Site icon Vistara News

Rashmika Mandanna: ಶಾಲೆಯಲ್ಲಿದ್ದಾಗ ಹೀಗಾಗಿದ್ದರೆ ಏನಾಗ್ತಿತ್ತೋ? ನಕಲಿ ವಿಡಿಯೊಗೆ ರಶ್ಮಿಕಾ ರಿಯಾಕ್ಷನ್‌!

Rashmika Mandanna

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೊ ಕುರಿತಾಗಿ ನಟಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ʻತಂತ್ರಜ್ಞಾನದ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯವಾಗುತ್ತಿದೆ’ ಎಂದು ರಶ್ಮಿಕಾ ಮಂದಣ್ಣ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ತಮ್ಮ ಬರಹದಲ್ಲಿ ತಿಳಿಸಿದ್ದಾರೆ.

ʻʻಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ ಮತ್ತು ನಾನು ಆನ್‌ಲೈನ್‌ನಲ್ಲಿ ವೈರಲ್‌ ಆಗಿರುವ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಬೇಕಾಗಿದೆ. ಪ್ರಾಮಾಣಿಕವಾಗಿ, ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯವಾಗುತ್ತಿದೆ. ಮಹಿಳೆಯಾಗಿ ಮತ್ತು ನಟಿಯಾಗಿ ನನ್ನ ರಕ್ಷಣೆ ಮತ್ತು ಬೆಂಬಲವಾಗಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ನನಗೆ ಇದು ಸಂಭವಿಸಿದರೆ, ನಾನು ಪ್ರಾಮಾಣಿಕವಾಗಿ ಇದನ್ನು ಹೇಗೆ ನಿಭಾಯಿಸಬಲ್ಲೆ ಎಂದು ಊಹಿಸಲು ಸಾಧ್ಯವಿಲ್ಲ. ನಮ್ಮಂತಹ ಹೆಚ್ಚಿನ ಜನರು ತೊಂದರೆಗೆ ಒಳಗಾಗುವುದಕ್ಕೂ ಮುನ್ನವೇ ಈ ಸಮಸ್ಯೆಯ ಬಗ್ಗೆ ನಾವು ಗಮನ ಹರಿಸಬೇಕಿದೆ’ ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ.

ರಶ್ಮಿಕಾ ಅವರು ತಮ್ಮ ಟ್ವೀಟ್‌ನಲ್ಲಿ ಸೈಬರಾಬಾದ್ ಪೊಲೀಸ್‌ ಮತ್ತು ಮಹಾರಾಷ್ಟ್ರದ ಸೈಬರ್ ಕ್ರೈಮ್ ತನಿಖೆಯ ನೋಡಲ್ ಏಜೆನ್ಸಿಯಾದ ಮಹಾರಾಷ್ಟ್ರ ಸೈಬರ್‌ನ ಅಧಿಕೃತ ಎಕ್ಸ್ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ.

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ರಶ್ಮಿಕಾ ಫ್ಯಾನ್ಸ್‌ ʻʻನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ನಾವು ಜಾಗೃತಿ ಮೂಡಿಸೋಣ ಮತ್ತು ತಂತ್ರಜ್ಞಾನದ ಇಂತಹ ದುರ್ಬಳಕೆಯನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡೋಣ. ನೀವು ಇದರಲ್ಲಿ ಒಬ್ಬಂಟಿಯಾಗಿಲ್ಲ ಮತ್ತು ನಾವು ನಿಮ್ಮನ್ನು ಬೆಂಬಲಿಸುತ್ತೇವೆ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ವೈರಲ್‌ ಡೀಪ್‌ಫೇಕ್‌ ವಿಡಿಯೋ ಅಪಾಯಕಾರಿ ಎಂದ ಕೇಂದ್ರ ಸಚಿವ; ಮೂಲ ವಿಡಿಯೋ ಇಲ್ಲಿದೆ

ಸೆಲೆಬ್ರೆಟಿಗಳ ಫೋಟೊ, ವಿಡಿಯೊ ಮಾರ್ಪ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡುವುದು ಇದೇನು ಮೊದಲೇನಲ್ಲ. ಆದರೆ ವೈರಲ್‌ ಆಗಿರುವ ವಿಡಿಯೊದಲ್ಲಿನ ಯುವತಿ ಝರಾ ಪಟೇಲ್ ತಮ್ಮ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಿದ್ದಾರೆ. ಝರಾ ಪಟೇಲ್ ತುಂಡು ಬಟ್ಟೆಯಲ್ಲಿ ಲಿಫ್ಟ್ ಒಳಗೆ ಪ್ರವೇಶಿಸಿರುವುದನ್ನು ನೋಡಬಹುದು. ಡೀಪ್ ನೆಕ್ ಡ್ರೆಸ್‌ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಆದರೆ ಆಕೆಯ ಮುಖವನ್ನು ರಶ್ಮಿಕಾ ಮಂದಣ್ಣ ರೀತಿ ಬದಲಿಸಲಾಗಿದೆ. ರಶ್ಮಿಕಾ ರೀತಿ ಬದಲಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಈ ಕರಿತು ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chandrasekhar) ಪ್ರತಿಕ್ರಿಯಿಸಿದ್ದಾರೆ. ʼಇಂಥ ಅಪಾಯಕಾರಿ ಮತ್ತು ಹಾನಿಕಾರಕ ತಪ್ಪು ಮಾಹಿತಿಗಳನ್ನು ಈ ವೇದಿಕೆಗಳ ಮೂಲಕ ಎದುರಿಸಬೇಕಾಗಿದೆʼ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಡೀಪ್‌ಫೇಕ್‌ ಅಂದರೇನು?

‘ಡೀಪ್‌ಫೇಕ್’ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಿದ ವಿಡಿಯೊಗಳು. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್‌ಫೇಕ್ ವಿಡಿಯೊಗಳು ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಒರಿಜಿನಲ್‌ ಆಗಿ ಕಾಣುವಂತೆ ಮಾಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version