ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಅವರು ವರ್ಚುವಲ್ ಚಾಟ್‌ನಲ್ಲಿ ಮಾತನಾಡುತ್ತ, ಹಿಂದಿ ಚಲನಚಿತ್ರೋದ್ಯಮವು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಕೇರಳದ ಅವರ ಅಭಿಮಾನಿಯೊಬ್ಬರು ಹಿಂದಿ ʻಚಿತ್ರರಂಗದಲ್ಲಿ ಏನು ಕೊರತೆಯಿದೆʼ ಎಂದು ಪ್ರಶ್ನೆ ಕೇಳಿದಾಗ, ರಣಬೀರ್ ʻಹೊಸಬರಿಗೆ ಇಲ್ಲಿ ಹೆಚ್ಚಾಗಿ ಅವಕಾಶಗಳನ್ನು ನೀಡುವುದಿಲ್ಲʼ ಎಂದು ನೇರವಾಗಿ ಹೇಳಿದ್ದಾರೆ.
ವರ್ಚುವಲ್ ಚಾಟ್‌ನಲ್ಲಿ ರಣಬೀರ್ ಹಿಂದಿ ಚಿತ್ರರಂಗದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ರಣಬೀರ್ ಮಾತನಾಡಿ ʻ 15-20 ವರ್ಷಗಳಲ್ಲಿ ಹಿಂದಿ ಸಿನಿಮೋದ್ಯಮವು ಪಾಶ್ಚಾತ್ಯ ಸಂಸ್ಕೃತಿಯಿಂದ, ವೆಸ್ಟರ್ನ್ ಸಿನಿಮಾಗಳಿಂದ, ರಿಮೇಕ್‌ಗಳಿಂದ ಪ್ರಭಾವಿತವಾಗಿದೆ ಎಂದು ನಾನು ಭಾವಿಸುತ್ತೇನೆ. ಹೊಬರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದಿಲ್ಲ. ಹೊಸ ಮನಸ್ಸುಗಳು ಉದ್ಯಮಕ್ಕೆ ಅತ್ಯಗತ್ಯವಾಗಿದೆʼʼ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.
ರಣಬೀರ್ ಅವರ ಹೆಸರು ಆಗಾಗ ನೆಪೋಟಿಸಮ್ ಚರ್ಚೆಗಳಲ್ಲಿ ಬರುತ್ತದೆ. ಏಕೆಂದರೆ ಬಾಲಿವುಡ್‌ನ ಅಗ್ರ ತಾರೆಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನಮಾನವನ್ನು ಉಳಿಸಿಕೊಂಡಿದ್ದಾರೆ. ಮಾತು ಮುಂದುವರಿಸಿ ನಟ ʻʻಹಿಂದಿ ಚಿತ್ರೋದ್ಯಮದಲ್ಲಿ ಕೆಲವೇ ಕೆಲವು ನಟ-ನಟಿಯರು ಇದ್ದಾರೆ. ಆದರೆ ಹೊಸಬರಿಗೆ ಅವಕಾಶಗಳನ್ನು ನೀಡುತ್ತಿಲ್ಲ. ಹೊಸಬರಿಗೆ ನೀಡುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಅವಕಾಶ ನೀಡಿದರೆ ಬದಲಾವಣೆಯನ್ನು ಕಾಣಬಹುದು. ಹೊಸ ಮನಸ್ಸುಗಳು ಬರುತ್ತವೆ. ಹೊಸ ಕಥೆಗಳು ಹುಟ್ಟುತ್ತವೆ ಎಂದು ನಾನು ಭಾವಿಸುತ್ತೇನೆʼʼ ಎಂದರು.
ಇದನ್ನೂ ಓದಿ: Ranbir Kapoor: ರಣಬೀರ್ ಕಪೂರ್ ಶರ್ಟ್ ಹಿಡಿದೆಳೆದ ಮಹಿಳಾ ಅಭಿಮಾನಿ: ʻಕಿರುಕುಳʼ ಅಂದ್ರು ನೆಟ್ಟಿಗರು
2018ರಲ್ಲಿ ಬಿಡುಗಡೆಗೊಂಡ ʻಸಂಜುʼ ಚಿತ್ರದ ಬಳಿಕ ಯಾವುದೇ ಸಿನಿಮಾ ಮಾಡಿಲ್ಲ ರಣಬೀರ್. ಐದು ವರ್ಷಗಳ ಬಳಿಕ ʻಶಂಶೇರಾʼದೊಂದಿಗೆ ಕಮ್‌ಬ್ಯಾಕ್ ಆದರು. ನಂತರ ʻಬ್ರಹ್ಮಾಸ್ತ್ರʼ ಸಿನಿಮಾ ಮೂಲಕ ಜನಪ್ರೀಯತೆ ಗಳಿಸಿದರು. ರಣಬೀರ್ ಮುಂದೆ ಸಂದೀಪ್ ರೆಡ್ಡಿ ವಂಗಾ ಅವರ ʻಅನಿಮಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.