Site icon Vistara News

Ranbir Kapoor: ರಣಬೀರ್ ಕಪೂರ್ ಅಭಿನಯದ ʻತೂ ಜೂಟಿ ಮೈನ್‌ ಮಕ್ಕಾರ್‌ʼ ಆನ್‌ಲೈನ್‌ನಲ್ಲಿ ಲೀಕ್‌

Ranbir Kapoor Tu Jhoothi Main Makkaar leaked online

ಬೆಂಗಳೂರು: ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರ ಬಹು ನಿರೀಕ್ಷಿತ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ʻತೂ ಜೂಟಿ ಮೈನ್‌ ಮಕ್ಕಾರ್‌ʼ ಚಿತ್ರದ ಮೂಲಕ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿದ್ದಾರೆ. ಲವ್ ರಂಜನ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ʻತೂ ಜೂಟಿ ಮೈನ್‌ ಮಕ್ಕಾರ್‌ʼ (Tu Jhoothi Main Makkaar) ಮಾರ್ಚ್ 8ರಂದು ಬಿಡುಗಡೆಯಾಗಿದೆ. ಆದರೆ ಇದೀಗ ಚಿತ್ರ ಇಂಟರ್‌ನೆಟ್‌ನಲ್ಲಿ ಲೀಕ್‌ ಆಗಿದೆ.

ಆನ್‌ಲೈನ್‌ನಲ್ಲಿ ಸೋರಿಕೆ

ಇತ್ತೀಚೆಗೆ ಪೈರಸಿಯಿಂದ ಹಲವಾರು ಸಿನಿಮಾಗಳು ಬಲಿಯಾಗುತ್ತಿವೆ. ಫಿಲ್ಮಿಜಿಲ್ಲಾ, ಟೆಲಿಗ್ರಾಮ್‌, ಮೂವಿರೂಲ್ಸ್‌, ತಮಿಳ್‌ರಾಕರ್ಸ್‌, 123 ಮೂವೀಸ್‌ ಹೀಗೆ ಹಲವಾರು ವೆಬ್‌ಸೈಟ್‌ಗಳಲ್ಲಿ ಸಿನಿಮಾ ಸೋರಿಕೆಯಾಗಿದೆ. ಚಿತ್ರದ ಪೂರ್ಣ HD ಡೌನ್‌ಲೋಡ್ ಲಿಂಕ್‌ಗಳನ್ನು ಪೋಸ್ಟ್ ಮಾಡಿವೆ. ಆನ್‌ಲೈನ್‌ನಲ್ಲಿ ಚಿತ್ರಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಶಾರುಖ್ ಖಾನ್ ಅಭಿನಯದ ʻಪಠಾಣ್‌ʼ, ಅಜಯ್ ದೇವಗನ್ ಅವರ ʻದೃಶ್ಯಂ 2ʼ ಮತ್ತು ಇನ್ನೂ ಅನೇಕ ಚಲನಚಿತ್ರಗಳು ಈ ಸಮಸ್ಯೆಯನ್ನು ಎದುರಿಸಿದ್ದವು.

ಇದನ್ನೂ ಓದಿ: Ranbir Kapoor: ರಣಬೀರ್‌ ಕಪೂರ್‌ ಶರ್ಟ್‌ ಹಿಡಿದೆಳೆದ ಮಹಿಳಾ ಅಭಿಮಾನಿ: ʻಕಿರುಕುಳʼ ಅಂದ್ರು ನೆಟ್ಟಿಗರು

ಚಿತ್ರ ರಿಲೀಸ್‌ ಆಗುವ ತಿಂಗಳ ಹಿಂದೆಯೇ ಚಿತ್ರದ ಶೀರ್ಷಿಕೆಯನ್ನು ನಿರ್ಮಾಪಕರು ವಿಶಿಷ್ಟ ರೀತಿಯಲ್ಲಿ ಘೋಷಿಸಿದ್ದರು. ಲವ್ ರಂಜನ್ ಬರೆದು ನಿರ್ದೇಶಿಸಿದ ಈ ಸಿನಿಮಾವನ್ನು ಲವ್ ಫಿಲ್ಮ್ಸ್ ಮತ್ತು ಟಿ-ಸೀರೀಸ್ ಫಿಲ್ಮ್ಸ್ ನಿರ್ಮಿಸಿದೆ. ಅನುಭವ್ ಸಿಂಗ್ ಬಸ್ಸಿ, ಡಿಂಪಲ್ ಕಪಾಡಿಯಾ ಮತ್ತು ಬೋನಿ ಕಪೂರ್ ಚಿತ್ರದಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದಾರೆ. ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಬರೆದಿದ್ದಾರೆ.

Exit mobile version