Site icon Vistara News

Ranveer Singh | ಮತ್ತೆ ಸೋಲುಂಡ ರಣವೀರ್‌ ಸಿಂಗ್‌: ʻಸರ್ಕಸ್‌ʼ ಸಿನಿಮಾ ಕಲೆಕ್ಷನ್‌ ಮಾಡಿದ್ದೆಷ್ಟು?

Ranveer Singh

ಬೆಂಗಳೂರು: ರೋಹಿತ್‌ ಶೆಟ್ಟಿ ನಿರ್ದೇಶನ ಹಾಗೂ ರಣವೀರ್‌ ಸಿಂಗ್‌ (Ranveer Singh) ಅಭಿನಯದ ʻಸರ್ಕಸ್‌ʼ ಸಿನಿಮಾ ಡಿಸೆಂಬರ್‌ 23ರಂದು ಬಿಡುಗಡೆಯಾಗಿದೆ. ಮೊದಲ ದಿನವೇ ನೀರಸ ಪ್ರದರ್ಶನ ಕಂಡಿದೆ. ಮೊದಲ ದಿನ ದೇಶಾದ್ಯಂತ ಮೂರು ಲಕ್ಷಕ್ಕೂ ಕಡಿಮೆ ಟಿಕೆಟ್ ಮಾರಾಟ ಮಾಡಿದ್ದು, ಗಳಿಸಿರುವುದು ಕೇವಲ 6 ಕೋಟಿ ಹಣವಷ್ಟೆ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯೂ ರಣವೀರ್‌ ಸಿಂಗ್‌ ಸೋಲು ಅನುಭವಿಸಿದ್ದಾರೆ.

ನಟ ರಣಬೀರ್‌ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಚಿತ್ರವು ಹೇಳುವಷ್ಟು ಹೆಸರು ಮಾಡಿಲ್ಲ. ಚಿತ್ರದಲ್ಲಿ ರಣವೀರ್‌ ಸಿಂಗ್‌ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಜಾನಿ ಲಿವರ್, ವರುಣ್ ಶರ್ಮಾ, ಸಂಜಯ್ ಮಿಶ್ರಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಇದನ್ನೂ ಓದಿ | Ranveer Singh | ರಣವೀರ್‌ ಸಿಂಗ್‌ ನಟನೆಯ ʻಸರ್ಕಸ್‌ʼ ಟ್ರೈಲರ್‌ ಔಟ್‌: ಸಖತ್‌ ಸ್ಟೆಪ್ಸ್‌ ಹಾಕಿದ ದೀಪಿಕಾ ಪಡುಕೋಣೆ!

ವರದಿ ಪ್ರಕಾರ ಸರ್ಕಸ್ ₹7 ಕೋಟಿ ರೂ ಕಲೆಕ್ಷನ್‌ ಮಾಡಿದೆ. ರೋಹಿತ್ ಶೆಟ್ಟಿ ಸಿನಿಮಾಗಳು ಇತ್ತೀಚೆಗೆ ಸೋತೇ ಇರಲಿಲ್ಲ. ʻಸಿಂಘಂʼ, ʻಸೂರ್ಯವಂಶಿʼ ಇನ್ನಿತರೆ ಸಿನಿಮಾಗಳು ಸತತವಾಗಿ ಸೂಪರ್ ಹಿಟ್ ಆಗಿದ್ದವು. ಆದರೆ ಈಗ ‘ಸರ್ಕಸ್’ ಸಿನಿಮಾ ಸೋತಿದೆ. ಇದು ರೋಹಿತ್ ಶೆಟ್ಟಿಗೆ ಹಿನ್ನಡೆ ಎನಿಸಿಕೊಂಡಿದೆ. ಆದರೆ ‘ಸರ್ಕಸ್’ ಸಿನಿಮಾ ವಿಮರ್ಶಕರಿಂದಲೂ ತೀವ್ರ ಟೀಕೆಗೆ ಒಳಗಾಗಿದೆ.

ಈ ಸಿನಿಮಾದಲ್ಲಿ ರಣವೀರ್‌ ಸಿಂಗ್‌ ಸಿಂಗ್ ದ್ವಿಪಾತ್ರದಲ್ಲಿ ನಟಿಸಿದ್ದು, ಸಿನಿಮಾ ಹಾಸ್ಯಪ್ರಧಾನ ಸಿನಿಮಾ ಆಗಿದೆ. ಸಿನಿಮಾದ ಹಾಸ್ಯಕ್ಕೆ ಸೂಕ್ತವಾದ ಲಾಜಿಕ್ ಇಲ್ಲವೆಂದು ಟೀಕೆ ಮಾಡಿದ್ದಾರೆ ವಿಮರ್ಶಕರು. ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಪ್ರತಿಕ್ರಿಯೆಯನ್ನು ಪಡೆಯದ ರಣವೀರ್ ಅವರ ಮೂರನೇ ಚಿತ್ರ ಇದಾಗಿದೆ.

ʻಎ ಕಾಮಿಡಿ ಆಫ್ ಎರರ್ಸ್‌ನಿಂದʼ ಸ್ಫೂರ್ತಿ ಪಡೆದಿರುವ ಚಿತ್ರ ಇದೊಂದೆ ಅಲ್ಲ. ಈ ಮೊದಲು ಸಂಜೀವ್ ಕುಮಾರ್ ಅಭಿನಯದ ʻಅಂಗೂರ್ʼ ಮತ್ತು ಕಿಶೋರ್ ಕುಮಾರ್ ಅವರ ʻದೋ ದೂನೀ ಚಾರ್ʼ ಕಥೆಯನ್ನು ಅಳವಡಿಸಿಕೊಂಡಿತ್ತು.

ಇದನ್ನೂ ಓದಿ | Ranveer Singh | ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ ರಣವೀರ್‌ ಸಿಂಗ್‌: ʻಸರ್ಕಸ್‌ʼ ಸಿನಿಮಾ ಹೊಸ ಅನೌನ್ಸ್‌ಮೆಂಟ್‌ ಏನು?

Exit mobile version