Site icon Vistara News

Rashmika Mandanna | ರಶ್ಮಿಕಾ ಮಂದಣ್ಣ ನನ್ನ ಕ್ರಶ್‌: ನಟ ನಂದಮೂರಿ ಬಾಲಕೃಷ್ಣ

Rashmika Mandanna

ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ʻಗುಡ್‌ಬೈʼ ಸಿನಿಮಾ ಮೂಲಕ ಮಿಂಚುತ್ತಿದ್ದಾರೆ. ಬಿಗ್‌ ಬಿ ಜತೆ ನಟಿಸಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗೆ ವ್ಯಕ್ತಗೊಂಡಿದೆ. ಇದರ ಬೆನ್ನಲ್ಲೆ ಟಾಲಿವುಡ್‌ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ರಶ್ಮಿಕಾ ನನ್ನ ಕ್ರಶ್‌ ಎಂದು ಹೇಳಿಕೊಂಡಿದ್ದಾರೆ. ʻಅನ್‌ಸ್ಟಾಪೆಬಲ್‌ʼ ಎನ್ನುವ ಶೋ ಅನ್ನು ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿದ್ದರು. ಇದೀಗ ನಂದಮೂರಿ ಬಾಲಕೃಷ್ಣ ಮತ್ತೆ ಅನ್‌ಸ್ಟಾಪೆಬಲ್ ಸೀಸನ್-2 ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

ಈ ಶೋನಲ್ಲಿ ಮೊದಲ ಸಂಚಿಕೆಯಲ್ಲಿ ತೆಲುಗು ನಟ ವಿಶ್ವಕ್‌ ಸೇನ್ ಮತ್ತು ಸಿದ್ಧು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ವಿಶ್ವಕ್ ಸೇನ್ ಮತ್ತು ಸಿದ್ಧು ಜೊನ್ನಲಗಡ್ಡ ನಂದಮೂರಿ ಬಾಲಕೃಷ್ಣರಿಗೆ ನಿಮ್ಮ ಕ್ರಶ್‌ ಯಾರೆಂದು ಕೇಳಿದ್ದಾರೆ. ಉತ್ತರಿಸಿದ ನಂದಮೂರಿ ಬಾಲಕೃಷ್ಣ ಅವರು ರಶ್ಮಿಕಾ ಎಂದು ಹೇಳಿದ್ದಾರೆ. ಟಾಲಿವುಡ್‌, ಕಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ರಶ್ಮಿಕಾ ಮಂದಣ್ಣ ಅವರನ್ನು ಸ್ವತಃ ತೆಲುಗು ಸ್ಟಾರ್ ಬಾಲಯ್ಯ ಅವರಿಗೂ ಇಷ್ಟವಾಗಿದೆ.

ಇದನ್ನೂ ಓದಿ | Rashmika Mandanna | ಟ್ರೋಲ್‌ ವಿಚಾರಕ್ಕೆ ಒಬ್ಬಳೆ ಕೂತು ಅತ್ತಿದ್ದೇನೆ ಎಂದ ರಶ್ಮಿಕಾ : ಶ್ರೀವಲ್ಲಿ ಅಂತ ಕರಿತಾರೆ ನನ್ನ!

ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ಅನ್‌ಸ್ಪಾಪಬಲ್‌ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತೆಲುಗು ಒಟಿಟಿ ಆಹಾದಲ್ಲಿ ಈ ಶೋ ಸ್ಟ್ರೀಮಿಂಗ್ ಆಗಲಿದೆ. ಪ್ರೋಮೋ ರಿಲೀಸ್ ಆಗಿದ್ದು ಸಂಪೂರ್ಣ ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ʻಅಖಂಡʼ ಸಿನಿಮಾದಲ್ಲಿ ಕೊನೆಯದಾಗಿ ತೆರೆ ಮೇಲೆ ಬಾಲಕೃಷ್ಣ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ | Gandhada Gudi | ‘ಪುನೀತ್ ಪರ್ವ’ಕ್ಕೆ ಬಾಲಯ್ಯ, ಸೂರ್ಯ, ಕಮಲ್ ಹಾಸನ್ ಆಗಮನ!

Exit mobile version