ಬೆಂಗಳೂರು: ಬಾಲಿವುಡ್ ಬ್ಯೂಟಿಫುಲ್ ಜೋಡಿ ಅಂದರೆ ಅದು ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ ಎಂತಲೇ ಹೇಳಬಹುದು. ಇದೀಗ ರಣಬೀರ್ ಅವರು ಆಲಿಯಾ ಭಟ್ ಅವರಿಗೆ ಪ್ರಪೋಸ್ ಮಾಡಿರುವ ಫೋಟೊ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೊ ಕುರಿತು ಚರ್ಚೆಗಳು ಕೂಡ ನಡೆಯುತ್ತಿವೆ.
ಇದಕ್ಕೂ ಮೊದಲು, ಕರಣ್ ಜೋಹರ್ ಅವರ ʻ ಕಾಫಿ ವಿತ್ ಕರಣ್ 7ʼನಲ್ಲಿ ಕಾಣಿಸಿಕೊಂಡಾಗ ಆಲಿಯಾ ಭಟ್ ಈ ಫೋಟೊ ಕುರಿತು ಮಾತನಾಡಿದ್ದರು. ʻʻಇದು ತನಗೆ ವಿಶೇಷ ಮತ್ತು ಖಾಸಗಿ ಕ್ಷಣವಾಗಿದೆ. ಎಂದಿಗೂ ಜನರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲʼʼ ಎಂದು ಹೇಳಿಕೆ ನೀಡಿದ್ದರು. ಇದೀಗ ಫೋಟೊ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಬೇಕಾಗಿ ಫ್ಯಾನ್ಸ್ ಗ್ರೂಪ್ ಕೇಳಿಕೊಳ್ಳುತ್ತಿದೆ.
ಅವರಲ್ಲಿ ಒಬ್ಬರು, “ಚಿತ್ರವು ವೈರಲ್ ಆಗಿದೆ, ಆದ್ದರಿಂದ ಅದನ್ನು ನಿಯಂತ್ರಿಸಲು ಅಸಾಧ್ಯವಾಗಿದೆ. ನಾನು ಅಭಿಮಾನಿಗಳಲ್ಲಿ ಮತ್ತು ರಣಬೀರ್ ಮತ್ತು ಆಲಿಯಾ ಅವರನ್ನು ಪ್ರೀತಿಸುವ ಜನರಲ್ಲಿ ವಿನಂತಿಸಿಕೊಳ್ಳುವುದೇನಂದರೆ, ನೀವು ಒಂದು ವೇಳೆ ಈ ಫೋಟೊವನ್ನು ಪೋಸ್ಟ್ ಮಾಡಿದ್ದರೆ, ದಯವಿಟ್ಟು ಚಿತ್ರವನ್ನು ಡಿಲೀಟ್ ಮಾಡಿʼʼಎಂದು ಪೋಸ್ಟ್ ಮುಖಾಂತರ ವಿನಂತಿಸಿಕೊಳ್ಳುತ್ತಿದ್ದಾರೆ. 2022 ಏಪ್ರಿಲ್ 14ರಂದು ಆಲಿಯಾ ಭಟ್ ಅವರು ರಣಬೀರ್ ಕಪೂರ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಇದನ್ನೂ ಓದಿ | Alia Bhatt | ತಲೆಕೆಳಗಾಗಿ ನೇತಾಡುವ ಭಂಗಿಯ ಫೋಟೊ ಶೇರ್ ಮಾಡಿದ ಆಲಿಯಾ ಭಟ್: ಸೋನು ಸೂದ್ ಹೇಳಿದ್ದೇನು?
ಈ ಹಿಂದೆ ಅಷ್ಟೇ ಆಲಿಯಾ ಭಟ್ ತಲೆಕೆಳಗಾಗಿ ನೇತಾಡುವ ಭಂಗಿಯ ಫೋಟೊ ಶೇರ್ ಮಾಡಿಕೊಂಡಿದ್ದರು. “ಡೆಲಿವರಿಯಾಗಿ ಒಂದೂವರೆ ತಿಂಗಳ ಬಳಿಕ ನಾನು ಮತ್ತೆ ನನ್ನ ಕೋರ್‌ಗೆ ಮರಳುತ್ತಿದ್ದೇನೆ. ನನ್ನ ಕೋಚ್ ಅವರ ಮಾರ್ಗದರ್ಶನಲ್ಲಿ ಈ ಭಂಗಿ ಪ್ರಯತ್ನಿಸಲು ಸಾಧ್ಯವಾಯಿತು. ಪ್ರಸವದ ನಂತರ ನಿಮ್ಮ ದೇಹದ ಕಾಳಜಿ ತುಂಬ ಮುಖ್ಯ. ನನ್ನ ವ್ಯಾಯಾಮದ ಸಮಯದಲ್ಲಿ ನಾನು ನಡೆಯುವುದು, ನನ್ನ ಸ್ಥಿರತೆ ಮತ್ತು ಸಮತೋಲನವನ್ನು ಕಂಡುಕೊಳ್ಳುವುದು ಮಾಡಿದ್ದೇನೆ. ವ್ಯಾಯಾಮ ಮಾಡುವ ಮೊದಲು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ನಂತರ ಮಾಡಿʼʼ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ | AAlia Bhattlia Bhatt | ಆಲಿಯಾ ಭಟ್ ಹಾಲುಣಿಸುವ ಫೋಟೊ ವೈರಲ್: ನಕಲಿ ಅಂತಿದ್ದಾರೆ ನೆಟ್ಟಿಗರು!