ಬೆಂಗಳೂರು : ಬೆತ್ತಲೆಯಾಗಿ ನಿಂತು, ವಿವಿಧ ಬಗೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿ ವಿವಾದಕ್ಕೆ ಸಿಲುಕಿದ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ೨೨ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ನಟನ ವಿರುದ್ಧ ಎಫ್ಐಆರ್ಗಳ ದಾಖಲಾಗುತ್ತಿದ್ದಂತೆ, ಅಂತಿಮವಾಗಿ ಪ್ರಕರಣದಲ್ಲಿ ತನ್ನದೇ ಆದ ಹೇಳಿಕೆಯನ್ನು ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ರಣವೀರ್ ಸಿಂಗ್ ಅವರ ಹೇಳಿಕೆಯನ್ನು ಚೆಂಬೂರ್ ಪೊಲೀಸರು ಆಗಸ್ಟ್ 29ರಂದು ದಾಖಲಿಸಿಕೊಂಡಿದ್ದಾರೆ. ನಟ ಇಂದು ಬೆಳಿಗ್ಗೆ 9 ಗಂಟೆಗೆ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ಅವರು ಸುಮಾರು ಎರಡು ಗಂಟೆಗಳ ಕಾಲ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ವರದಿ ಆಗಿದೆ.
ಅಗತ್ಯ ಬಿದ್ದರೆ ನಟನಿಗೆ ಕರೆ ಮಾಡುತ್ತಾರೆ ಅಧಿಕಾರಿಗಳು!
ಕಳೆದ ತಿಂಗಳು ಮ್ಯಾಗಜಿನ್ವೊಂದಕ್ಕೆ ನಡೆಸಿದ ಫೋಟೊ ಶೂಟ್ನಲ್ಲಿ ಭಾಗಿಯಾಗಿದ್ದ ರಣವೀರ್ ಸಿಂಗ್ ಅವರ ಹಲವು ಬಗೆಯ ಬೆತ್ತಲೆ ಫೋಟೊಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಮೊದಲು ಮ್ಯಾಗಜಿನ್ ತಂಡವು ನಟನ ಫೋಟೊಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿತ್ತು. ಇದಾದ ಬಳಿಕ ರಣವೀರ್ ಸಿಂಗ್ ಅವರೂ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ | Ranveer Singh | ಬೆತ್ತಲೆ ಫೋಟೊದಿಂದ ರಣವೀರ್ಗೆ ಸಂಕಷ್ಟ, ಪೊಲೀಸರಿಂದ ನೋಟಿಸ್
ಬೆತ್ತಲೆ ಫೋಟೊಗಳ ಕುರಿತು ದೇಶಾದ್ಯಂತ ಟೀಕೆಗಳು ವ್ಯಕ್ತವಾಗಿದ್ದಲ್ಲದೆ, ಒಂದು ಎನ್ಜಿಒ ಹಾಗೂ ಮತ್ತೊಬ್ಬ ವ್ಯಕ್ತಿಯು ರಣವೀರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. “ಜಾಲತಾಣಗಳಲ್ಲಿ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದರಿಂದ ಮಹಿಳೆಯರ ಭಾವನೆಗಳಿಗೆ, ಅವರ ಗೌರವಕ್ಕೆ ಧಕ್ಕೆಯಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪೊಲೀಸ್ ಅಧಿಕಾರಿಗಳ ಪ್ರಕಾರ, “ ಚೆಂಬೂರ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ನಟ ರಣವೀರ್ ಸಿಂಗ್ ಅವರಿಗೆ ಸಮನ್ಸ್ ನೀಡಿತ್ತು. ನಟ ಹಾಜರಾಗಲು 2 ವಾರಗಳ ಕಾಲಾವಕಾಶವನ್ನು ಕೋರಿದ್ದರು. ಈಗ ಹೊಸ ದಿನಾಂಕವನ್ನು ನಿಗದಿಪಡಿಸಿದ ನಂತರ ಮುಂಬೈ ಚೆಂಬೂರ್ ಪೊಲೀಸರು ಹೊಸ ಸಮನ್ಸ್ ಅನ್ನು ಕಳುಹಿಸಿದ್ದಾರೆʼ. ಒಟ್ಟಿನಲ್ಲಿ ವೈವಿಧ್ಯಮಯ ಉಡುಪು ಧರಿಸಿ ಸುದ್ದಿಯಾಗುತ್ತಿದ್ದ ರಣವೀರ್ ಸಿಂಗ್ ಈಗ ಬೆತ್ತಲೆಯಾಗಿ ಪೋಸ್ ನೀಡಿದ್ದಕ್ಕೆ ಸಂಕಷ್ಟ ಎದುರಿಸುವಂತಾಗಿದೆ.
ಇದರ ನಡುವೆಯೇ ರಣವೀರ್ ಸಿಂಗ್ ಅವರು ರೋಹಿತ್ ಶೆಟ್ಟಿ ಅವರ ʻಸರ್ಕಸ್ʼ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಪೂಜಾ ಹೆಗ್ಡೆ ಅವರೊಂದಿಗೆ ನಟಿಸಲಿದ್ದಾರೆ. ವಿಲಿಯಂ ಷೇಕ್ಸ್ಪಿಯರ್ನ ʻಕಾಮಿಡಿ ಆಫ್ ಎರರ್ಸ್ನʼ ರೂಪಾಂತರವಾಗಿದ್ದು, ಈ ಚಿತ್ರವು ಈ ವರ್ಷದ ಕ್ರಿಸ್ಮಸ್ ಸಮಯದಲ್ಲಿ ಬಿಡುಗಡೆಯಾಗಲಿದೆ.
ಇದಲ್ಲದೆ, ಅವರು ಆಲಿಯಾ ಭಟ್ ಅವರೊಂದಿಗೆ ನಟಿಸಿದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ಫೆಬ್ರವರಿ 11, 2023 ರಂದು ಥಿಯೇಟರ್ಗಳಲ್ಲಿ ಬರುವ ನಿರೀಕ್ಷೆಯಿದೆ.
ಇದನ್ನೂ ಓದಿ | Ranveer singh | ಬೆತ್ತಲೆ ಪೋಸ್ ಕೊಟ್ಟ ರಣವೀರ್ ಕೂತ ಕಾರ್ಪೆಟ್ ಬೆಲೆ ಎಷ್ಟು?!