Rashmika Mandanna: ಇದೆಲ್ಲ ಹೇಗೆ ಆಯಿತು.. ನಾನು ಇಲ್ಲಿಗೆ ಹೇಗೆ ಬಂದೆ ಅಂತಿದ್ದಾರೆ ನ್ಯಾಶನಲ್ ಕ್ರಶ್! Yashaswi Devadiga 1 ವರ್ಷ ago ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಟ್ರೆಡಿಶನಲ್, ಇಂಡಿಯನ್ ಹಾಗೇ ವೆಸ್ಟರ್ನ್ ಲುಕ್‌ನಲ್ಲಿ ಆಗಾಗ ಕಾಣಿಸಿಕೊಂಡು ಸಖತ್ ಸುದ್ದಿಯಲ್ಲಿರುತ್ತಾರೆ. ಹಾಗೇ ಅನೇಕ ಮ್ಯಾಗಜಿನ್ಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರತಿಷ್ಠಿತ ಮ್ಯಾಗಜಿನ್ ʻಗ್ರಾಜಿಯಾʼಗೆ ಕವರ್ ಫೋಟೊದಲ್ಲಿ ಮಿಂಚಿದ್ದಾರೆ. ತಮ್ಮ ಕವರ್ ಫೋಟೊಗಳನ್ನು ನಟಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಫೋಟೊಗಳೊಂದಿಗೆ ʻʻಇದೆಲ್ಲ ಹೇಗೆ ಆಯಿತು.. ನಾನು ಇಲ್ಲಿಗೆ ಹೇಗೆ ಬಂದೆ.. ಇದೆಲ್ಲ ಹೇಗೆ ಸಾಧ್ಯವಾಯಿತು.. ನಿಜವಾಗಿಯೂ ಕೃತಜ್ಞರಾಗಿದ್ದೇನೆ. ಗ್ರಾಜಿಯಾಗೆ ಕವರ್ ಗರ್ಲ್ ಆಗಿರುವುದು ನನಗೆ ವಿಶೇಷʼʼಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಗ್ರಾಜಿಯಾ ಮ್ಯಾಗಜಿನ್ಗೆ ಅನೇಕ ಬಾಲಿವುಡ್ ನಟಿಯರು ಕವರ್ ಗರ್ಲ್ ಆಗಿದ್ದರು. ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕಿಯಾರಾ ಆಡ್ವಾಣಿ, ಶ್ರದ್ಧಾ ಕಪೂರ್ ಸೇರಿದಂತೆ ಅನೇಕ ನಟಿಯರು ಕೂಡ ಕವರ್ ಪೇಜ್ನಲ್ಲಿ ಕಾಣಿಸಿಕೊಂಡಿದ್ದರು. ಈ ಸಾಲಿಗೆ ನಟಿ ರಶ್ಮಿಕಾ ಸೇರಿದ್ದಾರೆ. ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್‌ಗೆ ನಟಿ ರಾಯಭಾರಿಯಾಗಿ ಸಖತ್ ಸುದ್ದಿಯಲ್ಲಿದ್ದರು. ರಶ್ಮಿಕಾ ಮಂದಣ್ಣ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ.