Site icon Vistara News

Rashmika Mandanna: ವಾಶ್‌ರೂಮ್‌ನೂ ಬಿಡಲ್ವ! ಟ್ರೋಲ್‌ ಆದ ರಶ್ಮಿಕಾ ಮಂದಣ್ಣ

Rashmika Mandanna In Purple skirt

ಮುಂಬೈ: ರಶ್ಮಿಕಾ ಮಂದಣ್ಣ (Rashmika Mandanna)-ಟೈಗರ್ ಶ್ರಾಫ್ (Tiger Shroff) ಕ್ರಂಚೈರೋಲ್ ಆ್ಯಪ್ ಬಿಡುಗಡೆಗೆ (Crunchyroll App Launch) ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಸಿನಿಮಾ ಕುರಿತಾಗಿ ಚರ್ಚಿಸಿದರು. ಕ್ರಂಚೈರೋಲ್ ಲೋಗೊವಿರುವ ಬಿಳಿ-ಟೀ ಧರಿಸಿ ಟೈಗರ್ ಶ್ರಾಫ್ ಬಂದಿದ್ದರೆ, ರಶ್ಮಿಕಾ ಬಾರ್ಬಿಕೋರ್ ಮೂಡ್‌ನಲ್ಲಿ ವೆಲ್ವೆಟ್ ನೇರಳೆ ಬಣ್ಣದ ಸ್ಕರ್ಟ್‌ನೊಂದಿಗೆ ಗುಲಾಬಿ ಟಾಪ್‌ನಲ್ಲಿ ಕಾಣಿಸಿಕೊಂಡರು. ಆದರೀಗ ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ರಶ್ಮಿಕಾ ಇದೇ ಸ್ಕರ್ಟ್‌ನೊಂದಿಗೆ ಫೋಟೊಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ. ಫೋಟೊ ಕಂಡು ʻʻವಾಶ್‌ರೂಮ್‌ನಲ್ಲಿ ಏನು ಮಾಡುತ್ತೀದ್ದೀರಾʼʼ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ʻʻನಮ್ಮ ಕ್ರಿಯೇಟಿವಿಟಿ ವಾಶ್‌ರೂಮ್‌ನಲ್ಲಿ ಇದ್ದಾಗʼʼಎಂದ ಶಿರ್ಷೆಕೆಯೊಂದಿಗೆ ನಟಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ʻವಾಶ್‌ರೂಮ್‌ನೂ ಬಿಡಲ್ವʼ ಎಂದು ನಟಿಗೆ ಮನಬಂದಂತೆ ಕಮೆಂಟ್‌ ಮಾಡಿದರೆ, ಇನ್ನೂ ಕೆಲವರು ರಶ್ಮಿಕಾ ಫೋಟೊಗೆ ಸ್ಟನ್ನಿಂಗ್‌ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಜಾಗ ಕಬಳಿಸಿದ ಶ್ರೀಲೀಲಾ; ನ್ಯಾಷನಲ್‌ ಕ್ರಶ್‌ ವಿರುದ್ಧ ʻಆʼ ವ್ಯಕ್ತಿಯ ಸೇಡು!

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಟ್ರೆಡಿಶನಲ್‌, ಇಂಡಿಯನ್‌ ಹಾಗೇ ವೆಸ್ಟರ್ನ್‌ ಲುಕ್‌ನಲ್ಲಿ ಆಗಾಗ ಕಾಣಿಸಿಕೊಂಡು ಸಖತ್‌ ಸುದ್ದಿಯಲ್ಲಿರುತ್ತಾರೆ. ಹಾಗೇ ಅನೇಕ ಮ್ಯಾಗಜಿನ್​ಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್‌ಗೆ ನಟಿ ರಾಯಭಾರಿಯಾಗಿ ಸಖತ್‌ ಸುದ್ದಿಯಲ್ಲಿದ್ದರು. ರಶ್ಮಿಕಾ ಮಂದಣ್ಣ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನುಳಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ಪುಷ್ಪ- 2’ ಹಾಗೂ ಹಿಂದಿಯ ‘ಅನಿಮಲ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ‘ರೈನ್‌ಬೋ’ ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಭೀಷ್ಮ’ ಕಾಂಬಿನೇಷನ್‌ನಲ್ಲಿ ಮತ್ತೆ ನಿತಿನ್‌ ಜೋಡಿಯಾಗಿ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

ಶ್ರೀನಿವಾಸ್ ಬೆಲ್ಲಂಕೊಂಡ ʻಛತ್ರಪತಿʼ ಚಿತ್ರದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಈ ಚಿತ್ರವನ್ನು ವಿವಿ ವಿನಾಯಕ್ ನಿರ್ದೇಶಿಸಲಿದ್ದಾರೆ ಮತ್ತು ಎಸ್ಎಸ್ ರಾಜಮೌಳಿ ಅವರ ತಂದೆ ಮತ್ತು ಹಿರಿಯ ಬರಹಗಾರ ವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ. ಚಿತ್ರದಲ್ಲಿ ನುಶ್ರತ್ ಭರುಚ ಕೂಡ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Exit mobile version