Site icon Vistara News

Rashmika Mandanna | ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ-ವಿಜಯ್‌ ದೇವರಕೊಂಡ: ಫೋಟೊ ಸೀಕ್ರೆಟ್‌ ಏನು?

Rashmika Mandanna

ಬೆಂಗಳೂರು: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ನಟ ವಿಜಯ್‌ ದೇವರಕೊಂಡ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಇದೀಗ ಇಬ್ಬರೂ ಮಾಲ್ಡೀವ್ಸ್‌ನಲ್ಲಿ ಇರುವ ಫೋಟೊವನ್ನು ಪ್ರತ್ಯೇಕವಾಗಿ ಶೇರ್‌ ಮಾಡಿಕೊಂಡಿದ್ದಾರೆ. ಸ್ಟಾರ್‌ಗಳಿಬ್ಬರು ಗೌಪ್ಯವಾಗಿ ಮಾಲ್ಡೀವ್ಸ್‌ನಲ್ಲಿ ಹೊಸ ವರ್ಷ ಆಚರಿಸಿದ್ದಾರೆಯೇ ಎಂದು ನೆಟ್ಟಿಗರು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಆಗುತ್ತಿದೆ. ʻಗೀತಾ ಗೋವಿದಂ’’ ಸಿನಿಮಾ ಮೂಲಕ ಪ್ರೇಕ್ಷಕರ ಫೇವರಿಟ್ ಜೋಡಿಯಾಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ | Rashmika Mandanna | ರಣಬೀರ್‌-ರಶ್ಮಿಕಾ ಅಭಿನಯದ ʻಅನಿಮಲ್‌ʼ ಸಿನಿಮಾ ಫಸ್ಟ್‌ ಲುಕ್‌ ಔಟ್‌: ರಗಡ್‌ ಲುಕ್‌ ಅಂದ್ರು ಫ್ಯಾನ್ಸ್‌!

ವಿಜಯ್ ದೇವರಕೊಂಡ ಹೊಸ ವರ್ಷಕ್ಕೆ ಫ್ಯಾನ್ಸ್‌ಗೆ ಶುಭಹಾರೈಸಿದ್ದರು. ಪೂಲ್‌ನಲ್ಲಿ ಬಾಟಲ್ ಹಿಡಿದು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಅದೇ ಜಾಗದಲ್ಲಿ ರಶ್ಮಿಕಾ ಕೂಡ ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಈ ಎರಡು ಫೋಟೊಗಳು ವೈರಲ್ ಆಗುತ್ತಿದ್ದು, ಇಬ್ಬರು ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Rashmika Mandanna | ಎಲ್ಲವೂ ಪ್ರಾರಂಭವಾದ ದಿನ ಎಂದು ʻಕಿರಿಕ್‌ ಪಾರ್ಟಿʼ ಸಿನಿಮಾ ಪೋಸ್ಟರ್‌ ಹಂಚಿಕೊಂಡ ರಶ್ಮಿಕಾ ಮಂದಣ್ಣ!

Exit mobile version