Site icon Vistara News

Rashmika Mandanna: ರಶ್ಮಿಕಾ ಮಂದಣ್ಣ-ನಿತಿನ್‌ ಹೊಸ ಸಿನಿಮಾಗೆ ಮೆಗಾ ಸ್ಟಾರ್​ ಚಿರಂಜೀವಿ ಚಾಲನೆ

Rashmika Mandanna and Nithiin's new filmMegastar Chiranjeevi gives first clap

ಚೆನ್ನೈ: ʻಚಲೋʼ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ರಶ್ಮಿಕಾ ಮಂದಣ್ಣ (Rashmika Mandanna) ಪದಾರ್ಪಣೆ ಮಾಡಿದರು. ನ್ಯಾಶನಲ್‌ ಕ್ರಶ್‌ ಎಂತಲೇ ಖ್ಯಾತಿ ಪಡೆದ ರಶ್ಮಿಕಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ನಿತಿನ್​ ಅವರು ಜತೆಯಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಈ ಮೊದಲು ಅವರು ‘ಭೀಷ್ಮ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಈ ಸಿನಿಮಾ ಲಾಂಚ್‌ ಆಗಿದೆ. ‘ಮೆಗಾ ಸ್ಟಾರ್​’ ಚಿರಂಜೀವಿ ಅವರು ಮೊದಲ ದೃಶ್ಯಕ್ಕೆ ಕ್ಲ್ಯಾಪ್​ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಭೀಷ್ಮ ನಂತರ ಈ ಮೂವರ ಕಾಂಬಿನೇಷನ್‌ ಸಿನಿಮಾದ ಎರಡನೇ ಚಿತ್ರ ಇದಾಗಿದೆ.

ನಿತಿನ್​-ರಶ್ಮಿಕಾ ಕಾಂಬಿನೇಷನ್​ನ ಹೊಸ ಸಿನಿಮಾಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಬಂಡವಾಳ ಹೂಡುತ್ತಿದೆ. ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಜಿ ವಿ ಪ್ರಕಾಶ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ನಿತಿನ್ ಹೊಸ ಚಿತ್ರಕ್ಕಾಗಿ ವೆಂಕಿ ಕುದುಮುಲ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತಕ್ಕೆ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತೆಲುಗು ಚಿತ್ರರಂಗದ ಸ್ಟಾರ್​ ನಿರ್ದೇಶಕರಾದ ಗೋಪಿಚಂದ್​ ಮಲಿನೇನಿ, ಹನು ರಾಘವಪುಡಿ ಮುಂತಾದವರು ಕೂಡ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದಾರೆ. 2020ರ ಹಿಟ್ ಸಿನಿಮಾ ಭೀಷ್ಮಾದಲ್ಲಿ ಈ ಮೂವರ ಕಾಂಬಿನೇಶನ್‌ ಇತ್ತು. ಈ ಬಗ್ಗೆ ವೆಂಕಿ ಸಂದರ್ಶನದಲ್ಲಿ ಮಾತನಾಡಿ ʻʻನಾನು ಭಿಷ್ಮ ಚಿತ್ರವನ್ನೂ ಇಂದಿಗೂ ಪ್ರೀತಿಸುತ್ತೇನೆ. ನನ್ನ ಮೂರನೇ ಚಿತ್ರಕ್ಕೆ ನಾಯಕರ ಬಗ್ಗೆ ಯೋಚಿಸುತ್ತಿದ್ದಾಗ, ಇಬ್ಬರನ್ನೂ ಮತ್ತೆ ಸಂಪರ್ಕಿಸಲು ನಾನು ಯೋಚಿಸಿದೆ” ಎಂದು ಹೇಳಿದರು.
ತಮ್ಮ ಕೊನೆಯ ಪ್ರಾಜೆಕ್ಟ್‌ನಿಂದ ರಶ್ಮಿಕಾ ಅವರ ಜನಪ್ರಿಯತೆ ಹೆಚ್ಚಿದ್ದರೂ, ಅವರ ಸ್ನೇಹ ಹಾಗೆಯೇ ಉಳಿದಿದೆ ಎಂದು ವೆಂಕಿ ಹೇಳುತ್ತಾರೆ. “ನನ್ನ ಚೊಚ್ಚಲ ಚಿತ್ರ ಚಲೋ ಚಿತ್ರೀಕರಣ ಮಾಡುವಾಗ ರಶ್ಮಿಕಾ ಮತ್ತು ನಾನು ಉತ್ತಮ ಸ್ನೇಹಿತರಾಗಿದ್ದೇವು. ಭೀಷ್ಮ ಸಮಯದಲ್ಲಿ ನಿತಿನ್ ಜತೆ ಸ್ಕ್ರಿಪ್ಟ್‌ ಬರೆಯುವಾಗಲೂ ಸಖತ್‌ ಎಂಜಾಯ್‌ ಮಾಡುತ್ತಿದ್ದೇವು. ʼʼಎಂದರು.

ಇದನ್ನೂ ಓದಿ: Rashmika Mandanna: ಮನೆ ಕೆಲಸದವಳ ಪಾದವನ್ನೂ ಸ್ಪರ್ಶಿಸುತ್ತೇನೆ ಎಂದ ರಶ್ಮಿಕಾ ಮಂದಣ್ಣ

ಮೈತ್ರಿ ಮೂವಿ ಪೋಸ್ಟ್‌

ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ಕೊನೆಯದಾಗಿ ಕಾಣಿಸಿಕೊಂಡರು. ಇದು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗಿನ ಅವರ ಮೊದಲ ಸಿನಿಮಾವಾಗಿದೆ. ರಣಬೀರ್ ಕಪೂರ್ ಜತೆ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಅಭಿನಯಸಿದ್ದಾರೆ. ಈ ಸಿನಿಮಾವನ್ನು ಸಂದೀಪ್ ವಂಗಾ ನಿರ್ದೇಶಿಸಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

Exit mobile version