ಮುಂಬೈ: ಹಲವು ನಂತರ ಡಾನ್ ಸಿರೀಸ್‌ನಲ್ಲಿ ಮತ್ತೊಂದು ಸಿನಿಮಾ ಬರುವುದಕ್ಕೆ ಸಿದ್ಧತೆ ನಡೆಯುತ್ತಿರುವುದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಈ ಬಾರಿಯ ಡಾನ್ 3 (Don 3 Movie) ಸಿನಿಮಾದಲ್ಲಿ ನಟ ಶಾರುಖ್ ಖಾನ್ ‘ಡಾನ್’ ಆಗಿ ಮಿಂಚುವುದಿಲ್ಲ, ಬದಲಾಗಿ ನಟ ರಣವೀರ್ ಸಿಂಗ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು. ಡಾನ್ ಸಿರೀಸ್‌ನ ನಿರ್ಮಾಪಕ ಡಾನ್ 3 ಸಿನಿಮಾ ಮಾಡುವುದರ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದರು. ನಿರ್ದೇಶಕ ಫರ್ಹಾನ್ ಖಾನ್ ಅವರು ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬಿಜಿ ಇದ್ದಾರೆ ಎಂದೂ ತಿಳಿಸಿದ್ದರು. ಅದರ ಬೆನ್ನಲ್ಲೇ ನಟ ಶಾರುಖ್ ಖಾನ್ ಅವರು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನುವ ವರದಿ ಹೊರಬಿದ್ದಿತ್ತು. ಶಾರುಖ್ ಅವರು ಪಠಾಣ್ ಸಿನಿಮಾ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಮಾಡುವ ಯೋಜನೆಯಲ್ಲಿದ್ದು, ಡಾನ್ ಸಿನಿಮಾ ಅದಕ್ಕೆ ಸರಿಹೊಂದುವುದಿಲ್ಲ ಆದ ಕಾರಣ ಅದನ್ನು ಅವರು ಮಾಡುವುದಿಲ್ಲ ಎಂದು ಹೇಳಲಾಗಿತ್ತು.
ಇದನ್ನೂ ಓದಿ: Shah Rukh Khan : ಮಲ್ಲಿಕಾ ಶರಾವತ್ ಜತೆ ನಾನು ಆಡಬಹುದಾ ಎಂದು ಕೇಳುತ್ತಾರಂತೆ ಶಾರುಖ್! ವೈರಲ್ ಆಯ್ತು ವಿಡಿಯೊ
ಶಾರುಖ್ ಸಿನಿಮಾದಿಂದ ಹಿಂದೆ ನಡೆದ ಹಿನ್ನೆಲೆ ಸಿನಿತಂಡ ಮತ್ತೊಬ್ಬ ನಟನ ಹುಡುಕಾಟದಲ್ಲಿತ್ತು. ಇದೀಗ ನಟ ರಣವೀರ್ ಅವರು ಆ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಚಿತ್ರತಂಡವು ರಣವೀರ್ ಅವರನ್ನು ಡಾನ್ 3 ಆಗಿ ಪರಿಚಯಿಸುವ ವಿಡಿಯೊವನ್ನೂ ಬಿಡಲಿದೆ. ಅದಕ್ಕಾಗಿ ರಣವೀರ್ ಅವರು ಈಗಾಗಲೇ ಚಿತ್ರೀಕರಣ ಮಾಡಿದ್ದಾಗಿದೆ ಎಂದೂ ವರದಿಯಾಗಿದೆ.
ಡಾನ್ ಸೀರಿಸ್‌ನ ಮೊದಲನೇ ಭಾಗ 2006ರಲ್ಲಿ ಬಿಡುಗಡೆಯಾಗಿತ್ತು. 2011ರಲ್ಲಿ ಅದರ ಎರಡನೇ ಭಾಗ ಬಿಡುಗಡೆಯಾಯಿತು. ಈ ಎರಡೂ ಸಿನಿಮಾಗಳಲ್ಲಿ ನಟ ಶಾರುಖ್ ಖಾನ್ ಡಾನ್ ಪಾತ್ರದಲ್ಲಿ ಮಿಂಚಿದ್ದರು. ಈ ಡಾನ್ 3 ಸಿನಿಮಾದಲ್ಲಿ ಮೂರು ತಲೆಮಾರುಗಳ ನಟರನ್ನು ಬಳಸಿಕೊಳ್ಳುವ ಯೋಜನೆಯಿದೆ ಎನ್ನಲಾಗಿದೆ. ನಟ ಅಮಿತಾಭ್, ರಣವೀರ್ ಹಾಗೂ ಈಗಿನ ತಲೆಮಾರಿನ ನಟರಲ್ಲಿ ಒಬ್ಬರು ನಟಿಸಲಿದ್ದಾರೆ ಎನ್ನಲಾಗಿದೆ.