ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ `ರೈನ್ಬೋ’ ಸಿನಿಮಾದ ಮೊದಲ ಶೆಡ್ಯೂಲ್ ಮುಗಿಸಿದ್ದಾರೆ. ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್‌ಗೆ ರಾಯಭಾರಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಟ್ರೆಡಿಶನಲ್, ಇಂಡಿಯನ್ ಹಾಗೇ ವೆಸ್ಟರ್ನ್ ಲುಕ್‌ನಲ್ಲಿ ಆಗಾಗ ಕಾಣಿಸಿಕೊಂಡು ಸಖತ್ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ‘ಫ್ರೀ ಫೈರ್ ಕೆಲ್ಲಿ’ (‘Free Fire Kelly’ ) ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ್ಲಿ ‘ಗರೇನಾ ಫ್ರೀ ಫೈರ್’ (‘Garena Free Fire’) 37 ಪಾತ್ರಗಳಲ್ಲಿ ಒಂದಾಗಿದೆ.
ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್‌ಗೆ ರಾಯಭಾರಿಯಾಗಿದ್ದಾರೆ. ʻʻಒನಿಟ್ಸುಕಾ ಟೈಗರ್ಸ್ ಸ್ಪ್ರಿಂಗ್-ಸಮ್ಮರ್ 23 ಸಂಗ್ರಹವನ್ನು ಪರಿಚಯಿಸಲು ತುಂಬಾ ಉತ್ಸುಕನಾಗಿದ್ದೇನೆ. ಈ ಡ್ರೆಸ್ ಅಪ್ ನನಗೆ ಇಷ್ಟ ಆಗಿದೆ. ಈ ಸಂಗ್ರಹಣೆಯು ಜಪಾನೀಸ್ ಮಿನಿಮಲಿಸಂನಿಂದ ಪ್ರೇರಿತವಾಗಿದೆ ಮತ್ತು ಕ್ರೀಡೆಯೊಂದಿಗೆ ಫ್ಯಾಷನ್ ಸಂಯೋಜಿಸುತ್ತದೆ ಎಂಬುದನ್ನು ನಾನು ಇಷ್ಟಪಡುತ್ತೇನೆʼʼ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ʻʻಫ್ರೀ ಫೈರ್ʼʼ (‘Free Fire Kelly’ ) ಎಂಬುದು ಬ್ಯಾಟಲ್ ರಾಯಲ್ ಆಟವಾಗಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್‌ಗಾಗಿ ಗರೆನಾ ಅಭಿವೃದ್ಧಿಪಡಿಸಿದೆ. ಇದು 2019ರಲ್ಲಿ ಜಾಗತಿಕವಾಗಿ ಹೆಚ್ಚು ಡೌನ್‌ಲೋಡ್ ಮಾಡಿದ ಮೊಬೈಲ್ ಗೇಮ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ: Rashmika Mandanna: ರಶ್ಮಿಕಾರನ್ನು ನೋಡಲು ಓಡೋಡಿ ಬಂದಳು ತಂಗಿ; ʻರೈನ್ಬೋʼ ಶೂಟಿಂಗ್ ಕ್ಷಣಗಳು ಹೇಗಿತ್ತು?
ರಶ್ಮಿಕಾ ಮಂದಣ್ಣ ಪೋಸ್ಟ್
ಕೆಲ್ಲಿ ಪಾತ್ರವು ಯಾವಾಗಲೂ ವಿಶಿಷ್ಟವಾದ ಹಳದಿ ಉಡುಪಿನಲ್ಲಿರುತ್ತದೆ. ಗೇಮ್ ಡೆವಲಪರ್‌ಗಳು ಅವಳ ಆವೃತ್ತಿಯನ್ನು ಕೆಲ್ಲಿ, ಸ್ವಿಫ್ಟ್ ಆಗಿ ಅಪ್‌ಗ್ರೇಡ್ ಮಾಡಿದರು. ಪಾತ್ರಕ್ಕೆ ಹೆಚ್ಚಿನ ಸಾಮರ್ಥ್ಯಗಳನ್ನು ಸೇರಿಸಿದರು. ಕಾಲಾನಂತರದಲ್ಲಿ ಆಟಕ್ಕೆ ಇನ್ನೂ ಅನೇಕ ಪಾತ್ರಗಳನ್ನು ಸೇರಿಸಲಾಗಿದ್ದರೂ, ಕೆಲ್ಲಿಯ ಜನಪ್ರಿಯತೆ ಹಾಗೇ ಉಳಿದುಕೊಂಡಿದೆ.
ರಶ್ಮಿಕಾ ಮಂದಣ್ಣ ಅಭಿನಯದ ಡ್ರೀಮ್ ವಾರಿಯರ್ ಪಿಕ್ಚರ್ಸ್ ಎರಡನೇ ತೆಲುಗು ಚಿತ್ರ ʻರೈನ್ಬೋʼ (‘Rainbow’ film) ಶೂಟಿಂಗ್ ಮೊದಲ ಶೆಡ್ಯೂಲ್ ಮುಗಿದಿದೆ. ಡ್ರೀಮ್ ವಾರಿಯರ್ ಪಿಕ್ಚರ್ಸ್2021ರಲ್ಲೇ ಈ ಸಿನಿಮಾ ಅನೌನ್ಸ್ ಮಾಡಿ ಸಮಂತಾ ನಾಯಕಿ ಎಂದು ಬಹಿರಂಗ ಪಡಿಸಿದ್ದರು. ಆದರೀಗ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹಿಂದಿ ಮತ್ತು ಕನ್ನಡದಲ್ಲಿ ಡಬ್ಬಿಂಗ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.
ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ, ಪುಷ್ಪ 2, ಅನಿಮಲ್, ʻರೈನ್ಬೋʼ , ನಿತಿನ್ ಜತೆಗಿನ ಹೊಸ ಸಿನಿಮಾ, ವಿಕ್ಕಿ ಕೌಶಲ್ ಜತೆ ‘ಛವಾ’ ಸಿನಿಮಾಗಳಿವೆ.