ಬೆಂಗಳೂರು: ರಣಬೀರ್ ಕಪೂರ್ (Ranbir Kapoor)) ಅಭಿನಯದ ʻಅನಿಮಲ್ʼ ಸಿನಿಮಾ (Animal first look poster) ದಿನಕ್ಕೊಂದು ಹೊಸ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಲೇ ಇದೆ. ಇದೀಗ ʻಅನಿಮಲ್ʼ ಸಿನಿಮಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಕಂಡು ರಶ್ಮಿಕಾ ಅವರ ಫ್ಯಾನ್ಸ್ ಸಂತಸ ಹೊರಹಾಕುತ್ತಿದ್ದಾರೆ. ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ʻಗೀತಾಂಜಲಿʼ (Geethanjali animal Cinema) ಪಾತ್ರವನ್ನು ನಿಭಾಯಿಸುತ್ತಿದ್ದಾರೆ.
ಈಗಾಗಲೇ ಅನಿಮಲ್ ಚಿತ್ರತಂಡ ಹಲವು ಪಾತ್ರಗಳನ್ನು ಪರಿಚಯಿಸಿದೆ. ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಈ ಸಿನಿಮಾ ನಿರ್ದೇಶಿಸಿದ್ದಾರೆ. ರಶ್ಮಿಕಾ ಪೋಸ್ಟರ್‌ನಲ್ಲಿ, ಕೆಂಪು ಮತ್ತು ಬಿಳಿ ಬಣ್ಣದ ಬಾರ್ಡರ್ ಸೀರೆಯೊಂದಿಗೆ ಗೃಹಿಣಿಯ ಲುಕ್‌ನಲ್ಲಿ ಸಿಂಪಲ್ ಆಗಿ ಕಂಡಿದ್ದಾರೆ.
ರಶ್ಮಿಕಾ ಅಭಿನಿಯೊಬ್ಬರು ʻ ಗೀತಾಂಜಲಿಯ ಲುಕ್ ಬಹಳ ವಿಭಿನ್ನವೆಂದು ತೋರುತ್ತದೆʼʼಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು. ‘ಇಡೀ ಚಿತ್ರರಂಗದಲ್ಲಿ ನಿಮಗಿಂತ ಮಿಗಿಲಾದವರು ಯಾರೂ ಇಲ್ಲ, ನೀವೇ ಅತ್ಯಂತ ಸುಂದರಿʼʼಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Rashmika Mandanna: ಪುಷ್ಪ -2 ಸೆಟ್ ಫೋಟೊವನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ
Rashmika as Geetanjali :-#AnimalTeaserOn28thSept#AnimalTheFilm #RanbirKapoor @RashmikaMandanna @bobbydeol @TriptiDimri #BhushanKumar
— Sandeep Reddy Vanga (@imvangasandeep) September 23, 2023
@SandeepReddyVanga @PranayReddyVanga #KrishanKumar @anilandbhanu @tseriesfilms @VangaPictures pic.twitter.com/UtLQvLac5C
ಬಲ್ಬೀರ್ ಸಿಂಗ್ ಪಾತ್ರದಲ್ಲಿ ಅನಿಲ್ ಕಪೂರ್
ಇತ್ತೀಚೆಗೆ, ಚಿತ್ರತಂಡ ನಟ ಅನಿಲ್ ಕಪೂರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿತು. ಪೋಸ್ಟರ್‌ನಲ್ಲಿ ಅನಿಲ್ ಕಪೂರ್ ಕುರ್ಚಿಯ ಮೇಲೆ ಎದೆಗೆ ಬ್ಯಾಂಡೇಜ್ ಹಾಕಿಕೊಂಡು ಮುಖದಲ್ಲಿ ಗಂಭೀರ ಭಾವದಿಂದ ಕುಳಿತಿದ್ದರು. ಬಲ್ಬೀರ್ ಸಿಂಗ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಣಬೀರ್ ಹುಟ್ಟುಹಬ್ಬದಂದು ಚಿತ್ರದ ಟೀಸರ್ ಚಿತ್ರತಂಡ ಅನಾವರಣಗೊಳಿಸಿತ್ತು. ಇತ್ತೀಚೆಗಷ್ಟೇ ಅನಿಮಲ್ ಚಿತ್ರತಂಡ ರಣಬೀರ್ ಅವರ ಫಸ್ಟ್ ಲುಕ್ ಪೋಸ್ಟರ್ ಕೈಬಿಟ್ಟಿತ್ತು. ಹೊಸ ಪೋಸ್ಟರ್‌ನಲ್ಲಿ ರಣಬೀರ್ ನೀಲಿ ಬಣ್ಣದ ಸೂಟ್‌ನಲ್ಲಿ ಲೈಟರ್ ಹಿಡಿದು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿತ್ತು. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.
ಈ ಹಿಂದೆ ಸಿನಿಮಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಈ ಸಿನಿಮಾ ಮೂಲಕ ರಣಬೀರ್ ಕಪೂರ್ ಪೂರ್ಣ ಪ್ರಮಾಣದ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.
ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.