ಬೆಂಗಳೂರು : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ತಮ್ಮ ಬೋಲ್ಡ್ ಲುಕ್ನಿಂದಲೇ ಸಖತ್ ಸುದ್ದಿಯಾಗುತ್ತಿರುತ್ತಾರೆ. ಹಾಗೂ ವಿಭಿನ್ನ ಶೈಲಿಯ ಡ್ರೆಸ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹೆಚ್ಚಾಗಿ ಕ್ಲಾಸಿ ಲುಕ್ ಅನ್ನೇ ಇಷ್ಟ ಪಡುವ ಕ್ರಶ್ಮಿಕಾ ಅವರ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.
ಲೇಟೆಸ್ಟ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಅವರು ಕೆಲವು ಪೋಟೋಗಳನ್ನು ಶೇರ್ ಮಾಡಿ ʻʻಇದನ್ನು ಯಾವಾಗ ಚಿತ್ರೀಕರಿಸಲಾಯಿತು ಎಂಬುದು ನನಗೆ ನಿಜವಾಗಿಯೂ ನೆನಪಿಲ್ಲ. ಆದರೆ ನಟಿಯಾಗಿರುವುದರ ಹೊರತಾಗಿ, ಈ ನಾಲ್ಕು ಚಿತ್ರಗಳು ನನ್ನನ್ನು ನಾನು ಎಂದು ವರ್ಣಿಸುತ್ತವೆ ಎಂದು ನಾನು ಭಾವಿಸುತ್ತೇನೆ!ʼ ಎಂದು ಹೇಳಿಕೊಂಡಿದ್ದಾರೆ.
ʻʻಚಿತ್ರಗಳು ಸಾವಿರ ಪದಗಳನ್ನು ಮಾತನಾಡಬಲ್ಲವು. ಈ ಪೋಟೋಗಳು ಯಾವಾಗ ತೆಗೆದಿದ್ದು ಎಂಬುದು ನನಗೆ ನೆನಪಿಲ್ಲ. ಆದರೆ ಇವುಗಳನ್ನು ತೆಗೆದಾಗ ನನಗಾದ ಭಾವನೆ ನೆನಪಿದೆ ಎಂದು ನಾನು ಭಾವಿಸುತ್ತೇನೆ. ಇದು ನನ್ನದೇ ಪುಟ್ಟ ಜಗತ್ತಿನಲ್ಲಿ ನಾನು! ಈ ಚಿತ್ರಗಳನ್ನು ನೋಡುವಾಗ ನನಗೆ ಕಾಮ್ ಎಂದೆನಿಸುತ್ತದೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Rashmika Mandanna | ಹೊಸ ಪೋಟೊ ಹಂಚಿಕೊಂಡ ರಶ್ಮಿಕಾ: ಸಖತ್ ಹಾಟ್ ಅಂದ್ರು ಫ್ಯಾನ್ಸ್
ಇತ್ತೀಚಿಗೆ ಇಂಗ್ಲಿಷ್ ಪತ್ರಿಕೆಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಶ್ಮಿಕಾ ರೆಡ್ ಕಲರ್ ಡ್ರೆಸ್ನಲ್ಲಿ ಮಿಂಚಿದ್ದರು. ಈ ಹಿಂದೆ ಕೂಡ ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲೂ ಕೂಡ ತಮ್ಮ ವಿಭಿನ್ನ ಡ್ರೆಸ್ ಕಾರಣಕ್ಕಾಗಿಯೇ ರಶ್ಮಿಕಾ ಟ್ರೋಲ್ ಆಗಿದ್ದರು. ಆಗಲೂ ಕೂಡ ಕ್ಯಾಮರಾಗೆ ಫೋಸ್ ಕೊಡುವಾಗ ಮುಜುಗರಕ್ಕೆ ಒಳಗಾದ ಘಟನೆ ನಡೆದಿತ್ತು.
ತೆಲುಗಿನಲ್ಲಿ ಗೀತ ಗೊವಿಂದಂ ಚಿತ್ರದ ಮೂಲಕ ಖ್ಯಾತಿ ಗಳಿಸಿದ ರಶ್ಮಿಕಾ ನಂತರ ಡಿಯರ್ ಕಾಮ್ರೇಡ್, ಸರಿ ಲೇರು ನಿಕೇವರು ಚಿತ್ರಗಳಲ್ಲಿ ಸ್ಟಾರ್ ನಟರ ಜತೆ ನಟಿಸುವ ಮೂಲಕ ಹೆಚ್ಚು ಪ್ರಖ್ಯಾತಿ ಗಳಿಸಿದ್ದರು. ಬಾಲಿವುಡ್ನ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಅವರೊಂದಿಗೆ ನಟಿಸುತ್ತಿದ್ದಾರೆ. ಇದಾದ ಬಳಿಕ ರಣಬೀರ್ ಕಪೂರ್ ಹಾಗೂ ಅಮಿತಾಭ್ ಬಚ್ಚನ್ ಸಿನಿಮಾಗಳಲ್ಲಿ ನಟಿಸುವುದು ಫಿಕ್ಸ್ ಆಗಿದೆ.
ಇದನ್ನೂ ಓದಿ | Rashmika Mandanna | ರೆಡ್ ಡಿಸೈನರ್ ಲೆಹೆಂಗಾದಲ್ಲಿ ಕಂಗೊಳಿಸಿದ ರಶ್ಮಿಕಾ