Site icon Vistara News

Mahesh Babu | ಮಹೇಶ್‌ ಬಾಬುಗೆ ತಾಯಿಯಾಗಿ ನಟಿಸಲಿದ್ದಾರಾ ರಾಣಿ ಮುಖರ್ಜಿ?

Mahesh Babu

ಬೆಂಗಳೂರು: ಟಾಲಿವುಡ್‌ ನಟ ಮಹೇಶ್‌ ಬಾಬು ಅವರು (Mahesh Babu ) ತ್ರಿವಿಕ್ರಮ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾ ಘೋಷಣೆ ಆಗಿದ್ದು, ಮುಂದಿನ ವರ್ಷ ಚಿತ್ರೀಕರಣ ಶುರುವಾಗಲಿದೆ. ಚಿತ್ರದಲ್ಲಿ ಮಹೇಶ್‌ ಬಾಬು ಅವರ ತಾಯಿಯ ಪಾತ್ರಕ್ಕೆ ಬಾಲಿವುಡ್‌ ನಟಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ತ್ರಿವಿಕ್ರಮ್ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಮಹೇಶ್ ಬಾಬು ತಾಯಿ ಪಾತ್ರದಲ್ಲಿ ನಟಿಸಲು ಬಾಲಿವುಡ್‌ನ ಖ್ಯಾತ ನಟಿ ರಾಣಿ ಮುಖರ್ಜಿಯನ್ನು ಕರೆತರಲಾಗುತ್ತಿದೆ ಎನ್ನಲಾಗಿದೆ. ರಾಣಿ ಮುಖರ್ಜಿ ಅವರು ಮಹೇಶ್‌ ಬಾಬು ಅವರಿಗಿಂತಲೂ ಸಣ್ಣ ವಯಸ್ಸಿನವರಾಗಿದ್ದು, ವರದಿಗಳ ಪ್ರಕಾರ, ರಾಣಿ ಮುಖರ್ಜಿ, ಮಹೇಶ್ ತಾಯಿಯಾಗಿ ಅಲ್ಲ ಬದಲಿಗೆ ಮಲತಾಯಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಇದನ್ನೂ ಓದಿ | ಮಹೇಶ್‌ ಬಾಬು ತಂದೆ ನಟ ಕೃಷ್ಣ ಹೃದಯಸ್ತಂಭನದಿಂದ ನಿಧನ

ಭಾರಿ ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾದಲ್ಲಿ ಮಹೇಶ್ ಬಾಬುಗೆ ಇಬ್ಬರು ನಾಯಕಿಯರು. ನಟಿ ಪೂಜಾ ಹೆಗ್ಡೆ ಹಾಗೂ ಕನ್ನಡತಿ ಶ್ರೀಲೀಲಾ ಇಬ್ಬರೂ ಮಹೇಶ್ ಬಾಬು ಜತೆ ನಟಿಸುತ್ತಿದ್ದಾರೆ. ಈಗ ತಂಡಕ್ಕೆ ರಾಣಿ ಮುಖರ್ಜಿಯೂ ಎಂಟ್ರಿ ಕೊಟ್ಟಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ | Mahesh Babu | ಸಿನಿಮಾದಿಂದ ದೂರ ಉಳಿಯಲು ಕಾರಣ ಮಹೇಶ್‌ ಬಾಬು ಎಂದ ಪತ್ನಿ ನಮ್ರತಾ

Exit mobile version