ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna ) ಆಗಾಗ ತಮ್ಮ ಹೇಳಿಕೆ ಮೂಲಕ ಟ್ರೋಲ್‌ಗೆ ಒಳಗಾಗುತ್ತಿರುತ್ತಾರೆ. ಇದೀಗ ತಮ್ಮ ಎರಡನೇ ಬಾಲಿವುಡ್ ಸಿನಿಮಾ ʻಮಿಷನ್ ಮಜ್ನುʼ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಹಾಡುಗಳನ್ನು ರಿಲೀಸ್ ಮಾಡುವ ವೇಳೆ ರಶ್ಮಿಕಾ ಮಂದಣ್ಣ, ತಮ್ಮ ಮೇಲೆ ಬಾಲಿವುಡ್ ಹಾಡುಗಳು ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಹೇಳಿದ್ದಾರೆ. ಈ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಟಿ ರಶ್ಮಿಕಾ.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜತೆ ರಶ್ಮಿಕಾ ಮಂದಣ್ಣ ನಟಿಸಿರುವ ʻಮಿಷನ್ ಮಜ್ನುʼ ಸಿನಿಮಾ ಜನವರಿ 19, 2023ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ. ʻವಿಷನ್ ಮಜ್ನು’ ಸಿನಿಮಾದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ರಶ್ಮಿಕಾ ಬಾಲಿವುಡ್ ಹಾಡುಗಳ ಬಗ್ಗೆ ಮಾತಾಡಿದ್ದರು. ಈ ವೇಳೆ ” ಬಾಲಿವುಡ್ ಹಾಡುಗಳು ತುಂಬಾನೇ ರೊಮ್ಯಾಂಟಿಕ್ ಆಗಿರುತ್ತದೆ. ಅದೇ ದಕ್ಷಿಣ ಭಾರತದ ಸಿನಿಮಾ ಹಾಡುಗಳು ಮಸಾಲಾ ಹಾಗೂ ಐಟಂ ಸಾಂಗ್‌ಗಳಾಗಿರುತ್ತದೆ ” ಎಂದು ಹೇಳಿದ್ದರು. ಈ ಹೇಳಿಕೆ ದಕ್ಷಿಣ ಭಾರತದ ಸಿನಿಪ್ರಿಯರನ್ನು ಕೆರಳಿಸಿದೆ.
ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ಭೋಜ್‌ಪುರಿ ಸಿನಿಮಾಗೆ ಸೂಕ್ತ, ಹಿಂದಿಗಲ್ಲ ಎಂದ ವಿಮರ್ಶಕ ಕಮಾಲ್ ಖಾನ್!
ವಿಡಿಯೊ ವೈರಲ್ ಆಗುತ್ತದಂತೆ ಕಮೆಂಟ್ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ʻʻರಶ್ಮಿಕಾ ನಿಮಗೆ ಎ ಆರ್ ರೆಹಮಾನ್ ಹಾಡುಗಳು, ಇಳಯರಾಜ ಹಾಡುಗಳು ಗೊತ್ತಿಲ್ಲವೇ? ತೆಲುಗು ಹಾಡುಗಳು ಮಾಸ್ ಹಾಗೂ ಐಟಂ ಸಾಂಗ್‌ಗಳಿರುತ್ತದೆ. ಬಾಲಿವುಡ್ ಐಟಂ ಸಾಂಗ್‌ಗಳಲ್ಲಿ ಹೆಚ್ಚು ವಿಕೃತವಿರುತ್ತದೆ ಎನ್ನುವುದನ್ನು ಹೇಳಬೇಕಿತ್ತು.” ಎಂದು ಟ್ವೀಟ್ ಮಾಡಿದ್ದಾರೆ.
ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ ಈ ಹಿಂದೆ ರಶ್ಮಿಕಾ ಕುರಿತು ಟ್ವೀಟ್ ಮಾಡಿದ್ದರು. ʻʻʻರಶ್ಮಿಕಾ ಅವರನ್ನು ನೋಡಿದರೆ ಅವರು ದಕ್ಷಿಣ ಭಾರತದ ಚಿತ್ರಗಳು ಮತ್ತು ಭೋಜ್‌ಪುರಿ ಚಿತ್ರಗಳಿಗೆ ಸೂಕ್ತ ಹೊರತು ಹಿಂದಿ ಸಿನಿಮಾಗಳಿಗೆ ಅಲ್ಲ ಅನಿಸುತ್ತದೆ. ಈಗಾಗಲೇ ಐಶ್ವರ್ಯಾ, ಮಾಧುರಿ ಮತ್ತು ಕರೀನಾ ಅವರಂತಹ ನಟಿಯರನ್ನು ನೋಡಿರುವ ಹಿಂದಿ ಪ್ರೇಕ್ಷಕರು ರಶ್ಮಿಕಾರನ್ನು ನಾಯಕಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲʼʼಎಂದಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗಳು ಆಗಿದ್ದವು.
ಇದನ್ನೂ ಓದಿ | Rashmika Mandanna | ವಿಶೇಷ ಫೋಟೊಶೂಟ್ ಮೂಲಕ ಗಮನ ಸೆಳೆದ ರಶ್ಮಿಕಾ ಮಂದಣ್ಣ