Site icon Vistara News

Rashmika Mandanna: 5 ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರಾ ರಶ್ಮಿಕಾ? ಟ್ವಿಟರ್‌ನಲ್ಲಿ ನಟಿ ಹೇಳಿದ್ದೇನು?

Rashmika Mandanna purchased 5 flats in different cities?

ಬೆಂಗಳೂರು: 2016ರಲ್ಲಿ ಕಿರಿಕ್ ಪಾರ್ಟಿಯೊಂದಿಗೆ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ (Rashmika Mandanna) ಹಲವಾರು ವಿಭಿನ್ನ ಚಲನಚಿತ್ರಗಳ ಮೂಲಕ ಮುನ್ನುಗ್ಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ, ನಟಿ ಐದು ವಿವಿಧ ನಗರಗಳಲ್ಲಿ ಐದು ಐಷಾರಾಮಿ ಫ್ಲ್ಯಾಟ್‌ಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇದೀಗ ಈ ಬಗ್ಗೆ ಸ್ವತಃ ರಶ್ಮಿಕಾ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟರ್‌ನಲ್ಲಿ ರಶ್ಮಿಕಾ ಮಂದಣ್ಣ 5 ಸ್ಥಳಗಳಲ್ಲಿ 5 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ ಎಂದು ಪೋಸ್ಟ್‌ ವೈರಲ್‌ ಆಗಿತ್ತು. ಈ ಪೋಸ್ಟ್‌ಗೆ ರಶ್ಮಿಕಾ “ಇದು ನಿಜವಾಗಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ. ರಶ್ಮಿಕಾ 5 ವಿವಿಧ ಸ್ಥಳಗಳಲ್ಲಿ 5 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ. ಹೈದರಾಬಾದ್, ಗೋವಾ, ಕೂರ್ಗ್, ಮುಂಬೈ ಮತ್ತು ಬೆಂಗಳೂರಿನಲ್ಲಿ ಅವರು ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rashmika Mandanna: ನೆಲ ಒರೆಸುವ ಬಟ್ಟೆ ಹಾಗಿದೆ ಎಂದ ನೆಟ್ಟಿಗರು: ರಶ್ಮಿಕಾ ಧರಿಸಿದ ಟಾಪ್‌ ಬೆಲೆ ಎಷ್ಟು?

ಇದನ್ನೂ ಓದಿ: Rashmika Mandanna: ಅಭಿಮಾನಿಗೇ ಪ್ರಪೋಸ್‌ ಮಾಡಿದ ರಶ್ಮಿಕಾ ಮಂದಣ್ಣ! ವೈರಲ್‌ ಆಯ್ತು ವಿಡಿಯೊ

ನಟಿ ವಿಜಯ್ ದಳಪತಿ ಅಭಿನಯದ ‘ವಾರಿಸು’ ಹಾಗೂ ಸಿದ್ಧಾರ್ಥ್‌ ಜತೆ ʻಮಿಷನ್ ಮಜ್ನುʼ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಸದ್ಯ ಅಲ್ಲು ಅರ್ಜುನ್‌ ಜತೆ ಪುಷ್ಪಾ-2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಗೆ ಭೇಟಿ ನೀಡಿದ ನಂತರ ಅವರು ಹೊಸ ಚಿತ್ರಕ್ಕೆ ಸಹಿ ಹಾಕುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

Exit mobile version