ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಡೀಪ್‌ಫೇಕ್ ವೀಡಿಯೊ ವಿವಾದದ ನಡುವೆ ವಿಜಯ್ ದೇವರಕೊಂಡ ಅವರೊಂದಿಗೆ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ರಶ್ಮಿಕಾ ದೀಪಾವಳಿಗೆ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ʻದೀಪಾವಳಿಯ ಶುಭಾಶಯಗಳು” ಎಂದು ಸರಳವಾಗಿ ಬರೆದಿದ್ದಾರೆ. ನಂತರ, ವಿಜಯ್ ದೇವರಕೊಂಡ ಅವರು ತಮ್ಮ ಕುಟುಂಬದೊಂದಿಗೆ ತಮ್ಮ ದೀಪಾವಳಿ ಆಚರಣೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಹಂಚಿಕೊಂಡ ಫೋಟೊ ಹಾಗೂ ವಿಜಯ್ ಹಂಚಿಕೊಂಡ ಪೋಟೊಗಳಿಗೂ ಬಹಳಷ್ಟು ಸಾಮ್ಯತೆ ಇತ್ತು. ಹೀಗಾಗಿ ಫ್ಯಾನ್ಸ್ ಇದು ವಿಜಯ್ ದೇವರಕೊಂಡ ಮನೆ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈ ರೀತಿಯಲ್ಲಿ ಒಟ್ಟಾಗಿ ಸಮಯ ಕಳೆದಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಅನೇಕ ಬಾರಿ ಇಬ್ಬರೂ ಒಟ್ಟಾಗಿ ಪ್ರವಾಸ ತೆರಳಿದ್ದರು. ಆದರೆ, ಇದು ಗೊತ್ತಾಗದ ರೀತಿಯಲ್ಲಿ ನಡೆದುಕೊಂಡಿದ್ದರು. ಕೆಲವು ತಿಂಗಳ ಹಿಂದೆ, ರಶ್ಮಿಕಾ ಮತ್ತು ವಿಜಯ್ ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ಅಪಾರ್ಟ್‌ಮೆಂಟ್‌ನ ಟೆರೇಸ್‌ನಲ್ಲಿ ಪೋಸ್ ಕೊಟ್ಟಿದ್ದರು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇದ್ದಾರೆ ಎಂದು ಊಹಿಸಲು ಶುರು ಮಾಡಿದ್ದಾರೆ. ಒಬ್ಬ ಅಭಿಮಾನಿ, “ಕನಿಷ್ಠ ಅಂದರೂ 3- 4 ವರ್ಷಗಳಿಂದ ಇವರು ಒಟ್ಟಿಗೆ ಇದ್ದಾರೆʼʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಈಗಾಗಲೇ ಈ ಜೋಡಿಯ ನಿಶ್ಚಿತಾರ್ಥ ಆಗಿದೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ; Rashmika Mandanna: ಆಕೆಯ ಸ್ತನ ಗಾತ್ರ ದೊಡ್ಡದು, ರಶ್ಮಿಕಾದು ಚಿಕ್ಕದು ಅಷ್ಟೆ; ಮಾಧವಿ ಲತಾ ಕಮೆಂಟ್‌ಗೆ ಗರಂ!
ಇಬ್ಬರೂ ಈ ಹಿಂದೆ ಟರ್ಕಿಯಲ್ಲಿ ಕಾಲ ಕಳೆದಿರುವ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಟರ್ಕಿಯಲ್ಲಿ ವಕೇಶನ್ ಮೂಡ್‌ನಲ್ಲಿರುವ ಫೋಟೊ ಹಾಗೂ ವಿಡಿಯೊ ಹಂಚಿಕೊಂಡಿದ್ದರು. ಸುತ್ತಾಟವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದರು. ಅವರು ಕ್ಲಿಕ್ಕಿಸಿಕೊಂಡ ಫೋಟೊ ಬ್ಯಾಕ್ಗ್ರೌಂಡ್ ವಿಜಯ್ ದೇವರಕೊಂಡ ಟರ್ಕಿಯಿಂದ ಪೋಸ್ಟ್ ಮಾಡಿದ್ದ ಫೋಟೊ ಸೇಮ್ ಇತ್ತು. ವಿಜಯ್ ದೇವರಕೊಂಡ ಅವರ ಇತ್ತೀಚಿನ ಖುಷಿ ಚಿತ್ರೀಕರಣವನ್ನು ಟರ್ಕಿಯಲ್ಲಿ ಮಾಡಿದ್ದರು. ಈ ವೇಳೆ ರಶ್ಮಿಕಾ ಅವರು ವಿಜಯ್ ಜತೆ ಟರ್ಕಿಗೆ ಹೋಗಿದ್ದರು ಎನ್ನಲಾಗಿತ್ತು.
ರಶ್ಮಿಕಾ ಅವರ ಸಿನಿಮಾ ವಿಚಾರಕ್ಕೆ ಬಂದರೆ, ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಚಿತ್ರ ಅನಿಮಲ್ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಪುಷ್ಪ 2: ದಿ ರೂಲ್ ಸಿನಿಮಾ ಶೂಟಿಂಗ್‌ನಲ್ಲಿಯೂ ನಟಿ ಬ್ಯುಸಿಯಾಗಿದ್ದಾರೆ. VD12 ಗಾಗಿ ವಿಜಯ್ ದೇವರಕೊಂಡ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.