Site icon Vistara News

Rashmika Mandanna | ಹೊಸ ವರ್ಷಾಚರಣೆಗೆ ಬಿಳಿ ಸೀರೆಯಲ್ಲಿ ಮಿಂಚಿದ ರಶ್ಮಿಕಾ

ಚೆನ್ನೈ: ನಟಿಯರಿಗೂ ಬಿಳಿ ಸೀರೆಗೂ ಎಲ್ಲಿಲ್ಲದ ನಂಟು. ತೆಳುವಾದ ಬಿಳಿ ಸೀರೆಯನ್ನು ಉಟ್ಟು ಫೋಸ್ ಕೊಟ್ಟರೆ ಅಭಿಮಾನಿಗಳು ಕಣ್ಣಗಲಿಸಿ ನೋಡುವುದಂತೂ ಗ್ಯಾರಂಟಿ. ಇದೀಗ ಈ ಬಿಳಿ ಸೀರೆ ಟ್ರೆಂಡ್‌ಗೆ ದಕ್ಷಿಣ ಭಾರತದ ಪ್ರಸಿದ್ಧ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಸೇರಿಕೊಂಡಿದ್ದಾರೆ. ಹೊಸ ವರ್ಷದ ಶುಭ ಹಾರೈಸುವುದಕ್ಕೆ ನಟಿ ಹಾಕಿರುವ ಪೋಸ್ಟ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ: Rashmika Mandanna | ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ-ವಿಜಯ್‌ ದೇವರಕೊಂಡ: ಫೋಟೊ ಸೀಕ್ರೆಟ್‌ ಏನು?

ಅರ್ಪಿತಾ ಮೆಹ್ತಾ ಲೇಬಲ್ ಇರುವ ಬಿಳಿ ಬಣ್ಣದ ಸೀರೆಯನ್ನುಟ್ಟ ರಶ್ಮಿಕಾ ಚಂದದ ಫೋಟೋಗಳನ್ನು ತಮ್ಮ ಇನ್ಸ್‌ಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ, “ಎಷ್ಟೊಂದು ಪ್ರೀತಿ ಸಿಕ್ಕಿದೆ, ಅದಕ್ಕೆ ನಾನು ಕೃತಜ್ಞಳಾಗಿದ್ದೇನೆ. ನನ್ನ ಪ್ರೀತಿ ಪಾತ್ರರಿಗೆ ಧನ್ಯವಾದಗಳು. ಈ ಹೊಸ ವರ್ಷದಲ್ಲಿ ಎಲ್ಲರಿಗೂ ಕೇವಲ ಪ್ರೀತಿಯೇ ಸಿಗಲಿ. ದೇವರು ನಿಮ್ಮೆಲ್ಲರಿಗೂ ಆರೋಗ್ಯ ಮತ್ತು ಸಂತಸವನ್ನು ಕರುಣಿಸಲಿ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಇದನ್ನೂ ಓದಿ: Rashmika Mandanna | ರಣಬೀರ್‌-ರಶ್ಮಿಕಾ ಅಭಿನಯದ ʻಅನಿಮಲ್‌ʼ ಸಿನಿಮಾ ಫಸ್ಟ್‌ ಲುಕ್‌ ಔಟ್‌: ರಗಡ್‌ ಲುಕ್‌ ಅಂದ್ರು ಫ್ಯಾನ್ಸ್‌!
ರಶ್ಮಿಕಾ ತೊಟ್ಟಿರುವ ಬಿಳಿ ಬಣ್ಣದ ಸೀರೆಗೆ ಬಂಗಾರದ ಬಣ್ಣದ ಮಿರರ್ ವರ್ಕ್ ಬಾರ್ಡರ್ ಇದೆ. ಅದಕ್ಕೆ ಸರಿಹೊಂದುವಂತೆ ನಟಿ ಎಂಬ್ರಾಯಿಡರ್ ರವಿಕೆ ತೊಟ್ಟಿದ್ದಾರೆ. ಬಂಗಾರದ ಬಣ್ಣದ ಜುಮುಕಿ ಹಾಗೂ ಬಳೆಗಳನ್ನು ಹಾಕಿಕೊಂಡಿದ್ದಾರೆ. ಫ್ರೀ ಹೇರ್ ಬಿಟ್ಟಿರುವ ನಟಿಯ ಫೋಟೋಗಳು ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿವೆ.

Exit mobile version