Site icon Vistara News

Ranbir Kapoor | ಪಾಕಿಸ್ತಾನದ ಚಿತ್ರದಲ್ಲಿ ನಟಿಸುತ್ತೇನೆ ಎಂದ ರಣಬೀರ್‌ ಕಪೂರ್‌: ಟ್ರೋಲ್‌ಗೆ ಗುರಿಯಾದ ನಟ!

Ranbir Kapoor

Complaint against Ranbir Kapoor for 'hurting sentiments' over viral Christmas lunch video

ಬೆಂಗಳೂರು: ಬಾಲಿವುಡ್‌ ನಟ ರಣಬೀರ್‌ ಕಪೂರ್‌ (Ranbir Kapoor) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಪಾಕಿಸ್ತಾನದ ಸಿನಿಮಾದಲ್ಲಿ ನಟಿಸುವುದಕ್ಕೆ ಇಷ್ಟವಿದೆ ಎಂಬ ಹೇಳಿಕೆಗೆ ಭಾರಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ ನಟ. ಸೌದಿ ಅರೇಬಿಯಾದಲ್ಲಿ ನಡೆದ ರೆಡ್‌ ಸೀ ಇಂಟರ್‌ನ್ಯಾಷನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರಣಬೀರ್‌ ಭಾಗಿ ಆಗಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಮ್ಮ ಮನಸ್ಸಿನಲ್ಲಿರುವ ಮಾತುಗಳು ಹೇಳಿದ್ದಾರೆ. ಈ ಹೇಳಿಕೆ ನೆಟ್ಟಿಗರ ಕೆಂಗೆಣ್ಣಿಗೆ ಗುರಿಯಾಗಿದೆ.

ಬ್ರಹ್ಮಾಸ್ತ್ರ ಸಿನಿಮಾ ಹಿಟ್‌ ಕಂಡ ಬಳಿಕ ಸದ್ಯ ರಣಬೀರ್‌, ‘ಅನಿಮಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂವಾದದ ವೇಳೆ ಪಾಕಿಸ್ತಾನದ ಚಿತ್ರದಲ್ಲಿ ನಟಿಸುತ್ತೀರಾ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ರಣಬೀರ್‌ ʻʻಖಂಡಿತ ನಟಿಸುತ್ತೇನೆ. ನನ್ನ ದೃಷ್ಟಿಯಲ್ಲಿ ಕಲಾವಿದರಿಗೆ ಯಾವುದೇ ಗಡಿ ಇಲ್ಲ. ಕಲೆಗೆ ಯಾವುದೇ ಬೌಂಡರಿ ಇಲ್ಲ” ಎಂದಿದ್ದಾರೆ.

ಇದನ್ನೂ ಓದಿ | Ranbir Kapoor | ʻʻಮಗಳಿಗೆ 20 ಆದಾಗ, ನನಗೆ 60 ವರ್ಷʼʼ: ತಮಗಿರುವ ಅಭದ್ರತೆ ಕುರಿತು ರಣಬೀರ್‌ ಹೇಳಿದ್ದೇನು?

ಪುಲ್ವಾಮ ದಾಳಿ ಘಟನೆಯ ನಂತರ ಪಾಕಿಸ್ತಾನದ ನಟ ನಟಿಯರ ಮೇಲೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ನಿಷೇಧ ಹೇರಿದೆ. ಅಂದಿನಿಂದ ಪಾಕಿಸ್ತಾನದ ಕಲಾವಿದರು ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ರಣಬೀರ್‌ ಕಪೂರ್ ನೀಡಿರುವ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ | Ranbir Kapoor | ಥೇಟ್​ ರಣಬೀರ್​ ಕಪೂರ್​​ರಂತೆಯೇ ಇದ್ದಾನೆ ಈ ಬಾಲಕ ನೀರವ್​ ಭಟ್​ !

Exit mobile version