ಬೆಂಗಳೂರು: ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ʻತೂ ಜೂಟಿ ಮೈನ್ ಮಕ್ಕಾರ್ʼ (Tu Jhoothi Main Makkaar) ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ರಣಬೀರ್ ಕಪೂರ್ ಪತ್ನಿ ಆಲಿಯಾ ಜತೆ ಜಗಳದಲ್ಲಿ ತೊಡಗಿದಾಗ ಹೇಗಿರುತ್ತದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಪ್ರತಿ ಬಾರಿ ಜಗಳವಾದಗಲೂ ಆಲಿಯಾ ತಾನು ಹೇಳಲಿಕ್ಕೆ ಹೊರಟಿರುವ ವಿಷಯವನ್ನು ಸಾಬೀತುಪಡಿಸುವವರೆಗೂ ಬಿಡುವುದಿಲ್ಲ ಎಂದರು.
ಮಿರ್ಚಿ ಪ್ಲಸ್‌ಗಾಗಿ ಕರೀನಾ ಕಪೂರ್ ಖಾನ್ ಅವರೊಂದಿಗಿನ ಸಂಭಾಷಣೆಯಲ್ಲಿ, ರಣಬೀರ್ ಈ ಬಗ್ಗೆ ಮಾತನಾಡಿ “ಜಗಳಗಳಿದ್ದರೆ, ನಾನು ಸ್ವಲ್ಪ ಮುಂದೆ ಬರುತ್ತೇನೆ. ಆಲಿಯಾ ವಕೀಲೆ ಇದ್ದಂತೆ, ಹಾಗಾಗಿ ತನಗೆ ಅನ್ಯಾಯವಾಗಿದೆ ಎಂದು ಅವಳಿಗೆ ಅನಿಸಿದರೆ ತನ್ನ ವಿಷಯವನ್ನು ಸ್ಪಷ್ಟಪಡಿಸುವವರೆಗೂ ಅವಳು ಬಿಡುವುದಿಲ್ಲ. ಆದರೆ ನಾನು ಯಾವುದೇ ಅಹಂಕಾರವಿಲ್ಲದ ವ್ಯಕ್ತಿ. ಸ್ವಾಭಿಮಾನವೂ ಕೂಡ ಇಲ್ಲ. ಒಂದು ವೇಳೆ ಸರಿ ತಪ್ಪಿದ್ದರೂ ಕ್ಷಮೆ ಕೇಳಿ ಬಿಡುತ್ತೇನೆ. ಕ್ಷಮಿಸಿ ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆʼʼಎಂದಿದ್ದಾರೆ.
ಇದನ್ನೂ ಓದಿ:Ranbir Kapoor: ರಣಬೀರ್ ಕಪೂರ್ ಅಭಿನಯದ ʻತೂ ಜೂಟಿ ಮೈನ್ ಮಕ್ಕಾರ್ʼ ಆನ್‌ಲೈನ್‌ನಲ್ಲಿ ಲೀಕ್
ʻʻಜೋಡಿ ಜಗಳವಾಡಿದಾಗ, ಕೆಲವೊಮ್ಮೆ ಒಬ್ಬರನ್ನೊಬ್ಬರು ನೋಯಿಸಿಕೊಳ್ಳುತ್ತಾರೆ. ಕೆಲಮೊಮ್ಮೆ ನೋಯಿಸಲೆಂದೇ ಬಹಳಷ್ಟು ವಿಷಯಗಳನ್ನು ಹೇಳಲಾಗುತ್ತದೆ. ಆದರೆ ಅದು ಬೇಕು ಎಂತಲೇ ನೀವು ಮಾಡಿರುವುದಿಲ್ಲ. ಯಾವುದೇ ಜಗಳಕ್ಕೆ ಕಾರಣವಾಗಿದ್ದರೂ ನೀವು ಅದನ್ನು ಸ್ಪಷ್ಟಪಡಿಸಿದರೆ ಉತ್ತಮʼʼಎಂದರು.
ರಣಬೀರ್ ಕಪೂರ್ ಮುಂಬರುವ ಯೋಜನೆಗಳು
ಸಿನಿಮಾ ಮಾರ್ಚ್ 8 ರಂದು ಚಿತ್ರಮಂದಿರಗಳಿಗೆ ಬರಲಿದೆ. ಇದಲ್ಲದೆ, ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.