ಬೆಂಗಳೂರು: ಕರಣ್ ಜೋಹರ್ ಅವರ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗೆ(Rocky Aur Rani Kii Prem Kahaani box office day) 100 ಕೋಟಿ ರೂ. ಕ್ಲಬ್ ಸೇರಿದೆ. ಚಿತ್ರ ಬಿಡುಗಡೆಯಾದ 10 ದಿನಕ್ಕೆ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ನಟಿಸಿರುವ ಕರಣ್ ಜೋಹರ್ ನಿರ್ದೇಶನದ ಚಿತ್ರ ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಗಲ್ಲಾಪೆಟ್ಟಿಗೆಯಲ್ಲಿ 105.08 ಕೋಟಿ ರೂ. ಸಂಗ್ರಹಿಸಿದೆ ಎಂದು ಧರ್ಮ ಪ್ರೊಡಕ್ಷನ್ಸ್ ಸೋಮವಾರ ಪ್ರಕಟಿಸಿದೆ.
ಈ ಸಿನಿಮಾ ಮೊದಲ ದಿನ 11.10 ಕೋಟಿ ರೂ. ಗಳಿಸಿತು. 2ನೇ ದಿನ 16.05 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರಿಂದ ಆಶಾಭಾವ ಮೂಡಿತು. ಮೂರನೇ ದಿನವಾದ ಭಾನುವಾರ (ಜುಲೈ 30) 18.75 ಕೋಟಿ ರೂಪಾಯಿ ಆದಾಯ ಹರಿದು ಬಂತು. ಸೋಮವಾರ ಸ್ವಲ್ಪ ಕುಸಿತ (7 ಕೋಟಿ ರೂ.) ಉಂಟಾಯಿತು. ಬಾಕ್ಸ್ ಆಫೀಸ್ನಲ್ಲಿ 5ನೇ ದಿನ 7.25 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಬುಧವಾರ ಕೂಡ ಅನೇಕ ಕಡೆಗಳಲ್ಲಿ ಚೆನ್ನಾಗಿ ಪ್ರದರ್ಶನ ಆಗುತ್ತಿದ್ದು, ಈ ಸಿನಿಮಾ 60 ಕೋಟಿ ರೂಪಾಯಿ ಗಡಿ ಮುಟ್ಟಿರುವುದು ಚಿತ್ರತಂಡಕ್ಕೆ ಸಮಾಧಾನ ಉಂಟುಮಾಡಿದೆ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ನಟಿಸಿದ್ದಾರೆ. ಇದರಲ್ಲಿ ಟೋಟಾ ರಾಯ್ ಚೌಧರಿ, ಚೂರ್ನಿ ಗಂಗೂಲಿ ಮತ್ತು ಅಮೀರ್ ಬಶೀರ್ ಕೂಡ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Rani Kii Prem Kahaani: ಧರ್ಮೇಂದ್ರ ಸುಂದರ, ಲಿಪ್ ಲಾಕ್ ಮಾಡುವಾಗ ನನ್ನ ಪತಿಯೇ ತಲೆ ಕೆಡಿಸಿಕೊಂಡಿಲ್ಲ ಎಂದ ಶಬಾನಾ!
ಈ ಚಿತ್ರವು ರಾಕಿ (ರಣವೀರ್ ಸಿಂಗ್) ಮತ್ತು ರಾಣಿ (ಆಲಿಯಾ) ಅವರ ಪ್ರೇಮಕಥೆಯನ್ನು ಸುತ್ತುವರಿದಿದೆ. ಸಿನಿಮಾದಲ್ಲಿ ರಾಕಿ ಪಂಜಾಬಿ ಕುಟುಂಬದವನಾಗಿದ್ದು, ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಇರುವವನಾಗಿರುತ್ತಾನೆ. ಇನ್ನೊಂದತ್ತ ರಾಣಿ ಬಂಗಾಳಿ ಕುಟುಂಬದ ಮಗಳಾಗಿದ್ದು, ಪತ್ರಕರ್ತೆಯಾಗಿ ಕೆಲಸ ಮಾಡುತ್ತಿರುತ್ತಾಳೆ.
ಇದನ್ನೂ ಓದಿ: Rani Kii Prem Kahaani: ಧರ್ಮೇಂದ್ರ ಸುಂದರ, ಲಿಪ್ ಲಾಕ್ ಮಾಡುವಾಗ ನನ್ನ ಪತಿಯೇ ತಲೆ ಕೆಡಿಸಿಕೊಂಡಿಲ್ಲ ಎಂದ ಶಬಾನಾ!
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಬಿಡುಗಡೆಗೆ ಮುನ್ನ, ರಣವೀರ್ ಅವರು ಹಿರಿಯರಾದ ಧರ್ಮೇಂದ್ರ, ಜಯಾ ಮತ್ತು ಶಬಾನಾ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದರು. “ಧರಮ್ ಜೀ ಅವರು ಶ್ರೇಷ್ಠ ಸೂಪರ್ಸ್ಟಾರ್ಗಳಲ್ಲಿ ಒಬ್ಬರು. ಅವರು ಕಮಾಂಡ್ ಮಾಡುವ ರೀತಿಯಿಂದಲೇ ಅವರತ್ತ ಒಂದು ಸೆಳವು ಹುಟ್ಟಿಕೊಳ್ಳುತ್ತದೆ. ಹಾಗೆಯೇ ಈ ಮೂವರು ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡಿರುವುದು ನಿಜಕ್ಕೂ ಅದ್ಭುತ ಅನುಭವವನ್ನು ನೀಡಿದೆ” ಎಂದು ರಣವೀರ್ ಹೇಳಿಕೊಂಡಿದ್ದರು.