Site icon Vistara News

Ranveer Singh | ರಣವೀರ್‌ ಸಿಂಗ್‌ ನಟನೆಯ ʻಸರ್ಕಸ್‌ʼ ಟ್ರೈಲರ್‌ ಔಟ್‌: ಸಖತ್‌ ಸ್ಟೆಪ್ಸ್‌ ಹಾಕಿದ ದೀಪಿಕಾ ಪಡುಕೋಣೆ!

Ranveer Singh (circus trailer out)

ಬೆಂಗಳೂರು: ಬಾಲಿವುಡ್‌ ನಟ ರಣವೀರ್‌ ಸಿಂಗ್‌ (Ranveer Singh) ನಟನೆಯ ʻಸರ್ಕಸ್‌ʼ ಸಿನಿಮಾದ ಟ್ರೈಲರ್‌ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ‘ಸರ್ಕಸ್’ ಕಲಾವಿದನ ಪಾತ್ರದಲ್ಲಿ ರಣ್‌ವೀರ್ ಸಿಂಗ್ ನಟಿಸಿದ್ದಾರೆ. ಆತನ ದೇಹದಲ್ಲಿ ವಿದ್ಯುತ್ ಪ್ರವಹಿಸುತ್ತಿರುತ್ತದೆ. ತನಗಿರುವ ಸೂಪರ್ ಪವರ್‌ನಿಂದ ಆತ ಮಾಡುವ ಸಾಹಸಗಳು ‘ಸರ್ಕಸ್‌’ನ ಹೈಲೈಟ್.

ಇದೀಗ ಸರ್ಕಸ್‌ ಟ್ರೈಲರ್‌ ನೋಡುಗರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಸೋಲುಂಡ ರಣವೀರ್‌ ಸಿಂಗ್‌ ಎಲೆಕ್ಟ್ರಿಕ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ಈ ಕಾಮಿಡಿ ಎಂಟರ್‌ಟೈನರ್‌ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ರಣ್‌ವೀರ್ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಜಾನಿ ಲಿವರ್, ವರುಣ್ ಶರ್ಮಾ, ಸಂಜಯ್ ಮಿಶ್ರಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಸಖತ್‌ ಸ್ಪೆಪ್ಸ್‌ ಹಾಕಿ ಮಿಂಚಿದ್ದಾರೆ.

ಇದನ್ನೂ ಓದಿ | Ranveer Singh Cries | ದುಬೈ ಅವಾರ್ಡ್‌ ಫಂಕ್ಷನ್‌ನಲ್ಲಿ ರಣವೀರ್‌ ಸಿಂಗ್‌ ಕಣ್ಣೀರು, ಭಾವುಕರಾಗಲು ಕಾರಣವೇನು?

ಸಾಂಗ್‌ ಒಂದರಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡಿದ್ದಾರೆ. ʻಕರೆಂಟ್‌ ಲಗಾರೇʼ ಹಾಡಿಗೆ ರಣವೀರ್‌ ಮತ್ತು ದೀಪಿಕಾ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. 60ರ ದಶಕದಲ್ಲಿ ‘ಸರ್ಕಸ್‌’ ಕಥೆಯನ್ನು ಹೇಳಲಾಗುತ್ತಿದೆ. ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಬಹುತೇಕ ಸೆಟ್‌ಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿಯೇ ರಣವೀರ್‌ ಸಿಂಗ್‌ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 24ರಂದು ಚಿತ್ರ ತೆರೆ ಮಲೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರೋಹಿತ್‌ ಶೆಟ್ಟಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ʻಎ ಕಾಮಿಡಿ ಆಫ್ ಎರರ್ಸ್‌ನಿಂದʼ ಸ್ಫೂರ್ತಿ ಪಡೆದಿರುವ ಚಿತ್ರ ಇದೊಂದೆ ಅಲ್ಲ. ಈ ಮೊದಲು ಸಂಜೀವ್ ಕುಮಾರ್ ಅಭಿನಯದ ʻಅಂಗೂರ್ʼ ಮತ್ತು ಕಿಶೋರ್ ಕುಮಾರ್ ಅವರ ʻದೋ ದೂನೀ ಚಾರ್ʼ ಕಥೆಯನ್ನು ಅಳವಡಿಸಿಕೊಂಡಿತ್ತು.

ಇದನ್ನೂ ಓದಿ | Ranveer Singh | ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ ರಣವೀರ್‌ ಸಿಂಗ್‌: ʻಸರ್ಕಸ್‌ʼ ಸಿನಿಮಾ ಹೊಸ ಅನೌನ್ಸ್‌ಮೆಂಟ್‌ ಏನು?

Exit mobile version