Site icon Vistara News

Animal Success Meet: ಹೇಗಿತ್ತು ʻಅನಿಮಲ್‌ʼ ಸಿನಿಮಾ ಸಕ್ಸೆಸ್‌ ಮೀಟ್‌? ಯಾರೆಲ್ಲ ಭಾಗಿ?

Animal bash

ಬೆಂಗಳೂರು: 2023ರ ಡಿಸೆಂಬರ್ 1ರಂದು ರಣಬೀರ್ ಕಪೂರ್ ಅಭಿನಯದ ʻಅನಿಮಲ್‌ʼ ಸಿನಿಮಾ (Animal Success Meet) ಬಿಡುಗಡೆಗೊಂಡು ಭಾರಿ ಕಲೆಕ್ಷನ್‌ ಮಾಡಿ ಸಕ್ಸೆಸ್‌ ಎನಿಸಿಕೊಂಡಿದೆ. ಈ ಸಂಭ್ರಮವನ್ನು ಆಚರಿಸಲು ಚಿತ್ರತಂಡ ಸಕ್ಸೆಸ್‌ ಮೀಟ್‌ ಆಯೋಜಿಸಿತ್ತು. ಇಡೀ ಚಿತ್ರತಂಡ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿತ್ತು. ಚಿತ್ರದಲ್ಲಿ ರಣಬೀರ್ ಕಪೂರ್, ತೃಪ್ತಿ ಡಿಮ್ರಿ, ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೀಗ ಈ ಸಂಭ್ರಮಾಚರಣೆಯ ವಿಡಿಯೊ ವೈರಲ್‌ ಆಗಿದ್ದು ನಟರು, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸಿನಿಮಾದಲ್ಲಿ ರಣಬೀರ್ ಕಪೂರ್, ʻರಣವಿಜಯ್ʼ ಪಾತ್ರವನ್ನು ನಿರ್ವಹಿಸಿದ್ದಾರೆ. ರಣಬೀರ್‌ ಅವರು ಪತ್ನಿ ಆಲಿಯಾ ಭಟ್ ಮತ್ತು ತಾಯಿ ನೀತು ಕಪೂರ್ ಅವರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ವಿಡಿಯೊವೊಂದರಲ್ಲಿ, ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪಾರ್ಟಿಯಲ್ಲಿ ರಣಬೀರ್ ಕಪೂರ್ ಮಾತನಾಡಿ ʻನಿರ್ದೇಶಕ ಸಂದೀಪ್ ಸರ್ ಅವರ ಸಿನಿಮಾದಲ್ಲಿ ಪಾತ್ರ ಮಾಡುವ ಅದೃಷ್ಟ ನಮ್ಮೆಲ್ಲರದ್ದು. ಅವರು ನಮ್ಮೆಲ್ಲರಿಂದ ಗೌರವಕ್ಕೆ ಅರ್ಹರುʼʼಎಂದರು. ತೃಪ್ತಿ ಕೂಡ “ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿಯ ಬಗ್ಗೆ ನಿಜವಾಗಿಯೂ ಸಂತೋಷವಾಗಿದೆʼʼಎಂದರು. ಆಯುಷ್ಮಾನ್ ಖುರಾನಾ, ತಮನ್ನಾ ಭಾಟಿಯಾ, ರಾಕುಲ್ ಪ್ರೀತ್ ಸಿಂಗ್ ಮತ್ತು ಇತರ ತಾರೆಯರು ಚಿತ್ರದ ಯಶಸ್ಸನ್ನು ಆಚರಿಸಲು ಹಾಜರಿದ್ದರು.

‘ಅರ್ಜುನ್ ರೆಡ್ಡಿ’ ಮತ್ತು ‘ಕಬೀರ್ ಸಿಂಗ್’ ನಂತರ ‘ಅನಿಮಲ್‌’ ಸಂದೀಪ್ ರೆಡ್ಡಿ ವಂಗಾ ಅವರ ಮೂರನೇ ನಿರ್ದೇಶನದ ಸಿನಿಮಾ. ʼಅನಿಮಲ್ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ. ರಣಬೀರ್‌ ಕಪೂರ್‌ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರ ಹೊಮ್ಮಿದೆ. ಈ ಹಿಂದೆ ʼಸಂಜುʼ ರಣಬೀರ್‌ ಕಪೂರ್‌ ನಟನೆಯ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಚಿತ್ರವಾಗಿತ್ತು. ಜವಾನ್’, ‘ಪಠಾಣ್‌’ ಮತ್ತು ‘ಗದರ್ 2’ ನಂತರ ‘ಅನಿಮಲ್’ ಈಗ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರ ಹೊಮ್ಮಿದೆ.

ಇದನ್ನೂ ಓದಿ: ಅನಿಮಲ್‌ ಸಿನಿಮಾ ನೋಡಿ ಪರ್ಸ್‌ ಬಿಟ್ಟು ಬಂದಳು; ವಾಪಸ್‌ ತರಲು ಹೋದಾಗ ಸೆಕ್ಯುರಿಟಿ ಗಾರ್ಡ್‌ಗೆ ಒದ್ದಳು!

ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸಾಧ್ಯತೆ ಇದೆ. ಅವರ ಈ ಹಿಂದಿನ ಎರಡು ಬಾಲಿವುಡ್‌ ಚಿತ್ರಗಳು ಹೇಳುವಷ್ಟು ಕಲೆಕ್ಷನ್‌ ಮಾಡಿರಲಿಲ್ಲ. ʼಮಿಷನ್‌ ಮಜ್ನುʼ ಒಟಿಟಿ ಮೂಲಕ ತೆರೆ ಕಂಡಿದ್ದರೆ, ʼಗುಡ್‌ಬೈʼ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿರಲಿಲ್ಲ. ಇದೀಗ ಮೂರನೇ ಚಿತ್ರ ಭರ್ಜರಿ ಕಲೆಕ್ಷನ್‌ ಮಾಡುವ ಮೂಲಕ ದಕ್ಷಿಣ ಭಾರತದಂತೆ ಬಾಲಿವುಡ್‌ ಚಿತ್ರರಂಗದಲ್ಲೂ ಛಾಪು ಮೂಡಿಸಿದ್ದಾರೆ.

Exit mobile version