ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜತೆಗೆ ಇದೀಗ ಫೋಟೊ ಶೂಟ್ನಲ್ಲಿ ನ್ಯಾಷನಲ್ ಕ್ರಶ್ ಮಿಂಚಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಸಿನಿಮಾಗಳ ಜತೆಗೆ ಹಲವು ಬ್ರ್ಯಾಂಡ್ಗಳ ಪ್ರಮೋಷನ್ ಮಾಡುತ್ತಾರೆ. ಇದೀಗ ಒನಿಟ್ಸುಕಾ ಟೈಗರ್ AW ‘23ಬ್ರ್ಯಾಂಡ್ ಜತೆಗೆ ಫೋಟೊ ಹಂಚಿಕೊಂಡಿದ್ದಾರೆ. ಆಧುನಿಕ ಮತ್ತು ಸಾಂಪ್ರದಾಯಿಕ ಮಿಶ್ರಣ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Rashmika Mandanna: ನೀರಿನಲ್ಲಿ ಮುಳುಗಿದ ರಶ್ಮಿಕಾ; ‘ದಿ ಗರ್ಲ್ಫ್ರೆಂಡ್’ ಫಸ್ಟ್ ಲುಕ್ ಔಟ್!
ಕೆಲವು ದಿನಗಳ ಹಿಂದೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಘೋಷಿಸಿದರು. ನಟಿಯ ಏಳು ವರ್ಷಗಳ ವೃತ್ತಿಜೀವನದಲ್ಲಿ ಇದು ನಟಿಯ 24ನೇ ಚಿತ್ರವಾಗಿದೆ. ‘ದಿ ಗರ್ಲ್ಫ್ರೆಂಡ್’ ರಶ್ಮಿಕಾ ಅವರ ಸೋಲೊ ಸಿನಿಮಾ ಎನ್ನಲಾಗಿದೆ. ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕಾಗಿ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ನಿರ್ಮಿಸಲಿದೆ.
ರಶ್ಮಿಕಾರ ಸಿನಿಮಾ ವಿಚಾರಕ್ಕೆ ಬಂದರೆ, ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಚಿತ್ರ ಅನಿಮಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ಅನುಪಮ್ ಖೇರ್, ಶಕ್ತಿ ಕಪೂರ್ ಮತ್ತು ಪ್ರಮುಖ ಪಾತ್ರಗಳಲ್ಲಿದ್ದಾರೆ.
‘ರೇನ್ಬೋ, ‘ಡಿ 51’, ‘ಛಾವಾ’, ‘ಪುಷ್ಪ: ದಿ ರೂಲ್’, ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.