ಬೆಂಗಳೂರು: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ʻವಾರಿಸುʼ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ನಟಿ ಸಮಂತಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ನಟಿ ರಶ್ಮಿಕಾ ಸಮಂತಾ ಆರೋಗ್ಯದ ಬಗ್ಗೆ ಮಾತನಾಡಿದ್ದು, ʻನಾನು ಸಮಂತಾ ವಿಚಾರದಲ್ಲಿ ಪೊಸೆಸಿವ್, ನಾನು ಯಾವಾಗಲೂ ಅವರ ಪರವಾಗಿರುತ್ತೇನೆ. ಜತೆಗೆ ಅವರನ್ನು ರಕ್ಷಿಸಲು ಬಯಸುತ್ತೇನೆ. ಸದಾ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆʼʼ ಎಂದು ಹೇಳಿಕೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ದಳಪತಿ ವಿಜಯ್ ಅವರೊಂದಿಗೆ ನಟಿಸಿರುವ ʻವಾರಿಸುʼ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 12 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಪ್ರಚಾರದ ಸಂದರ್ಶನ ವೇಳೆ ರಶ್ಮಿಕಾ ಮಾತನಾಡಿ, ʻಸಮಂತಾ ಅವರು ಅದ್ಭುತ ಮಹಿಳೆ. ನಾನು ಅವರ ವಿಚಾರವಾಗಿ ಪೊಸೆಸಿವ್, ನಾನು ಯಾವಾಗಲೂ ಅವರ ಪರವಾಗಿರುತ್ತೇನೆ. ಜತೆಗೆ ಅವರನ್ನು ರಕ್ಷಿಸಲು ಬಯಸುತ್ತೇನೆ. ಸದಾ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ | Rashmika Mandanna | ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ: ಫೋಟೊ ಸೀಕ್ರೆಟ್ ಏನು?
ʻʻಮೈಯೋಸಿಟಿಸ್ ಕಾಯಿಲೆ ಬಗ್ಗೆ ಸಮಂತಾ ಹೇಳಿಕೊಂಡಾಗ ನನಗೆ ತುಂಬಾ ಬೇಸರವಾಗಿತ್ತು. ಸದ್ಯಕ್ಕೆ ಸಮಂತಾ ಚೇತರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗಿ ಶೂಟಿಂಗ್ಗೆ ಮರಳುತ್ತಾರೆʼʼ ಎಂದು ನಟಿ ರಶ್ಮಿಕಾ ಹೇಳಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ಸಮಂತಾಗೆ ಸಿಕ್ಕ ಬಾಲಿವುಡ್ ಸಿನಿಮಾ ಆಫರ್ಗಳು ಕೈತಪ್ಪಿ ಹೋಗಿದೆ. ಸಮಂತಾ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ʻಶಾಕುಂತಲಂʼ ಚಿತ್ರ ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ.
ವಾರಿಸು ಸಿನಿಮಾ 2023ರ ಜನವರಿ 12ರಂದು ಬಿಡುಗಡೆಯಾಗಲಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿ ಇಲ್ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತೆಲುಗಿನ ಬೃಂದಾವನಂ, ʻಮಹರ್ಷಿʼ ಖ್ಯಾತಿಯ ವಂಶಿ ಪೈಡಿಪಳ್ಳಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ | Rashmika Mandanna | ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ: ಫೋಟೊ ಸೀಕ್ರೆಟ್ ಏನು?