Site icon Vistara News

Ranveer Singh | ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ ರಣವೀರ್‌ ಸಿಂಗ್‌: ʻಸರ್ಕಸ್‌ʼ ಸಿನಿಮಾ ಹೊಸ ಅನೌನ್ಸ್‌ಮೆಂಟ್‌ ಏನು?

Ranveer Singh

ಬೆಂಗಳೂರು: ಬಾಲಿವುಡ್‌ ನಟ ರಣವೀರ್‌ ಸಿಂಗ್‌ (Ranveer Singh) ತಮ್ಮ ಮುಂಬರುವ ʻಸರ್ಕಸ್ʼ ಸಿನಿಮಾದ ಟ್ರೈಲರ್‌ ಮತ್ತು ಟೀಸರ್‌ ಬಿಡುಗಡೆಯ ದಿನಾಂಕವನ್ನು ವಿಶೇಷ ವಿಡಿಯೊದೊಂದಿಗೆ ಅನೌನ್ಸ್‌ ಮಾಡಿದ್ದಾರೆ. ಈ ಚಿತ್ರ ವಿಲಿಯಂ ಷೇಕ್ಸ್‌ಪಿಯರ್‌ ಅವರ ʻಎ ಕಾಮಿಡಿ ಆಫ್ ಎರರ್ಸ್‌ʼ (a comedy of errors) ನಾಟಕದ ಆಧಾರಿತವಾಗಿದೆ. ತಮ್ಮ ವೃತ್ತಿ ಜೀವನದಲ್ಲಿಯೇ ರಣವೀರ್‌ ಸಿಂಗ್‌ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಟ್ರೈಲರ್‌ ಹಾಗೂ ಟೀಸರ್‌ ಡಿಸೆಂಬರ್‌ 2ರಂದು ಬಿಡುಗಡೆಯಾಗುತ್ತಿದೆ. ಸರ್ಕಸ್‌ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ಪೂಜಾ ಹೆಗ್ಡೆ ಮತ್ತು ವರುಣ್ ಶರ್ಮಾ ನಟಿಸಿದ್ದಾರೆ. ಉಳಿದಂತೆ ಟಿಕು ತಲ್ಸಾನಿಯಾ, ವ್ರಾಜೇಶ್ ಹಿರ್ಜಿ, ಅಶ್ವಿನಿ ಕಲ್ಸೇಕರ್, ಮುರಳಿ ಶರ್ಮಾ, ವಿಜಯ್ ಪಾಟ್ಕರ್, ಬ್ರಜೇಂದ್ರ ಕಲಾ ತಾರಾಗಣವಿದೆ.

ಇದನ್ನೂ ಓದಿ | ರಣವೀರ್‌ ಸಿಂಗ್‌ ನಗ್ನ ಚಿತ್ರ ವಿವಾದ : ಟ್ವಿಟರ್‌ನಲ್ಲಿ ಬಟ್ಟೆ ದಾನ ಅಭಿಯಾನ, RGV ಟ್ವೀಟ್‌ನಲ್ಲಿ ಹೇಳಿದ್ದೇನು?

ಡಿಸೆಂಬರ್ 24ರಂದು ಚಿತ್ರ ತೆರೆ ಮಲೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರೋಹಿತ್‌ ಶೆಟ್ಟಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ʻಎ ಕಾಮಿಡಿ ಆಫ್ ಎರರ್ಸ್‌ನಿಂದʼ ಸ್ಫೂರ್ತಿ ಪಡೆದಿರುವ ಚಿತ್ರ ಇದೊಂದೆ ಅಲ್ಲ. ಈ ಮೊದಲು ಸಂಜೀವ್ ಕುಮಾರ್ ಅಭಿನಯದ ʻಅಂಗೂರ್ʼ ಮತ್ತು ಕಿಶೋರ್ ಕುಮಾರ್ ಅವರ ʻದೋ ದೂನೀ ಚಾರ್ʼ ಕಥೆಯನ್ನು ಅಳವಡಿಸಿಕೊಂಡಿತ್ತು.

ರಣವೀರ್ ಸಿಂಗ್ ಅವರಿಗೆ ಇತ್ತೀಚೆಗೆ ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಸರ್ಕಸ್​’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಕರಣ್ ಜೋಹರ್ ನಿರ್ದೇಶನ ಮಾಡುತ್ತಿದ್ದಾರೆ. ಆಲಿಯಾ ಭಟ್ ಈ ಚಿತ್ರಕ್ಕೆ ನಾಯಕಿ.

ಇದನ್ನೂ ಓದಿ | Ranveer Singh Cries | ದುಬೈ ಅವಾರ್ಡ್‌ ಫಂಕ್ಷನ್‌ನಲ್ಲಿ ರಣವೀರ್‌ ಸಿಂಗ್‌ ಕಣ್ಣೀರು, ಭಾವುಕರಾಗಲು ಕಾರಣವೇನು?

Exit mobile version