ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ತಮ್ಮ ಪೋಸ್ಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಹಲವು ನಟರು ರಶ್ಮಿಕಾ ನನ್ನ ಕ್ರಶ್ ಎಂದು ಹೇಳಿಕೆ ನೀಡಿದ್ದೂ ಇದೆ. ಇದೀಗ ನ್ಯಾಶನಲ್ ಕ್ರಶ್ ರಶ್ಮಿಕಾ ನನ್ನ ಕ್ರಶ್ ಎಂದು ಭಾರತ ತಂಡದ ಯುವ ಆಟಗಾರ ಶುಭಮನ್ ಗಿಲ್ ಹೇಳಿಕೊಂಡಿದ್ದಾರೆ. ಮದುವೆಯನ್ನೂ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ರಶ್ಮಿಕಾ ನನ್ನ ಕ್ರಶ್ ಎಂದು ʻಅನ್‌ಸ್ಟಾಪೆಬಲ್ʼ ಶೋನಲ್ಲಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಭಾರತ ತಂಡದ ಯುವ ಆಟಗಾರ ಶುಭಮನ್ ಗಿಲ್ ಕೂಡ ರಶ್ಮಿಕಾಗೆ ಬೋಲ್ಡ್ ಆಗಿದ್ದಾರೆ. ಯುವ ಕ್ರಿಕೆಟಿಗ ಶುಭಮನ್ ಗಿಲ್ (Shubman Gill) ರಶ್ಮಿಕಾ ಅವರನ್ನು ಮದುವೆ ಆಗುವ ಪ್ರಸ್ತಾವನೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ಸಂದರ್ಶನದಲ್ಲಿ ಶುಭಮನ್‌ಗೆ ನಟಿಯ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: Rashmika Mandanna: ಅವಾರ್ಡ್ ಫಂಕ್ಷನ್‌ನಲ್ಲಿ ಶಾರ್ಟ್ ಡ್ರೆಸ್ ಧರಿಸಿದ್ದ ರಶ್ಮಿಕಾ ಮಂದಣ್ಣ: ಉರ್ಫಿ-2 ಎಂದ ನೆಟ್ಟಿಗರು!
ರಶ್ಮಿಕಾ ಮಂದಣ್ಣ ʻವಾರಿಸುʼ ಸಿನಿಮಾ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ದಳಪತಿ ವಿಜಯ್ ಎದುರು ಜೋಡಿಯಾಗಿದ್ದರು. ಸದ್ಯ ಪುಷ್ಪ-2ದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬರುವ ಆಕ್ಷನ್ ಡ್ರಾಮಾ ಅನಿಮಲ್‌ನಲ್ಲಿ ಅವರು ಜನಪ್ರಿಯ ಸ್ಟಾರ್ ರಣಬೀರ್ ಕಪೂರ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.