ಮುಂಬೈ: ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಮತ್ತು ಕರೀಶ್ಮಾ ಕಪೂರ್ ಅವರ ತಂದೆ ತಾಯಿಯಾದ ರಣಧೀರ್ ಕಪೂರ್ ಮತ್ತು ಬಬಿತಾ ಕಪೂರ್ (Randhir And Babita) 34 ವರ್ಷಗಳ ಹಿಂದೆಯೇ ಪ್ರತ್ಯೇಕವಾದ ಜೀವನ ನಡೆಸಲಾರಂಭಿಸಿದ್ದರು. ಮಕ್ಕಳೊಂದಿಗೆ ಬಬಿತಾ ಲೋಖಂಡ್‌ವಾಲಾದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿದ್ದರೆ, ರಣಧೀರ್ ಅವರು ಚೆಂಬೂರಿನಲ್ಲಿರುವ ತನ್ನ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಈಗಿನ ವರದಿಯ ಪ್ರಕಾರ ಈ ಜೋಡಿ ಮತ್ತೆ ಒಂದಾಗಿದ್ದು, ಒಟ್ಟಿಗೆ ಜೀವನ ನಡೆಸುತ್ತಿದ್ದಾರಂತೆ.
ಇದನ್ನೂ ಓದಿ: Viral Video : ಅರ್ಜುನ್ ಜತೆ ಫೋಟೋಗೆ ಪೋಸ್ ಕೊಡಲು ಅನುಮತಿ ಕೇಳಿದ ಉರ್ಫಿ; ವೈರಲ್ ಆಯ್ತು ವಿಡಿಯೊ
ಬಬಿತಾ ಮತ್ತು ರಣಧೀರ್ ಒಟ್ಟಿಗೆ ಇರಲಿಲ್ಲವಾದರೂ ಅವರ ನಡುವೆ ಯಾವುದೇ ರೀತಿಯ ಜಗಳವೂ ಇರಲಿಲ್ಲ. ಕುಟುಂಬದ ಕಾರ್ಯಕ್ರಮಗಳಲ್ಲಿ ಇಬ್ಬರೂ ಖುಷಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಈ ಜೋಡಿ ಏಳು ತಿಂಗಳ ಹಿಂದೆ ಬಾಂದ್ರಾದಲ್ಲಿರುವ ರಣಧೀರ್ ಕಪೂರ್ ಅವರ ಹೊಸ ಮನೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರದ ಬಗ್ಗೆ ಕರೀನಾ ಮತ್ತು ಕರೀಶ್ಮಾ ಇಬ್ಬರೂ ಅತ್ಯಂತ ಸಂತೋಷವಾಗಿರುವುದಾಗಿ ಹೇಳಲಾಗಿದೆ.
ರಣಧೀರ್ ಕಪೂರ್ ಮತ್ತು ಬಬಿತಾ ʼಕಲ್ ಆಜ್ ಔರ್ ಕಲ್ʼ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದು, ಅಲ್ಲಿಂದಲೇ ಪ್ರೀತಿಯಲ್ಲಿ ಬಿದ್ದಿದ್ದರು. 1971 ರ ನವೆಂಬರ್ ತಿಂಗಳಲ್ಲಿ ವಿವಾಹವಾದರು. ದಂಪತಿಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 1988 ರಲ್ಲಿ ಬೇರೆಯಾದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಣಧೀರ್ ಅವರು “ನಾನು ತುಂಬಾ ಕುಡಿದು ತಡವಾಗಿ ಮನೆಗೆ ಬರುತ್ತಿದ್ದೆ. ಅದು ಅವಳಿಗೆ ಇಷ್ಟವಾಗಲಿಲ್ಲ. ಮತ್ತು ಅವಳು ಬಯಸಿದ ರೀತಿಯಲ್ಲಿ ಬದುಕಲು ನಾನು ಬದುಕಲಾಗಲಿಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: Viral Video: ಕಿಚಡಿಗೆ ಒಗ್ಗರಣೆ ಹಾಕುವುದು ಹೇಗೆಂದು ಬಿಲ್ ಗೇಟ್ಸ್ಗೆ ಕಲಿಸಿಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ!
2007ರಲ್ಲಿ ಈ ಜೋಡಿ ಮತ್ತೆ ಒಂದಾಗುತ್ತದೆ ಎನ್ನುವ ವರದಿ ಬಂದಿತ್ತು. ಆದರೆ ಅದು ನಡೆದಿರಲಿಲ್ಲ. ಆಗ ನಡೆಯದೇ ಇದ್ದದ್ದು 2022ರಲ್ಲಿ ನಡೆದಿದೆ ಎಂದು ವರದಿಯಿದೆ.