕ್‌ನಲ್ಲಿ ಸಂತೋಷ, ಸ್ವಾತಂತ್ರ್ಯ ಹಾಗೂ ಆನಂದ ಎಂಬ ಅರ್ಥವಿದೆ. ಇವೆಲ್ಲವೂ ನಮ್ಮ ಪುತ್ರಿಗೆ ಅನ್ವರ್ಥ. ನಾವು ಅವಳನ್ನು ಹೊಂದಿದ ಮೊದಲ ದಿನದಿಂದಲೂ ಈ ಮೇಲಿನ ಎಲ್ಲವನ್ನೂ ಅನುಭವಿಸಿದ್ದೇವೆ. ನಮ್ಮ ಕುಟುಂಬಕ್ಕೆ ಬಂದಿರುವುದಕ್ಕೆ ಧನ್ಯವಾದಗಳು ರಾಹ, ನಿನ್ನಿಂದಾಗಿ ನಮ್ಮ ಜೀವನ ಈಗಷ್ಟೇ ಶುರುವಾಗಿದೆ ಎಂದು ಅಂದುಕೊಳ್ಳುತ್ತೇನೆ,” ಎಂದು ಅಲಿಯಾ ಭಟ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.
ರಣಬೀರ್ ಕಪೂರ್ ದೊಡ್ಡ ಫುಟ್ಬಾಲ್ ಅಭಿಮಾನಿಯಾಗಿರುವುದರಿಂದ ರಾಹಾ ಈಗಾಗಲೇ ಫುಟ್ಬಾಲ್ ಜೆರ್ಸಿಯನ್ನೂ ಹೊಂದಿದ್ದಾಳೆ. ಕಪೂರ್ ಕುಟುಂಬದಲ್ಲಿ ಇಂಗ್ಲಿಷ್‌ನ ‘ಆರ್’ ನಿಂದ ಪ್ರಾರಂಭವಾಗುವ ಹೆಸರುಗಳ ಪರಂಪರೆಯಿದೆ. ರಾಜ್ ಕಪೂರ್, ರಣಧೀರ್ ಕಪೂರ್, ರಿಷಿ ಕಪೂರ್, ರಣಬೀರ್ ಕಪೂರ್ ಮತ್ತು ಅವರ ಸಹೋದರಿ ರಿದ್ಧಿಮಾ ಕಪೂರ್ ಸಹಾನಿ.
ಇದನ್ನೂ ಓದಿ | Brahmastra: ಕನ್ನಡದಲ್ಲೇ ಟ್ವೀಟ್ ಮಾಡಿದ ಆಲಿಯಾ : ಶಿವನ ಅವತಾರದಲ್ಲಿ ರಣಬೀರ್ ಕಪೂರ್