Ranjani Raghavan: ಮಾಹೇಶ್ವರದ ನರ್ಮದಾ ಘಾಟ್ ಅರಮನೆ ಮುಂದೆ ʻಕನ್ನಡತಿʼ ರಂಜನಿ ರಾಘವನ್ Yashaswi Devadiga 2 ವರ್ಷಗಳು ago ಸ್ಯಾಂಡಲ್‌ವುಡ್ ನಟಿ ರಂಜನಿ ರಾಘವನ್ (Ranjani Raghavan) ಪುಣ್ಯ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಧ್ಯ ಪ್ರದೇಶದಲ್ಲಿನ ಉಜ್ಜಯಿನಿಯ ಮಹಾಕಾಲೇಶ್ವರನ, ಓಂಕಾರೇಶ್ವರ, ಮಮಲೇಶ್ವರ ದೇವಸ್ಥಾನ ಸೇರಿ ಅಲ್ಲಿನ ಇನ್ನೂ ಕೆಲವು ಪುಣ್ಯ ಸ್ಥಳಗಳಿಗೆ ಭೇಟಿ ನೀಡಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಮಾಹೇಶ್ವರದ ನರ್ಮದಾ ಘಾಟ್, ಮರಾಠ ಸಂಸ್ಥಾನದ ಧೀಮಂತ ರಾಣಿ ಅಹಿಲ್ಯಾಬಾಯಿ ಹೋಳ್ಕರ್‌ಳ ರಾಜವಾಡ ಅರಮನೆ ಮತ್ತು ದೇವಸ್ಥಾನಗಳನ್ನು ಕಣ್ಮುಂಬಿಕೊಂಡಿದ್ದಾರೆ. ನಟಿ ಇನ್‌ಸ್ಟಾದಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿ ʻಮಾಹೇಶ್ವರದ ನರ್ಮದಾ ಘಾಟ್, ಮರಾಠ ಸಂಸ್ಥಾನದ ಧೀಮಂತ ರಾಣಿ ಅಹಿಲ್ಯಾಬಾಯಿ ಹೋಳ್ಕರ್‌ಳ ಹಿರಿಮೆ ಗರಿಮೆಗಳನ್ನು ಸಾರುವ ರಾಜವಾಡ ಅರಮನೆ ಮತ್ತು ದೇವಸ್ಥಾನಗಳನ್ನು ಕಣ್ಮುಂಬಿಕೊಂಡು ಸಂತಸಪಟ್ಟಿದ್ದು ಹೀಗೆʼʼಎಂದು ಬರೆದುಕೊಂಡಿದ್ದಾರೆ. ಕಿರುತೆರೆ ಮೂಲಕ ಎಂಟ್ರಿಯಾಗಿ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ನಟಿ ರಂಜನಿ ರಾಘವನ್ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.