Site icon Vistara News

Rashmika Mandanna: ರಶ್ಮಿಕಾ ಮಂದಣ್ಣ ಸೆಕ್ಸಿ ಫೋಟೊ ವೈರಲ್‌!

Rashmika Mandanna

ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ʻಅನಿಮಲ್‌ʼ ಸಿನಿಮಾ ಲಿಪ್‌ ಲಾಕ್‌ ದೃಶ್ಯಗಳ ಬೆನ್ನಲ್ಲೇ ಇದೀಗ ಹಾಟ್ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಟೀಂನವರು ಗೊತ್ತಿಲ್ಲದೆ ಈ ಫೋಟೊ ಪೋಸ್ಟ್ ಮಾಡಿದ್ದಾರಂತೆ. ʻʻಈ ಚಿತ್ರದ ಹಿಂದಿನ ಕಥೆ ಏನೆಂದರೆ. ಇದನ್ನು ಸುಮಾರು ಒಂದು ವರ್ಷದ ಹಿಂದೆ ಫೋಟೊ ತೆಗೆದುಕೊಂಡಿದ್ದು. ನಾವು ರಶ್ಮಿಕಾಗೆ ಗೊತ್ತಿಲ್ಲದೆ ಈ ಫೋಟೊ ಪೋಸ್ಟ್ ಮಾಡುತ್ತಿದ್ದೇವೆ. ಎಲ್ಲ ನಿಮಗೋಸ್ಕರ’ ಎಂದು ಕ್ಯಾಪ್ಷನ್‌ ನೀಡಲಾಗಿದೆ.

ಈ ಪೋಟೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಟಿಯನ್ನು ಹೊಗಳಿದ್ದಾರೆ. “ನಾನು ನಿಮಗೆ ನನ್ನ ಹೃದಯವನ್ನು ನೀಡಿದ್ದೇನೆ” ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಇನ್ನೊಬ್ಬರು ʻʻನಿಮ್ಮ ಲುಕ್‌ನಿಂದ ನನ್ನನ್ನು ಕೊಂದಿದ್ದೀರಿʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ರಶ್ಮಿಕಾರ ಸಿನಿಮಾ ವಿಚಾರಕ್ಕೆ ಬಂದರೆ, ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಚಿತ್ರ ಅನಿಮಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ಅನುಪಮ್ ಖೇರ್, ಶಕ್ತಿ ಕಪೂರ್ ಮತ್ತು ಪ್ರಮುಖ ಪಾತ್ರಗಳಲ್ಲಿದ್ದಾರೆ.

ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ. ಅನಿಮಲ್‌ ಸಿನಿಮಾದ ಈ ಹಾಡು ನೋಡಿದಾಗ ರಶ್ಮಿಕಾ ಮಂದಣ್ಣ ತುಂಬ ಬೋಲ್ಡ್‌ ಆಗಿ ನಟಿಸಿರುವಂತೆ ಕಾಣುತ್ತದೆ.

ಪ್ಯಾನ್‌ ಇಂಡಿಯಾ ಚಿತ್ರವಾಗಿ ಇದು ತೆರೆಗೆ ಬರಲಿದೆ.ರಣಬೀರ್‌ ಕಪೂರ್‌ ತಂದೆಯಾಗಿ ಅನಿಲ್‌ ಕಪೂರ್‌ ಕಾಣಿಸಿಕೊಂಡಿದ್ದಾರೆ. ಸನ್ನಿ ಡಿಯೋಲ್‌ ಮುಖ್ಯ ಖಳನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ʼʼಇದು ಕ್ರೈಮ್‌ ಡ್ರಾಮ ಮತ್ತು ತಂದೆ-ಮಗನ ಕಥೆ ಹೇಳುತ್ತದೆ. ಅಭಿಮಾನಿಗಳು ನಿರೀಕ್ಷಿಸದ ರೀತಿ ನನ್ನ ಪಾತ್ರ ಮೂಡಿ ಬಂದಿದೆ. ನನ್ನ ಪಾತ್ರಕ್ಕೆ ಸ್ವಲ್ಪ ನೆಗೆಟಿವ್‌ ಛಾಯೆಯೂ ಇದೆʼʼ ಎಂದು ರಣಬೀರ್‌ ಕಪೂರ್‌ ಹೇಳಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.ತೆಲುಗಿನ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಡಿಸೆಂಬರ್‌ 1ರಂದು ತೆರೆಗೆ ಬರಲಿದೆ.

ಇದನ್ನೂ ಓದಿ: Rashmika Mandanna: ಫೋಟೊ ಪೋಸ್ಟ್‌ ಮಾಡಿ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ!

ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಅಮಿತಾಬ್‌ ನಟನೆಯ ʼಗುಡ್‌ ಬೈʼ ಸಿನಿಮಾ ಮೂಲಕ ಭರ್ಜರಿಯಾಗಿ ಬಾಲಿವುಡ್‌ ಪ್ರವೇಶಿಸಿದ್ದ ರಶ್ಮಿಕಾಗೆ ಆ ಚಿತ್ರದ ಮೂಲಕ ನಿರೀಕ್ಷಿತ ಗೆಲುವು ದಕ್ಕಿರಲಿಲ್ಲ. ಬಳಿಕ ಸಿದ್ಧಾರ್ಥ್‌ ಮಲ್ಹೋತ್ರಾ ಜತೆಗೆ ನಟಿಸಿದ್ದ ʼಮಿಷನ್‌ ಮಜ್ನುʼ ಒಟಿಟಿ ಮೂಲಕ ರಿಲೀಸ್‌ ಆಗಿತ್ತು.

Exit mobile version