Site icon Vistara News

Rashmika Mandanna | ಕ್ಯಾಮೆರಾ ಕಣ್ಣಿಗೆ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ರಶ್ಮಿಕಾ: ಗರಂ ಆದ್ರು ಫ್ಯಾನ್ಸ್‌!

Rashmika Mandanna

ಬೆಂಗಳೂರು: ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಸೌತ್‌ ಮತ್ತು ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಟ್‌ ಡ್ರೆಸ್‌ಗೆ ಸದಾ ಸುದ್ದಿಯಲ್ಲಿರುವ ಈ “ನ್ಯಾಷನಲ್‌ ಕ್ರಶ್‌ʼ ಮತ್ತೆ ಬಟ್ಟೆ ವಿಚಾರಕ್ಕೆ ಸಖತ್‌ ಸುದ್ದಿಯಾಗಿದ್ದಾರೆ. ʻಗುಡ್‌ ಬೈʼ ಚಿತ್ರದ ಟ್ರೈಲರ್‌ ಲಾಂಚ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ರಶ್ಮಿಕಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಇನ್ನೊಂದೆಡೆ, ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಈ ನಟಿಯ ಕಾಲೆಳೆದಿದ್ದಾರೆ.

ʻʻಯಾವ ಜಾಗದಲ್ಲಿ ಹೇಗಿರಬೇಕು ಎಂದು ಈ ನಟಿಗೆ ತಿಳಿದಿಲ್ಲʼʼ ಎಂದು ಕೆಲವರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ʻಗುಡ್‌ ಬೈʼ ಚಿತ್ರದ ಟ್ರೈಲರ್‌ ಲಾಂಚ್‌ನಲ್ಲಿ ಮಾಡರ್ನ್‌ ಉಡುಪಿನಲ್ಲಿ ರಶ್ಮಿಕಾ ಹೋಗಿದ್ದರು. ಹೆಚ್ಚು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದ ರಶ್ಮಿಕಾ, ಟ್ರೈಲರ್‌ ಲಾಂಚ್‌ ಕಾರ್ಯಕ್ರಮ ಮುಗಿಸಿ ಬಂದಿದ್ದರೆ ಅವರ ಫ್ಯಾನ್ಸ್‌ ಅವರಿಗೆ ಕಿವಿ ಹಿಂಡುತ್ತಿರಲಿಲ್ಲವೆನೋ! ಆದರೆ ಕಾರ್ಯಕ್ರಮ ಮುಗಿಸಿ ಗಣೇಶ ದೇಗುಲಕ್ಕೆ ದರ್ಶನ ಪಡೆಯಲು ಹೋಗಿರುವುದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ʻದೇವಾಲಯಕ್ಕೆ ಬರುವಾಗ ಈ ಅವತಾರಾ ಬೇಕಿತ್ತಾ?ʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ʻಗುಡ್ ಬೈʼ ಟ್ರೈಲರ್‌ ಹೈಲೆಟ್ಸ್‌!
ʻಗುಡ್ ಬೈʼ ಚಿತ್ರದಲ್ಲಿ ಅಮಿತಾಭ್ ಬಚ್ಚನ್‌ ಮತ್ತು ರಶ್ಮಿಕಾ ನಡುವಿನ ಫ್ಯಾಮಿಲಿ ಫೈಟ್​ ಹೈಲೈಟ್​ ಆಗಲಿದೆ. ಅಪ್ಪ – ಮಗಳ ಬಾಂಧವ್ಯ ನೋಡಬಹುದಾಗಿದೆ. ಜತೆಗೆ ಭಾವನಾತ್ಮಕ ಸನ್ನಿವೇಶಗಳನ್ನು ಇಲ್ಲಿ ಕಾಣಬಹುದಾಗಿದೆ. ಇದೊಂದು ಪರಿಪೂರ್ಣ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಹಾಸ್ಯನಟ ಸುನಿಲ್ ಗ್ರೋವರ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | ಡ್ರೆಸ್ ಕಾರಣಕ್ಕೆ ಮತ್ತೆ ಸುದ್ದಿಯಾದ ನಟಿ ರಶ್ಮಿಕಾ ಮಂದಣ್ಣ; ಹಾಟ್‌ ಫೋಟೊ ವೈರಲ್‌

ಈ ಚಿತ್ರವು ಅಕ್ಟೋಬರ್ ೭ರಂದು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮಿಳಿನ ʻವರಿಸುʼ ಚಿತ್ರದಲ್ಲಿ ದಳಪತಿ ವಿಜಯ್ ಜತೆ ನಾಯಕಿಯಾಗಿ ನಟಿಸಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ದಿಲ್ ರಾಜು ಅವರು ವೆಂಕಟೇಶ್ವರ ಕ್ರಿಯೇಷನ್ಸ್‌ನ ಪ್ರತಿಷ್ಠಿತ ಬ್ಯಾನರ್‌ನ ಬಲ ಇದೆ. ರಶ್ಮಿಕಾ ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ʻಮಿಷನ್ ಮಜ್ನುʼ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Goodbye Movie | ಬಹು ದೊಡ್ಡ ಕನಸು ಈಡೇರಿದೆ ಎಂದ ರಶ್ಮಿಕಾ ಮಂದಣ್ಣ: ಯಾರು ಆ ಇಬ್ಬರು ಐಕಾನ್‌ ಸ್ಟಾರ್ಸ್‌?

Exit mobile version