ಬೆಂಗಳೂರು: ಪುಷ್ಪ (Pushpa) ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾಗಿಂತಲೂ (Rashmika Mandanna) ತಾವು ಅದ್ಭುತವಾಗಿ ನಟಿಸುತ್ತಿದ್ದೆ ಎಂದು ಟಾಲಿವುಡ್ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಹೇಳಲಾದ ವಿಡಿಯೊ ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳನ್ನು ಇದು ಕೆರಳಿಸಿತ್ತು. ಇದೀಗ ಈ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. ಕಾಲೆಳೆದ ನಟಿಗೆ ಸ್ನೇಹದ ಹಸ್ತ ಚಾಚಿ, ಅವರ ಮುಂಬರುವ ಸಿನಿಮಾಗೆ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ.
ರಶ್ಮಿಕಾ ಟ್ವೀಟ್‌ನಲ್ಲಿ ʻʻಹಾಯ್ ಲವ್… ಈಗ ತಾನೇ ಈ ಸುದ್ದಿ ನೋಡಿದೆ. ನಿಮ್ಮ ಬಗ್ಗೆ ನನಗೆ ಪ್ರೀತಿ ಹಾಗೂ ಗೌರವವಿದೆ. ನೀವು ಏನು ಹೇಳಿದ್ದೀರಿ ಎನ್ನುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನನಗೆ ನಿಮ್ಮ ಬಗ್ಗೆ ಗೌರವವಿದೆ. ನಿಮ್ಮ ಮುಂದಿನ ಫರ್ಹಾನಾ ಲವ್ ಚಿತ್ರಕ್ಕೆ ಮತ್ತೊಮ್ಮೆ ಆಲ್ ದಿ ಬೆಸ್ಟ್.” ಎಂದು ಬರೆದುಕೊಂಡಿದ್ದಾರೆ.
ವಿವಾದದ ಬಗ್ಗೆ ಐಶ್ವರ್ಯಾ ರಾಜೇಶ್ ಬರೆದುಕೊಂಡಿದ್ದೇನು?
ಪಿ.ಆರ್ ಮಾಧ್ಯಮ ಹೇಳಿಕೆಯನ್ನು ಐಶ್ವರ್ಯಾ ಬಿಡುಗಡೆ ಮಾಡಿʻʻ ಆತ್ಮೀಯ ಸ್ನೇಹಿತರೇ ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ನೀವು ನನ್ನ ಮೇಲೆ ಪ್ರೀತಿಯನ್ನು ಧಾರೆಯೆರೆದಿದ್ದೀರಿ. ಮತ್ತು ನನ್ನ ಎಲ್ಲಾ ಚಿತ್ರಗಳಿಗೆ ನೀವು ನೀಡುತ್ತಿರುವ ಉತ್ತಮ ಬೆಂಬಲಕ್ಕಾಗಿ ಧನ್ಯವಾದ. ತೆಲುಗು ಚಿತ್ರರಂಗದಲ್ಲಿ ನಾನು ಯಾವ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನನ್ನನ್ನು ಕೇಳಲಾಯಿತು. ಇದಕ್ಕೆ ನಾನು ಚಿತ್ರರಂಗವನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ನನಗೆ ಇಷ್ಟವಾಗುವ ಪಾತ್ರಗಳು ಸಿಕ್ಕರೆ ನಾನು ಖಂಡಿತವಾಗಿಯೂ ಮಾಡುತ್ತೇನೆ ಎಂದು ಉತ್ತರಿಸಿದೆ. ಉದಾಹರಣೆಯನ್ನು ಹೇಳುವುದಾದರೆ, ಪುಷ್ಪದಲ್ಲಿನ ಶ್ರೀವಲ್ಲಿ ಪಾತ್ರವು ನನಗೆ ತುಂಬಾ ಇಷ್ಟವಾಯಿತು. ಏಕೆಂದರೆ ಅಂತಹ ಪಾತ್ರಗಳು ನನಗೆ ಸರಿಹೊಂದುತ್ತವೆ ಎಂದು ನಾನು ಭಾವಿಸಿದೆ. ಆದರೆ, ದುರದೃಷ್ಟವಶಾತ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರನ್ನು ನಾನು ಅವಹೇಳನ ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಮೂಡಿಸುವ ರೀತಿಯಲ್ಲಿ ತಪ್ಪು ಸುದ್ದಿಗಳು ವರದಿ ಆಗಿವೆ. ರಶ್ಮಿಕಾ ಅವರ ಕೆಲಸದ ಬಗ್ಗೆ ನನಗೆ ಅಭಿಮಾನವಿದೆ. ನನ್ನ ಎಲ್ಲಾ ಸಹ ನಟ-ನಟಿಯರ ಬಗ್ಗೆ ನನಗೆ ಅಪಾರ ಗೌರವವಿದೆ. ಈ ವದಂತಿಗಳನ್ನು ನಿಲ್ಲಿಸಲು ನಾನು ವಿನಂತಿಸುತ್ತೇನೆʼʼಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Aishwarya Rajesh : ಶ್ರೀವಲ್ಲಿ ಪಾತ್ರವನ್ನು ನಾನು ರಶ್ಮಿಕಾಗಿಂತ ಚೆನ್ನಾಗಿ ಮಾಡ್ತಿದ್ದೆ ಎಂದ ಐಶ್ವರ್ಯ!
ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
ಐಶ್ವರ್ಯಾ ಹೇಳಿದ್ದೇನು?
ನಟಿ ಐಶ್ವರ್ಯ ಅವರು ತಮ್ಮ ಫರ್ಹಾನಾ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ “ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ಆ ಪಾತ್ರ ಅವರಿಗಿಂತ ನನಗೇ ಹೆಚ್ಚು ಸೂಕ್ತವಾಗುತ್ತಿತ್ತು. ನಾನು ಅವರಿಗಿಂತ ಚೆನ್ನಾಗಿ ಆ ಪಾತ್ರವನ್ನು ನಿಭಾಯಿಸಬಲ್ಲೆಯಾಗಿದ್ದೆ” ಎಂದು ಹೇಳಿರುವುದಾಗಿ ವರದಿಯಾಗಿತ್ತು. ಐಶ್ವರ್ಯಾ ಅವರು ಸಿನಿಮಾ ರಂಗದಲ್ಲಿ ತಮಿಳಿನ ʻಕಾಕ ಮುಟ್ಟಾಯ್ʼ ಸಿನಿಮಾ ಮೂಲಕ ಖ್ಯಾತಿ ಪಡೆದುಕೊಂಡವರು. ಅಲ್ಲಿಂದ ಅವರು ಬಹುಬೇಡಿಕೆಯ ನಟಿಯಾಗಿ ಬದಲಾಗಿದ್ದಾರೆ. ತಮಿಳಿನ ಭೂಮಿಕಾ, ಡ್ರೈವರ್ ಜಮುನಾ, ದಿ ಗ್ರೇಟ್ ಇಂಡಿಯನ್ ಕಿಚನ್, ಸೊಪ್ಪನ ಸುಂದರಿ, ರನ್ ಬೇಬಿ ರನ್ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಹಿಂದಿಯಲ್ಲಿ ಫಿಲಂ, ಡ್ಯಾಡಿ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಇದೀಗ ಫರ್ಹಾನಾ ಸಿನಿಮಾದಲ್ಲಿ ಈ ನಟಿ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಮಗುವಿನ ತಾಯಿಯಾದ ಅವರು ಕುಟುಂಬದ ಬಡತನ ತಾಳಲಾರದೆ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡಲಾರಂಭಿಸುತ್ತಾರೆ. ಅಲ್ಲಿ ಪ್ರತಿ ಕರೆಗಳು ನಟಿಯ ಜೀವನವನ್ನೇ ಬದಲಿಸುವ ಕುರಿತಾಗಿ ಕಥೆಯಿದೆ.