Site icon Vistara News

Ranveer Singh | ಬೆತ್ತಲೆ ಫೋಟೊ ನಂದಲ್ಲ ಎಂದ ರಣವೀರ್‌ ಸಿಂಗ್‌!

Ranaveer sing

ಬೆಂಗಳೂರು: ಬೆತ್ತಲೆಯಾಗಿ ನಿಂತು, ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್‌ (Ranveer Singh) ನೀಡಿ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಈಗ ಉಲ್ಟಾ ಹೊಡಿದಿದ್ದಾರೆ. “ವೈರಲ್ ಆಗಿರುವ ಫೋಟೋಗಳಲ್ಲಿ ಒಂದು ಫೋಟೊ ನನ್ನದಲ್ಲ. ಯಾರದೋ ಮುಖಕ್ಕೆ ನನ್ನ ಮುಖ ಜೋಡಿಸಿದ್ದಾರೆʼʼ ಎಂದು ಹೇಳಿಕೆ ನೀಡಿದ್ದಾರೆ.

ಕಳೆದ ತಿಂಗಳು ಮ್ಯಾಗಜಿನ್‌ವೊಂದಕ್ಕಾಗಿ ನಟ ರಣವೀರ್‌ ಸಿಂಗ್‌ ಫೋಟೊಶೂಟ್‌ನಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಹಲವು ಬಗೆಯ ಬೆತ್ತಲೆ ಭಂಗಿಯಲ್ಲಿ ಫೋಟೊಗೆ ಪೋಸ್‌ ಕೊಟ್ಟಿದ್ದರು. ಆ ಫೋಟೊಗಳು ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಮೊದಲು ಮ್ಯಾಗಜಿನ್‌ ತಂಡವು ನಟನ ಫೋಟೊಗಳನ್ನು ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿತ್ತು. ಇದಾದ ಬಳಿಕ ರಣವೀರ್‌ ಸಿಂಗ್‌ ಅವರೂ ಪೋಸ್ಟ್‌ ಮಾಡಿಕೊಂಡಿದ್ದರು. ಮಹಿಳೆಯರಿಗೆ ಧಕ್ಕೆ ತರುವ ರೀತಿಯಲ್ಲಿ ರಣವೀರ್ ಸಿಂಗ್ ನಡೆದುಕೊಂಡಿದ್ದಾರೆ ಎಂದು ಕಾರಣ ಕೊಟ್ಟು ಎನ್‌ಜಿಒ ಸಂಸ್ಥೆಯೊಂದು ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. 

ರಣವೀರ್‌ ಸಿಂಗ್‌ ಪೋಟೊ ಮಾರ್ಫ್‌ ಮಾಡಲಾಗಿದೆಯಂತೆ!

ಈ ನಿಟ್ಟಿನಲ್ಲಿ ಆಗಸ್ಟ್​ 30ರೊಳಗೆ ಠಾಣೆಗೆ ಬಂದು ಹೇಳಿಕೆ ದಾಖಲಿಸುವಂತೆ ರಣವೀರ್​ ಸಿಂಗ್​ ಅವರಿಗೆ ನೋಟಿಸ್​ ನೀಡಲಾಗಿತ್ತು. ಆಗಸ್ಟ್​ 29ರ ಬೆಳಗ್ಗೆ 7.30ಕ್ಕೆ ಅವರು ಪೊಲೀಸ್​ ಠಾಣೆಯಲ್ಲಿ ಹಾಜರಾಗಿದ್ದರು. ಸುಮಾರು 2 ಗಂಟೆಗಳ ಕಾಲ ಅವರ ವಿಚಾರಣೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಚಾರಣೆ ವೇಳೆ ವೈರಲ್​ ಆಗಿರುವ ಎಲ್ಲ ಫೋಟೋಗಳನ್ನು ರಣವೀರ್​ ಸಿಂಗ್ ಅವರಿಗೆ ಪೊಲೀಸರು ತೋರಿಸಿದ್ದಾರೆ. ಆದರೆ, ಆ ಪೈಕಿ ಒಂದು ಫೋಟೊ ಮಾತ್ರ ತಮ್ಮದಲ್ಲ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ. ಗುಪ್ತಾಂಗ ಕಾಣುವ ರೀತಿಯಲ್ಲಿ ಇರುವ ಬೇರೆ ಯಾರದ್ದೋ ಫೋಟೊಗೆ ತಮ್ಮ ಮುಖವನ್ನು ಜೋಡಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಈ ವಿಚಾರಣೆ ಮುಂದುವರಿದಿದೆ.

ಇದೀಗ ರಣವೀರ್‌ ಹೇಳಿದಂತೆ ಅವರ ಚಿತ್ರವನ್ನು ಮಾರ್ಫ್ ಮಾಡಲಾಗಿದೆಯೇ ಎಂದು ಖಚಿತಪಡಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ. ರಣವೀರ್‌ ಸಿಂಗ್‌ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ ಫೋಟೋಗಳು ಅಶ್ಲೀಲತೆಯ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ. ಏಕೆಂದರೆ ಯಾವುದೇ ಖಾಸಗಿ ಭಾಗಗಳು ಗೋಚರಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Ranveer Singh | ಬೆತ್ತಲೆ ಫೋಟೊ ವಿವಾದ: ಸತತ ಎರಡು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ ನಟ!

ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ ʻʻರಣವೀರ್‌ ತಮ್ಮ ಹೇಳಿಕೆಯಲ್ಲಿ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಏಳು ಫೋಟೊಗಳಲ್ಲಿ ಯಾವುದೂ ಅಶ್ಲೀಲವಾಗಿಲ್ಲ. ಅವರು ಒಳ ಉಡುಪು ಧರಿಸಿದ್ದರು ಎಂದು ಹೇಳಿದ್ದಾರೆ. ಅವರ ಖಾಸಗಿ ಭಾಗಗಳು ಗೋಚರಿಸುತ್ತಿವೆ ಎಂದು ದೂರುದಾರರು ಆರೋಪಿಸಿರುವ ಫೋಟೊವನ್ನು ಮಾರ್ಫ್ ಮಾಡಲಾಗಿದೆಯೇ ಹೊರತು ಫೋಟೊಶೂಟ್‌ನ ಭಾಗವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಫೋಟೊಶೂಟ್ ಸಮಯದಲ್ಲಿ ತೆಗೆದ ಎಲ್ಲ ಫೋಟೊಗಳನ್ನು ಅವರು ನಮಗೆ ಒದಗಿಸಿದ್ದಾರೆ. ಪೊಲೀಸ್ ತಂಡವು ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಸಹ ಪರಿಶೀಲಿಸಿದ್ದು, ಅದರಲ್ಲಿ ದೂರುದಾರರು ನೀಡಿದ ಫೋಟೊ ಇಲ್ಲ” ಎಂದು ಹೇಳಿದ್ದಾರೆ.

ಈಗ ರೋಹಿತ್ ಶೆಟ್ಟಿಯ ʻಸರ್ಕಸ್ʼ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಪೂಜಾ ಹೆಗ್ಡೆ ಜತೆ ರಣವೀರ್ ಸಿಂಗ್ನಟಿಸಲಿದ್ದಾರೆ. ವಿಲಿಯಂ ಷೇಕ್ಸ್‌ಪಿಯರ್‌ನ ʻಕಾಮಿಡಿ ಆಫ್ ಎರರ್ಸ್‌ನʼ ರೂಪಾಂತರ ಇದಾಗಿದ್ದು, ಈ ಚಿತ್ರವು ಈ ವರ್ಷದ ಕ್ರಿಸ್ಮಸ್ ಸಮಯದಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ಅವರು ಆಲಿಯಾ ಭಟ್ ಜತೆ ನಟಿಸಿದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ಫೆಬ್ರವರಿ 11, 2023 ರಂದು ಥಿಯೇಟರ್‌ಗಳಲ್ಲಿ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ | ರಣವೀರ್‌ ಸಿಂಗ್‌ ನಗ್ನ ಚಿತ್ರ ವಿವಾದ : ಟ್ವಿಟರ್‌ನಲ್ಲಿ ಬಟ್ಟೆ ದಾನ ಅಭಿಯಾನ, RGV ಟ್ವೀಟ್‌ನಲ್ಲಿ ಹೇಳಿದ್ದೇನು?




Exit mobile version