Site icon Vistara News

Randeep Hooda: ಮಣಿಪುರ ʼರಾಜಕುಮಾರಿʼ ಜತೆ ರಣದೀಪ್ ಹೂಡಾ ಮದುವೆ; ಡೇಟ್‌ ಅನೌನ್ಸ್‌!

Randeep Hooda to marry Lin Laishram

ಬೆಂಗಳೂರು: ರಣದೀಪ್ ಹೂಡಾ (Randeep Hooda) ನವೆಂಬರ್ 24ರಂದು ನಟ ಲಿನ್ ಲೈಶ್ರಾಮ್ (Lin Laishram) ಅವರೊಂದಿಗಿನ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಮದುವೆಯ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ. ನವೆಂಬರ್ 29 ರಂದು ಇವರಿಬ್ಬರ ಮದುವೆ ನಡೆಯಲಿದೆ. ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಮಾರಂಭವು ಇಂಫಾಲ್‌ನಲ್ಲಿ ನಡೆಯಲಿದೆ.

ರಣದೀಪ್ ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ ʻʻಪುರಾಣದ ಪ್ರಕಾರ ಮಹಾಭಾರತದ ಅರ್ಜುನ ಮಣಿಪುರದ ರಾಜಕುಮಾರಿ ಚಿತ್ರಾಂಗದೆಯನ್ನು ವರಿಸಿದ್ದನು. ನಮ್ಮ ಕುಟುಂಬ ಮತ್ತು ಸ್ನೇಹಿತರ ಆಶೀರ್ವಾದದೊಂದಿಗೆ ನಾವು ಮದುವೆಯಾಗುತ್ತಿದ್ದೇವೆ. ನಮ್ಮ ಮದುವೆಯು 2023ರ ನವೆಂಬರ್ 29 ರಂದು ಇಂಫಾಲ್, ಮಣಿಪುರದಲ್ಲಿ ನಡೆಯಲಿದೆ. ನಂತರ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ. ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಬಯಸುತ್ತೇವೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Randeep Hooda: ಕಾಪಿರೈಟ್‌ ವಿಚಾರಕ್ಕೆ ʻಸ್ವಾತಂತ್ರ್ಯ ವೀರ್ ಸಾವರ್ಕರ್ʼ ಸಿನಿಮಾ ನಟ-ನಿರ್ಮಾಪಕರ ನಡುವೆ ಫೈಟ್

ರಣದೀಪ್ ಹೂಡಾ ಜನ್ನತ್ 2, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್, ಸರ್ಬ್ಜಿತ್, ಸುಲ್ತಾನ್ ಮತ್ತು ಕಿಕ್ ಸೇರಿದಂತೆ ಅನೇಕ ಹಿಟ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ರಣದೀಪ್‌ ಹೂಡಾ ಮದುವೆಯಾಗಲಿರುವ ಲಿನ್ ಮಣಿಪುರದ ರೂಪದರ್ಶಿ, ನಟಿ ಮತ್ತು ಉದ್ಯಮಿ. ಅವರು ಓಂ ಶಾಂತಿ ಓಂ, ಮೇರಿ ಕೋಮ್, ರಂಗೂನ್, ಜಾನೆ ಜಾನ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ರಣದೀಪ್ ಹೂಡಾ (Randeep Hooda) ʻಸ್ವಾತಂತ್ರ್ಯ ವೀರ್ ಸಾವರ್ಕರ್ʼ (Swatantrya Veer Savarkar) ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. ನಟ ಈ ಪಾತ್ರಕ್ಕಾಗಿ 4 ತಿಂಗಳು 1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕೆಜಿ ತೂಕ ಇಳಿಸಿರುವ ಬಗ್ಗೆ ಈ ಮುಂಚೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಇಲಿಯಾನಾ ಡಿಕ್ರೂಜ್ ಅವರೊಂದಿಗೆ ‘ಅನ್‌ಫೇರ್ ಆ್ಯಂಡ್ ಲವ್ಲಿ’ ಮತ್ತು ‘ಲಾಲ್ ರಂಗ್ 2’ ಸಿನಿಮಾಗಳ ಪೈಪ್‌ಲೈನ್‌ನಲ್ಲಿ ಹೊಂದಿದ್ದಾರೆ.

Exit mobile version