ಮುಂಬೈ: ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC Launch) ಗ್ರ್ಯಾಂಡ್ ಲಾಂಚ್‌ನಲ್ಲಿ, ಬಾಲಿವುಡ್ ಸೆಲೆಬ್ರಿಟಿಗಳು ಉತ್ಸಾಹಭರಿತ ಪ್ರದರ್ಶನಗಳನ್ನು ನೀಡಿದ್ದಾರೆ. ಬೆರಗುಗೊಳಿಸುವ ರೆಡ್ ಕಾರ್ಪೆಟ್ ಬಟ್ಟೆಗಳ ಹೊರತಾಗಿ, ಬಾಲಿವುಡ್ ತಾರೆಯರ ಪ್ರದರ್ಶನಗಳು ಎಲ್ಲರ ಗಮನವನ್ನು ಸೆಳೆದವು. ಪ್ರಿಯಾಂಕಾ ಚೋಪ್ರಾ, ರಣವೀರ್ ಸಿಂಗ್, ವರುಣ್ ಧವನ್, ಶಾರುಖ್ ಖಾನ್ ಮತ್ತು ಇತರ ಸೆಲೆಬ್ರಿಟಿಗಳು ಪ್ರದರ್ಶನದಿಂದ ಪ್ರೇಕ್ಷಕರನ್ನು ರಂಜಿಸಿದರು.
ಇದೀಗ ರಣವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಡ್ಯಾನ್ಸ್ ಸಖತ್ ವೈರಲ್ ಆಗಿದ್ದು, ಈ ವಿಡಿಯೊಗೆ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ದಿಲ್ ಧಡ್ಕ್ನೆ ದೋ ಚಿತ್ರದ ಗಲ್ಲಾನ್ ಗುಡಿಯಾನ್ (Gallan Goodiyaan) ಹಾಡಿಗೆ ರಣವೀರ್ ಹಾಗೂ ಪ್ರಿಯಾಂಕ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಚಿತ್ರದ ಪಾತ್ರಗಳಾದ ಆಯೇಷಾ ಮತ್ತು ಕಬೀರ್ ನೆನಪಿಸುವಂತಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು “ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ರಣವೀರ್ ಸಿಂಗ್ ದಿಲ್ ಧಡಕ್ನೆ ದೋ (Dil Dhadkne Do) ಚಿತ್ರದ ಗಲ್ಲಾ ಗುಡಿಯನ್‌ಗೆ ಡ್ಯಾನ್ಸ್ ಮಾಡಿದ್ದು, NMACC ಈವೆಂಟ್‌ನ ಹೈಲೈಟ್ ಆಗಿದೆʼʼಎಂದು ಕಾಮೆಂಟ್ ಮಾಡಿದ್ದಾರೆ. ರಣವೀರ್-ಪ್ರಿಯಾಂಕಾ ಅಲ್ಲದೆ, ಶಾರುಖ್, ಆಲಿಯಾ ಭಟ್, ರಶ್ಮಿಕಾ ಮಂದಣ್ಣ ಮತ್ತು ವರುಣ್ ಸೇರಿದಂತೆ ಇತರರು ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ರಂಜಿಸಿದರು.
ಇದನ್ನೂ ಓದಿ: Priyanka Chopra: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಿಯಾಂಕಾ-ನಿಕ್ ಮಿಂಚಿದ್ದು ಹೀಗೆ!
ರಣವೀರ್-ಪ್ರಿಯಾಂಕಾ ಸ್ಟೆಪ್ಸ್
ಏನಿದು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC)?
ಮುಂಬಯಿಯ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿರುವ ರಿಲಯನ್ಸ್ ಜಿಯೊ ವರ್ಲ್ಡ್ ಸೆಂಟರ್ನೊಳಗೆ ನೂತನವಾಗಿ ನಿರ್ಮಿಸಲಾಗಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಅದ್ಧೂರಿಯಾಗಿ ಮಾರ್ಚ್ 31ರಂದು ನಡೆಯಿತು. ನೀತಾ ಅಂಬಾನಿ, ಮುಕೇಶ್ ಅಂಬಾನಿ ಮತ್ತು ಅವರ ಇಡೀ ಕುಟುಂಬದವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ಬಾಲಿವುಡ್ ಗಣ್ಯರಾದ ಶಾರುಖ್ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಲಿಯಾ ಭಟ್, ಜಾನ್ವಿ ಕಪೂರ್, ವರುಣ್ ಧವನ್, ಕೀರ್ತಿ ಸನೂನ್, ಕರೀನಾ ಕಪೂರ್, ಆಮೀರ್ ಖಾನ್, ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಆಗಮಿಸಿದ್ದರು.
ರಜನಿಕಾಂತ್ ಅವರೂ ಪಾಲ್ಗೊಂಡಿದ್ದರು. ಅಂಬಾನಿ ಕುಟುಂಬದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಕೂಡ ಉಪಸ್ಥಿತರಿದ್ದರು. ಇವರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು, ಸಂಭ್ರಮಸಿದರು. ಅಂದಹಾಗೇ, ಈ ಸಾಂಸ್ಕೃತಿಕ ಕೇಂದ್ರ ನೀತಾ ಅಂಬಾನಿಯವರ ಕನಸಿನ ಕೂಸು. ಭಾರತದ ಕಲಾ ಪ್ರಕಾರಗಳನ್ನು ಪಸರಿಸುವ, ಉತ್ತೇಜಿಸುವ ಸಲುವಾಗಿ ಅವರು ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿ ಮೂರು ಕಲಾ ಪ್ರದರ್ಶನ ವೇದಿಕೆಗಳು ಇವೆ. ಅದರಲ್ಲಿ ಒಂದು 2000 ಆಸನಗಳುಳ್ಳ ಭವ್ಯವಾದ ಥಿಯೇಟರ್. ಇನ್ನೊಂದು 250 ಸೀಟ್ಗಳಿರುವ ಸ್ಟುಡಿಯೋ ಥಿಯೇಟರ್ ಮತ್ತು ಇನ್ನೊಂದು 125 ಕ್ಯೂಬ್ ಸೀಟ್ಗಳುಳ್ಳ ವೇದಿಕೆ. ಇಲ್ಲಿ ಆರ್ಟ್ ಹೌಸ್ ಕೂಡ ಇದೆ.