Site icon Vistara News

HIT: The First Case | ಹಿಟ್: ದಿ ಫಸ್ಟ್ ಕೇಸ್‌ ಸಿನಿಮಾ ಕಳಪೆ ಪ್ರದರ್ಶನ: ಮೊದಲ ದಿನದ ಕಲೆಕ್ಷನ್‌ ಎಷ್ಟು?

HIT The First Case

ಬೆಂಗಳೂರು: ರಾಜ್‌ಕುಮಾರ್ ರಾವ್ ಮತ್ತು ಸನ್ಯಾ ಮಲ್ಹೋತ್ರಾ ಮೊದಲ ಬಾರಿಗೆ ಹಿಟ್: ದಿ ಫಸ್ಟ್ ಕೇಸ್‌ನಲ್ಲಿ (HIT: The First Case) ಒಟ್ಟಿಗೆ ನಟಿಸಿದ್ದಾರೆ. ಚಿತ್ರವು ಜುಲೈ 15ರಂದು ಬಿಡುಗಡೆಗೊಂಡಿದೆ. ಮಿಶ್ರ ಪ್ರತಿಕ್ರಿಯೆಯನ್ನು ಸಿನಿರಸಿಕರಿಂದ ಇದು ಪಡೆದುಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದೆ. ಹಿಟ್: ದಿ ಫಸ್ಟ್ ಕೇಸ್ ಅನ್ನು ಸೈಲೇಶ್ ಕೋಲಲ್‌ ನಿರ್ದೇಶಿಸಿದ್ದಾರೆ.

ರಾಜ್‌ಕುಮಾರ್ ರಾವ್ ಅಭಿನಯದ ಈ ಸಿನಿಮಾ ಮೊದಲ ದಿನ ಅಂದಾಜು 1.40 ಕೋಟಿ ರೂ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿತ್ತು. ಈ ಅಂಕಿ ಅಂಶವು ರಾಜ್‌ಕುಮಾರ್ ಅವರ ಕೊನೆಯ ಬಿಡುಗಡೆಯಾದ ಬಧಾಯಿ ದೋ ಸಿನಿಮಾಗಿಂತ ಕಡಿಮೆಯಾಗಿದೆ.

ಇದನ್ನೂ ಓದಿ | Brahmastra trailer ಔಟ್‌, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್‌ ಇಂಡಿಯಾ ಚಿತ್ರ ಬರಲಿದೆಯಾ?

ಈ ಚಿತ್ರವು 2020ರಲ್ಲಿ ಬಿಡುಗಡೆ ಆಗಿದ್ದ ತೆಲುಗು ಚಿತ್ರದ ರಿಮೇಕ್ ಆಗಿದೆ. ತೆಲುಗು ಚಲನಚಿತ್ರವನ್ನು ಪ್ರಶಾಂತಿ ತಿಪಿರ್ನೇನಿ ನಿರ್ಮಿಸಿದ್ದಾರೆ. ವಿಶ್ವಕ್ ಸೇನ್ ಮತ್ತು ರುಹಾನಿ ಶರ್ಮಾ ನಟಿಸಿದ್ದರು. ಹಿಂದಿ ರಿಮೇಕ್ ಅನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್, ದಿಲ್ ರಾಜು, ಕ್ರಿಶನ್ ಕುಮಾರ್ ಮತ್ತು ಕುಲದೀಪ್ ರಾಥೋಡ್ ನಿರ್ಮಿಸಿದ್ದಾರೆ.

ಹಿಟ್: ದಿ ಫಸ್ಟ್ ಕೇಸ್‌ನಲ್ಲಿ, ಪಿಟಿಎಸ್‌ಡಿಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿಯ ಪಾತ್ರವನ್ನು ರಾಜ್‌ಕುಮಾರ್ ನಿರ್ವಹಿಸಿದ್ದಾರೆ. ನಟನ ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಇಬ್ಬರು ಹುಡುಗಿಯರ ಅಪಹರಣ ಪ್ರಕರಣವನ್ನು ಪರಿಹರಿಸುವ ವಿಕ್ರಮ್ ಎಂಬ ಪೋಲೀಸ್ (ರಾಜ್‌ಕುಮಾರ್ ರಾವ್ ಪಾತ್ರ) ಜೀವನದ ಸುತ್ತ ನಡೆಯುವ ಕಥಾ ಹಂದರ ಹೊಂದಿದೆ.

ಇದನ್ನೂ ಓದಿ | ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್‌ ಪಾರ್ಟಿ, ಬಾಲಿವುಡ್‌ ನಟ ಸಿದ್ಧಾಂತ್‌ ಕಪೂರ್‌ ವಶಕ್ಕೆ

Exit mobile version