ಬೆಂಗಳೂರು: ಟಾಲಿವುಡ್‌ನ ಅತ್ಯಂತ ಬ್ಯುಸಿ ನಟಿಯರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಒಬ್ಬರು. ರಶ್ಮಿಕಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇತ್ತೀಚಿನ ಸುದ್ದಿ ಏನೆಂದರೆ, ಈ ನಟಿಯ ಮ್ಯಾನೇಜರ್ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಸ್ಟಾರ್ ನಟರ ಬಹುತೇಕ ಸಿನಿಮಾ ವ್ಯವಹಾರಗಳನ್ನು ಮ್ಯಾನೇಜರ್‌ಗಳೇ ನೋಡಿಕೊಳ್ಳುತ್ತಾರೆ. ಮ್ಯಾನೇಜರ್‌ಗಳು ಸಾಕಷ್ಟು ಬಾರಿ ಮೋಸ ಮಾಡಿರುವ ಉದಾಹರಣೆಗಳಿವೆ. ಇತ್ತೀಚೆಗೆ ತೆಲುಗು ನಟ ಸಾಯಿ ಧರಮ್ ತೇಜ್ ತಮ್ಮ ಮ್ಯಾನೇಜರ್‌ನನ್ನು ಬದಲಿಸಿದ್ದರು. ಇದೀಗ ರಶ್ಮಿಕಾ ಸರದಿ.
ಕೆಲ ವರ್ಷಗಳಿಂದ ರಶ್ಮಿಕಾ ಜತೆಗಿದ್ದ ಮ್ಯಾನೇಜರ್ ಈಗ ಆಕೆಗೆ ಮೋಸ ಮಾಡಿರುವುದಾಗಿ ಹೇಳಲಾಗುತ್ತಿದೆ. 80 ಲಕ್ಷ ರೂ. ತಪ್ಪು ಲೆಕ್ಕ ತೋರಿಸಿ ಆತ ಲಪಟಾಯಿಸಿರುವುದಾಗಿ ವರದಿಯಾಗಿದೆ. ಆತ ಮೋಸ ಮಾಡಿದ್ದು ತಿಳಿಯುತ್ತಿದ್ದಂತೆ ರಶ್ಮಿಕಾ ಕ್ರಮ ಕೈಗೊಂಡಿದ್ದಾರೆ. ಆತನನ್ನು ರಶ್ಮಿಕಾ ಕೆಲಸದಿಂದ ತೆಗೆದಿದ್ದಾರೆ. ಆದರೆ ಈ ವಿಚಾರದ ಬಗ್ಗೆ ನಟಿ ಎಲ್ಲಿಯೂ ಹೇಳಿಕೊಂಡಿಲ್ಲ. ಸಿನಿಮಾ ಉದ್ಯಮದಲ್ಲಿ ಈ ರೀತಿಯ ಪ್ರಕರಣಗಳು ಇದೇ ಮೊದಲೇನಲ್ಲ. ಇಂಥ ಎಷ್ಟೋ ಘಟನೆಗಳು ಸ್ಯಾಂಡಲ್‌ವುಡ್‌ನಲ್ಲಿಯೂ ನಡೆದ ಉದಾಹರಣೆಗಳಿವೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನುಳಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ಪುಷ್ಪ- 2’ ಹಾಗೂ ಹಿಂದಿಯ ‘ಅನಿಮಲ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ‘ರೈನ್‌ಬೋ’ ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಭೀಷ್ಮ’ ಕಾಂಬಿನೇಷನ್‌ನಲ್ಲಿ ಮತ್ತೆ ನಿತಿನ್ ಜೋಡಿಯಾಗಿ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Rashmika Mandanna: ಇದೆಲ್ಲ ಹೇಗೆ ಆಯಿತು.. ನಾನು ಇಲ್ಲಿಗೆ ಹೇಗೆ ಬಂದೆ ಅಂತಿದ್ದಾರೆ ನ್ಯಾಶನಲ್ ಕ್ರಶ್!
ರಣಬೀರ್ ಕಪೂರ್ ಜತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶ್ರೀನಿವಾಸ್ ಬೆಲ್ಲಂಕೊಂಡ ʻಛತ್ರಪತಿʼ ಚಿತ್ರದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಈ ಚಿತ್ರವನ್ನು ವಿವಿ ವಿನಾಯಕ್ ನಿರ್ದೇಶಿಸಲಿದ್ದಾರೆ ಮತ್ತು ಎಸ್ಎಸ್ ರಾಜಮೌಳಿ ಅವರ ತಂದೆ ಮತ್ತು ಹಿರಿಯ ಬರಹಗಾರ ವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ. ಚಿತ್ರದಲ್ಲಿ ನುಶ್ರತ್ ಭರುಚ ಕೂಡ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.