ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ಇದೀಗ ನೆಟ್ಟಿಗರು ಮತ್ತೊಮ್ಮೆ ನಟಿಯ ಬಗ್ಗೆ ಗರಂ ಆಗಿದ್ದಾರೆ. ರಶ್ಮಿಕಾ ಜಂಕ್ ಫುಡ್ ಬ್ರ್ಯಾಂಡ್‌ಗಳನ್ನು, ಚಿಕನ್ ಬರ್ಗರ್ ಹೀಗೆ ಹಲವು ಜಾಹಿರಾತುಗಳನ್ನು ನೀಡಿದ್ದಾರೆ. ಈ ಮೊದಲು ನಟಿ ತಾನು ಸಸ್ಯಹಾರಿ ಎಂದು ಹೇಳಿಕೊಂಡಿದ್ದರು. ಆದರೆ ಜಾಹಿರಾತಿಗಾಗಿ ನಟಿ ಮಾಂಸವನ್ನು ತಿಂದಿರುವ ಬಗ್ಗೆ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಇದೀಗ ಜನರಿಗೆ ನಟಿಯ ಹೇಳಿಕೆ ಇಷ್ಟ ಆಗಿಲ್ಲ. ʻನಮ್ಮನ್ನು ಮೂರ್ಖರನ್ನಾಗಿಸುವುದುʼ ನಿಲ್ಲಿಸಿ ಎಂದು ಜನರು ಕಾಮೆಂಟ್ ಮಾಡಿದ್ದಾರೆ. ಜನರ ಪ್ರತಿಕ್ರಿಯೆ ನೋಡಿದ ಜಾಹೀರಾತಿನ ಕಾಮೆಂಟ್ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸಿದೆ. ರಶ್ಮಿಕಾ ಮಂದಣ್ಣ ಆಗಾಗ ಟೀಕೆಗಳನ್ನು ಎದುರಿಸುತ್ತಾರೆ. ಇದೀಗ ಮತ್ತೆ ನಟಿಯ ವಿರುದ್ಧ ನೆಟ್ಟಿಗರು ಕೆರಳಿದ್ದಾರೆ. ʻಈ ಸೆಲೆಬ್ರಿಟಿಗಳು ನಿಜ ಜೀವನದಲ್ಲಿ ಮಾಂಸವನ್ನು ತಿನ್ನುವುದಿಲ್ಲ. ಸೆಲೆಬ್ರಿಟಿಗಳು ಹಣಕ್ಕಾಗಿ ಏನು ಬೇಕಾದರೂ ಮಾಡಬಹುದುʼʼ ಎಂದು ನಟಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸಿನಿಮಾ ತಾರೆಯರು ತಾವು ಪ್ರಚಾರ ಮಾಡುವ ವಸ್ತುಗಳನ್ನು ಬಳಸುವುದಿಲ್ಲ. ಅವರು ಕೇವಲ ಪ್ರಚಾರ ರಾಯಭಾರಿ ಮಾತ್ರ ಎಂದು ಕೆಲವರು ಬೆಂಬಲ ಸೂಚಿಸಿದ್ದಾರೆ. ಇಷ್ಟೆಲ್ಲಾ ಚರ್ಚೆ ಆಗ್ತಿದ್ದರು ನಟಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಇದನ್ನೂ ಓದಿ: Rashmika Mandanna: ಡೇಟಿಂಗ್ ವದಂತಿಗಳಿಗೆ ಕೊನೆಗೂ ಸ್ಪಷ್ಟನೆ ಕೊಟ್ಟ ಶ್ರೀನಿವಾಸ್ ಬೆಲ್ಲಂಕೊಂಡ
ರಶ್ಮಿಕಾ ಕೊನೆಯದಾಗಿ ವಿಜಯ್ ಅಭಿನಯದ ʻವಾರಿಸುʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂದೀಪ್ ರೆಡ್ಡಿ ವಂಗಾ ಅವರ ಹಿಂದಿ ಚಲನಚಿತ್ರ ʻಅನಿಮಲ್ʼ ಸಿನಿಮಾದಲ್ಲೂ ನಟಿಸಿದ್ದಾರೆ. ರಣಬೀರ್ ಕಪೂರ್ ಜತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶ್ರೀನಿವಾಸ್ ಬೆಲ್ಲಂಕೊಂಡ ʻಛತ್ರಪತಿʼ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿವಿ ವಿನಾಯಕ್ ನಿರ್ದೇಶಿಸಿದ್ದಾರೆ ಮತ್ತು ಎಸ್ಎಸ್ ರಾಜಮೌಳಿ ಅವರ ತಂದೆ ಮತ್ತು ಹಿರಿಯ ಬರಹಗಾರ ವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ. ಛತ್ರಪತಿ ಟ್ರೈಲರ್ ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ನುಶ್ರತ್ ಭರುಚ್ಚ ಕೂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ, ಪುಷ್ಪ 2, ಅನಿಮಲ್, ʻರೈನ್ಬೋʼ , ನಿತಿನ್ ಜತೆಗಿನ ಹೊಸ ಸಿನಿಮಾ, ವಿಕ್ಕಿ ಕೌಶಲ್ ಜತೆ ‘ಛವಾ’ ಸಿನಿಮಾಗಳಿವೆ.